Get Updates
Get notified of breaking news, exclusive insights, and must-see stories!

ಮೊರ್ಯಾಕೋದಲ್ಲಿ ಕ್ರಿಕೆಟ್‌ ಬೆಳೆಸುತ್ತಿರುವ ಮೊಹಿಂದರ್‌

ದುಬೈ : ಕಳೆದ ನಾಲ್ಕೈದು ತಿಂಗಳಿಂದ ಕ್ರಿಕೆಟ್‌ಗೆ ಮೆತ್ತಿದ್ದ ಮಸಿಯನ್ನು ತೊಳೆಯುವಂತೆ ಭಾರತ ಕ್ರಿಕೆಟ್‌ ತಂಡ ಒಂದೆಡೆ ಆಡುತ್ತಿದ್ದರೆ, ಕ್ರಿಕೆಟ್‌ ಪ್ರೇಮಿಗಳ ಬಾಯಲ್ಲಿ ಕೇಳಿಬರುತ್ತಿರುವ ಶಾರ್ಜಾ ಸ್ಥಾನವನ್ನೇ ಮೊರ್ಯಾಕೋಗೂ ದೊರಕಿಸಿಕೊಡುವ ಯತ್ನಗಳು ನಡೆಯುತ್ತಿವೆ.

1983ರ ವಿಶ್ವ ಕಪ್‌ ಗೆದ್ದ ಭಾರತ ತಂಡದಲ್ಲಿ ಮಿಂಚಿದ್ದ ಆಲ್‌ರೌಂಡರ್‌ ಮೊಹಿಂದರ್‌ ಅಮರ್‌ನಾಥ್‌ ಇನ್ನೊಂದು ವರ್ಷ ಮೊರ್ಯಾಕೋದಲ್ಲಿ ಕ್ರಿಕೆಟ್‌ ಬೆಳೆಸುವ ಕಾಯಕದಲ್ಲಿ ತೊಡಗಲಿದ್ದಾರೆ.

ಶಾರ್ಜಾದ ನಂತರ ಆಫ್ರಿಕದ ಮೊರ್ಯಾಕೋವನ್ನು ಕ್ರಿಕೆಟ್‌ ತಾಣವನ್ನಾಗಿ ಪರಿವರ್ತಿಸಲು ಶಾರ್ಜಾ ಮೂಲದ ಕ್ರಿಕೆಟರ್ಸ್‌ ಬೆನಿಫಿಟ್‌ ಫಂಡ್‌ ಸೀರೀಸ್‌ (ಸಿ ಬಿ ಎಫ್‌ ಎಸ್‌) ನಿರ್ಧರಿಸಿದ್ದು, ಮೊಹಿಂದರ್‌ ಇದರ ಉದ್ದೇಶ ಈಡೇರಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

ಮೊಹಿಂದರ್‌ ಹಾಗೂ ಸುರಿಂದರ್‌ ಸಹೋದರರು ಒಂದು ವರ್ಷದಿಂದ ಸಿ ಬಿ ಎಫ್‌ ಎಸ್‌ ಜೊತೆ ಕ್ರಿಕೆಟ್‌ ಪ್ರಮೋಟರ್ಸ್‌ ಕೆಲಸ ಮಾಡುತ್ತಿದ್ದಾರೆ. ‘ಮೊಹಿಂದರ್‌ ನಮ್ಮ ಸಂಸ್ಥೆಗೆ ಸಂಯೋಜಕರಾಗಿ ಸೇರಿದ್ದಾರೆ. ಆಫ್ರಿಕದಲ್ಲಿ ಕ್ರಿಕೆಟ್‌ ಟೂರ್ನಿಗಳನ್ನು ಆಯೋಜಿಸಲು ಮುಖ್ಯ ಸಂಯೋಜನಾಧಿಕಾರಿ ಆಸಿಫ್‌ ಇಕ್ಬಾಲ್‌ ಜೊತೆಯಲ್ಲಿ ಅವರು ಕೆಲಸ ಮಾಡಲಿದ್ದಾರೆ. ಬರೋಡದ ಮಾಜಿ ಕ್ರಿಕೆಟಿಗ ಆಸಿಫ್‌ ಇಕ್ಬಾಲ್‌ ಪಿಚ್‌ ಸಿದ್ಧಪಡಿಸಲು ಸಹಾಯ ಮಾಡಲಿದ್ದಾರೆ’ ಎಂದು ಸಿ ಬಿ ಎಫ್‌ ಎಸ್‌ ಉಪಾಧ್ಯಕ್ಷ ಅಬ್ದುಲ್‌ ರೆಹ್ಮಾನ್‌ ಬಕ್ತರ್‌ ಹೇಳಿದ್ದಾರೆ.

ತಾವು ಮೊದಲು ಮೊರ್ಯಾಕೋಗೆ ಹೋದಾಗ ಅಲ್ಲಿನವರಿಗೆ ಕ್ರಿಕೆಟ್‌ ಅಂದರೆ ಏನೂ ಅಂತಲೇ ಗೊತ್ತಿರಲಿಲ್ಲ. ಆದರೆ ಈಗ ಸ್ಥಳೀಯ ಕ್ರಿಕೆಟ್‌ ಪಂದ್ಯಗಳನ್ನಾಡ್ತುತಿದ್ದಾರೆ. ಕ್ರಿಕೆಟ್‌ ಬಗೆಗೆ ಆಸಕ್ತಿ ಹೆಚ್ಚುತ್ತಿದೆ. ಕ್ಯಾಸಬ್ಲ್ಯಾಂಕ, ರಬತ್‌ ಮತ್ತು ಟ್ಯಾಂಗಿಯರ್ಸ್‌ ನಗರಗಳಲ್ಲಿ ಕ್ರಿಕೆಟ್‌ ವ್ಯಾಪಕವಾಗುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನಲ್ಲಿ ಮೊರ್ಯಾಕೋಗೆ ಸದಸ್ಯತ್ವ ಕಲ್ಪಿಸುವ ಯತ್ನ ಯಶಸ್ವಿಯಾಗುತ್ತಿದೆ ಎಂದು ಅಮರ್‌ನಾಥ್‌ ಸ್ಥಳೀಯ ಪತ್ರಿಕೆಯಾಂದಕ್ಕೆ ತಿಳಿಸಿದ್ದಾರೆ.

ಆಗ, ಪ್ರತಿ ವರ್ಷ ನಡೆಯುವ ಶಾರ್ಜಾ ಕಪ್‌ನಂತೆ ಮೊರ್ಯಾಕೋ ಕಪ್‌ ಕೂಡ ಶುರುವಾಗುತ್ತದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+