‘ನೆಡುಮಾರನ್, ಕಲ್ಯಾಣಿ ಹಾಗೂ ಸುಕುಮಾರನ್ ಸರ್ಕಾರದ ದೂತರಲ್ಲ’
ಚೆನ್ನೈ : ಗೋಪಾಲ್ ಜೊತೆ ವೀರಪ್ಪನ್ ಅಡಗುತಾಣಕ್ಕೆ ಸಂಧಾನಕ್ಕೆ ತೆರಳಿರುವ ತಮಿಳು ದೇಶೀ ಇಯಕ್ಕಂ ನಾಯಕ ನೆಡುಮಾರನ್ ಹಾಗೂ ಪಿಯುಸಿಎಲ್‌ನ ಪ್ರೊ.ಕಲ್ಯಾಣಿ ಮತ್ತು ಸುಕುಮಾರನ್ ಅವರನ್ನು ತಮಿಳುನಾಡು ಸರ್ಕಾರ ಕಳುಹಿಸಿಕೊಟ್ಟಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿ ಎಂ. ಕರುಣಾನಿಧಿ ಶುಕ್ರವಾರ ತಳ್ಳಿಹಾಕಿದ್ದಾರೆ.
ಸರ್ಕಾರದ ಅ-ಧಿ-ಕೃ-ತ ದೂತ ಗೋಪಾಲ್ ಮಾತ್ರ. ಉಳಿದ ಮೂವರನ್ನು ಸ್ವತಃ ವೀರಪ್ಪನ್ ಕರೆಸಿಕೊಂಡಿದ್ದಾನೆ. ರಾಜ್ಯದ ಕೆಲವು ವಿರೋಧ ಪಕ್ಷಗಳು, ನೆಡುಮಾರನ್ ಬಹಿರಂಗವಾಗಿ ನಿಷೇಧಿತ ಎಲ್‌ಟಿಟಿಇಯನ್ನು ಬೆಂಬಲಿಸುತ್ತಿರುವಾಗ ವೀರಪ್ಪನ್ ಜೊತೆ ಸಂಪರ್ಕ ಕಲ್ಪಿಸಿದಲ್ಲಿ ಎಲ್‌ಟಿಟಿಇ ಬಲವಾಗಿ ಬೇರು ಬಿಡುವುದಿಲ್ಲವೇ ಎಂದು ನನ್ನನ್ನು ಪ್ರಶ್ನಿಸಿವೆ. ವೀರಮಣಿ ನೇತೃತ್ವದ ದ್ರಾವಿಡರ್ ಕಳಗಮ್ ಪಕ್ಷದ ಉದಾಹರಣೆ ಕೊಟ್ಟ ಕರುಣಾನಿಧಿ, ಕೆಲವು ರಾಜಕೀಯ ಪಕ್ಷಗಳೇ ಎಲ್‌ಟಿಟಿಇಗೆ ಬೆಂಬಲ ಸೂಚಿಸುತ್ತಿರುವುದನ್ನು ಟೀಕಿಸುತ್ತಿರುವ ಪಕ್ಷಗಳು ಮರೆತಂತಿವೆ ಎಂದರು.
ನೆಡುಮಾರನ್ ಅವರನ್ನು ಗೋಪಾಲ್ ಜೊತೆ ತಮಿಳುನಾಡು ಸರ್ಕಾರವೇ ಕಳುಹಿಸಿಕೊಟ್ಟಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿರುವುದಾಗಿ ಆಂಗ್ಲ ಪತ್ರಿಕೆಯಾಂದು ಪ್ರಕಟಿಸಿತು. ಆ ಪತ್ರಿಕೆ ಓದಿದ ಅರ್ಧ ಗಂಟೆಯಲ್ಲೇ ಕೃಷ್ಣ ಅವರು ನನಗೆ ಫೋನಾಯಿಸಿ, ತಾವು ಹಾಗೆ ಹೇಳಿಲ್ಲವೆಂಬುದನ್ನು ದೃಢಪಡಿಸಿದರು ಎಂದು ಕ-ರು-ಣಾ-ನಿ-ಧಿ ಹೇಳಿದರು.
ಈಗ ನೆಡುಮಾರನ್ ಕಾಡಿಗೆ ಹೋಗಿರುವುಕ್ಕೆ ಗೋಪಾಲ್ ವೈಫಲ್ಯವೇ ಕಾರಣ ಎಂಬುದನ್ನು ಅಲ್ಲಗಳೆದ ಕರುಣಾನಿಧಿ, ಈಗಲೂ ಅವರು ಸರ್ಕಾರದ ಅಧಿಕೃತ ಸಂಧಾನಕಾರ. ಅವರು ಯಶಸ್ವಿಯಾಗುವ ನಂಬಿಕೆಯಿದೆ ಎಂದರು. ಈ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಅತಿ ಹೆಚ್ಚು ತಲೆತೂರಿಸುತ್ತಿದೆ ಅಲ್ಲವೇ ಎಂಬ ಪ್ರಶ್ನೆಗೆ, ಸುಪ್ರಿಂಕೋರ್ಟಿನ ತೀರ್ಪಿಗೆ ನಾನು ಬದ್ಧ, ಅದನ್ನು ತಲೆತೂರಿಕೆ ಎಂದು ಕರೆಯಲಾಗದು. ಅದು ಕೇಳಿರುವ ದಾಖಲೆಗಳನ್ನು ಕೊಟ್ಟಿರುವ ಅವಧಿಯಾಳಗೆ ಸಲ್ಲಿ-ಸು-ತ್ತೇ-ವೆ ಎಂದರು.
(ಯುಎನ್‌ಐ)
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications