2 ಜವಳಿ ಅಂಗಡಿಗಳಿಗೆ ದುಷ್ಕರ್ಮಿಗಳಿಂದ ಬೆಂಕಿ, ಲಕ್ಷಾಂತರ ರು. ನಷ್ಟ
ಬೆಂಗಳೂರು : ನಗರದ ಚಿಕ್ಕಪೇಟೆಯಲ್ಲಿ 2 ಬಟ್ಟೆ ಅಂಗಡಿಗಳಿಗೆ ಕೆಲ ದುಷ್ಕರ್ಮಿಗಳು ಶನಿವಾರ ರಾತ್ರಿ ಬೆಂಕಿ ಹಚ್ಚಿದ್ದರಿಂದ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.
ಕಟ್ಟಡದ ಮೊದಲ ಅಂತಸ್ತಿನಲ್ಲಿರುವ ಪ್ರೇಂ ದೀಪ್ ಎಂಬುವರ ಮಹಾವೀರ್ ಬಟ್ಟೆ ಅಂಗಡಿ ಹಾಗೂ 2ನೇ ಅಂತಸ್ತಿನಲ್ಲಿರುವ ಶಾಂತಿಲಾಲ್ ಎಂಬುವರ ವಿಮಲ್ ದೀಪ್ ಬಟ್ಟೆ ಅಂಗಡಿಗಳಿಗೆ ರಾತ್ರಿ 11.30ರ ಸುಮಾರಿನಲ್ಲಿ ಪೈಪ್ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಚಿಕ್ಕ ಪೇಟೆ ಉಪ ವಿಭಾಗದ ಎಸಿಪಿ ಜಿ.ಎ. ಬಾವಾ ಹಾಗೂ ಇನ್ಸ್‌ಪೆಕ್ಟರ್ ಎ.ಬಿ. ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ತನಿಖೆ ಮುಂದುವರೆದಿದೆ.
ಪೆಟ್ರೋಲ್‌ಬಂಕ್ ದರೋಡೆ : ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಪೆಟ್ರೋಲ್ ಬಂಕೊಂದರಲ್ಲಿ ಭಾನುವಾರ ಮುಂಜಾನೆ 4.30 ಗಂಟೆಗೆ ಡಕಾಯಿತರ ತಂಡವೊಂದು 1.4 ಲಕ್ಷ ರುಪಾಯಿ ದೋಚಿ ಪರಾರಿಯಾಗಿದೆ.
ಸತ್ಯಂ ಪೆಟ್ರೋಲ್ ಬಂಕ್‌ಗೆ ಡೀಸಲ್ ಕೇಳುವ ನೆಪದಲ್ಲಿ ಬಂದ 6 ಜೀನ್ಸ್- ಟೀಷರ್ಟ್ ಧಾರಿಗಳು, ಕಬ್ಬಿಣದ ಸರಳುಗಳು, ಬಂದೂಕು ಮುಂತಾದ ಅಸ್ತ್ರಗಳಿಂದ ಬೆದರಿಸಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಕ್ಯಾಷಿಯರ್ ಗಂಗಪ್ಪ ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು, ಇತರೆ ಸಿಬ್ಬಂದಿಗಳಾದ ನಾಗರಾಜ್, ರಾಮಣ್ಣ ಎಂಬುವರನ್ನೂ ಥಳಿಸಿ, ಕೈಕಾಲು ಕಟ್ಟಿ, ಬಾಯಿಗೆ ಪೇಪರ್ ತುರುಕಿದರು. ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಿ, ನಂತರ ಪೆಟ್ಟಿಗೆ ಒಡೆದು 1.4 ಲಕ್ಷ ರುಪಾಯಿ ದೋಚಿ ಪರಾರಿಯಾದರು.
ಗಾಯಗೊಂಡಿರುವ ಗಂಗಪ್ಪ ಅವರನ್ನು ಟಿ.ದಾಸರಹಳ್ಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಡಕಾಯಿತರು ಸುಮಾರು 25ರಿಂದ 30 ವರ್ಷ ವಯಸ್ಸಿನವರಾಗಿದ್ದು, ಹಿಂದಿ ಮಾತನಾಡುತ್ತಿದ್ದರು ಎಂದು ಬಂಕ್ ಮಾಲಿಕ ಪ್ರಕಾಶ್ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications