ಗಂಗೂಲಿ ಶತಕ ವ್ಯರ್ಥ - ನ್ಯೂಜಿಲೆಂಡ್‌ಗೆ ಐಸಿಸಿ ನಾಕೌಟ್ ಕಪ್
ನೈರೋಬಿ : ಜಯಲಕ್ಷ್ಮೀ ಚಂಚಲೆಯಾಗಿದ್ದ ಪಂದ್ಯದಲ್ಲಿ ಕೊನೆಗೂ ಭಾರತ ವೀರೋಚಿತ ಸೋಲನುಭವಿಸಿತು. ಕೇವಲ 2 ಚೆಂಡುಗಳಷ್ಟೇ ಬಾಕಿ ಇದ್ದಾಗ 265ರನ್ನುಗಳ ಗೆಲುವಿನ ಗುರಿ ತಲುಪಿದ ನ್ಯೂಜಿಲೆಂಡ್ ಐಸಿಸಿ ನಾಕೌಟ್ ಟೂರ್ನಿಯ ಪ್ರಶಸ್ತಿಗೆ ಪಾತ್ರವಾಯಿತು.
ಆಜೇಯ ಶತಕ ಬಾರಿಸಿ, ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದ ಕ್ರಿಸ್ ಕೇನ್ಸ್ (102) ಕ್ರಿಸ್ ಹ್ಯಾರಿಸ್ ಜತೆ ಸಂಪಾದಿಸಿದ 100ರನ್‌ಗಳ ಜತೆಯಾಟ ಆಟದ ದಿಕ್ಕನ್ನೇ ಬದಲಿಸಿತು. ಒಂದು ಹಂತದಲ್ಲಿ ಅನಿಲ್ ಕುಂಬ್ಳೇ, ವೆಂಕಟೇಶ್ ಪ್ರಸಾದ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿ, ಆರಂಭದಲ್ಲೇ ವಿಕೆಟ್ ಕಳೆದುಕೊಂಡು ದುಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಕೇನ್ಸ್ ಹಾಗೂ ಹ್ಯಾರಿಸ್ ನವಚೇತನ ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಭಾರತವನ್ನು ನ್ಯೂಜಿಲೆಂಡ್ ಬ್ಯಾಂಟಿಗ್‌ಗೆ ಅಟ್ಟಿತು. ಆರಂಭ ಜೋಡಿಗಳಾದ ಸಚಿನ್ ಹಾಗೂ ಗಂಗೂಲಿ ಉತ್ತಮ ಆರಂಭವನ್ನೇ ನೀಡದರು. ಒಂದು ಹಂತದಲ್ಲಿ ಭಾರತ 300ರ ಗಡಿದಾಟುವ ಎಲ್ಲ ಸಾಧ್ಯತೆಗಳೂ ಕಂಡು ಬಂದವು. ಆದರೆ, ಸಚಿನ್ ಹಾಗೂ ದ್ರಾವಿಡ್ ರನೌಟ್ ಆದ ನಂತರ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ನ್ಯೂಜಿಲೆಂಡ್ ಭಾರತವನ್ನು 264ರನ್ನುಗಳಿಗೆ ಕಟ್ಟಿಹಾಕಿತು.
ಈ ಮಧ್ಯೆ ಎಂದಿನಂತೆ ತಮ್ಮ ಹೋರಾಟದ ಮನೋಭಾವ ಮೆರೆದ ಸೌರವ್ ಗಂಗೂಲಿ ಗಳಿಸದ ಶತಕ ಹಾಗೂ
ಸಚಿನ್ ತಂಡೂಲ್ಕರ್ ಅವರು ವಿಶ್ವದ ಅತಿ ಹೆಚ್ಚು ರನ್ನುಗಳ ದಾಖಲೆ ಮುರಿದದ್ದು ಮಾತ್ರ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿತು.
ಕನ್ನಡಿಗರಾದ ವೆಂಕಟೇಶ್ ಪ್ರಸಾದ್ ಮೂರು ಹಾಗೂ ಕುಂಬ್ಳೆ 2 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications