Get Updates
Get notified of breaking news, exclusive insights, and must-see stories!

ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ರಾಯಚೂರು ವಿದ್ಯುತ್‌ ಕೇಂದ್ರ

ಬೆಂಗಳೂರು : ಕಡಿಮೆ ಇಂಧನ ತೈಲ ಬಳಸಿ ಹೆಚ್ಚು ವಿದ್ಯುತ್‌ ಉತ್ಪಾದನೆ ಮಾಡಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ 1997ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ. ಕೈಗಾದ ಅಣುವಿದ್ಯುತ್‌ ಸ್ಥಾವರದ ಪ್ರಥಮ ಘಟಕ ವಿಶ್ವದಾಖಲೆ ನಿರ್ಮಿಸಿದ ದಿನವೇ ರಾಯಚೂರು ವಿದ್ಯುತ್‌ ಕೇಂದ್ರ ಈ ಪ್ರಶಸ್ತಿ ಸ್ವೀಕರಿಸಿದೆ.

ಪ್ರಶಸ್ತಿಯು 9.22 ಲಕ್ಷ ರೂಪಾಯಿಗಳನ್ನೊಳಗೊಂಡಿದ್ದು, ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜ್ಯೋತಿ ರಾಮಲಿಂಗಂ , ಕೇಂದ್ರ ವಿದ್ಯುತ್‌ ಸಚಿವ ಸುರೇಶ್‌ ಪ್ರಭು ಅವರಿಂದ ಬುಧವಾರ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ವಿದ್ಯುತ್‌ ಖಾತೆ ರಾಜ್ಯ ಸಚಿವೆ ಜಯಂತಿ ಮೆಹ್ತಾ ಉಪಸ್ಥಿತರಿದ್ದರು.

ಕೇಂದ್ರ ವಿದ್ಯುತ್‌ ಪ್ರಾಧಿಕಾರ, ಎರಡನೇ ಹಂತದ ವಿದ್ಯುತ್‌ ಉತ್ಪಾದನೆಯ ಸಮಯದಲ್ಲಿ ಕಡಿಮೆ ಇಂಧನ ಬಳಸಿ ಹೆಚ್ಚು ವಿದ್ಯುತ್‌ ಉತ್ಪಾದಿಸುವ ವಿದ್ಯುತ್‌ ಘಟಕಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ರಾಯಚೂರು ವಿದ್ಯುತ್‌ ಘಟಕವು 97-98 ರ ಸಾಲಿನಲ್ಲಿ 5, 538 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಿದ್ದು ಶೇ. 75 ರಷ್ಟು ಸಾಧನೆ ಮಾಡಿದ್ದರೆ, 1999-2000 ನೇ ಹೊತ್ತಿಗೆ 7, 762 ದಶಲಕ್ಷ ವಿದ್ಯುತ್‌ ಉತ್ಪಾದನೆ ಮಾಡಿ ಶೇ 82 ರಷ್ಟು ಸಾಧನೆ ಮಾಡಿದೆ.

ಪ್ರಶಸ್ತಿಯ ಹಣವನ್ನು ಸಿಬ್ಬಂದಿಗಳಿಗೆ ಉತ್ತೇಜಕ ಮೊತ್ತವಾಗಿ ಹಂಚಲಾಗುವುದು. ಸಾಧನೆಗೈದ ಸಿಬ್ಬಂದಿ ವರ್ಗವನ್ನು ಮುಖ್ಯ ಮಂತ್ರಿ ಎಸ್‌. ಎಂ. ಕೃಷ್ಣ ಮತ್ತು ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ರಾಮಲಿಂಗಂ ಅಭಿನಂದಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+