ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐಟಿ ವೃತ್ತಿಪರರೇ ನ್ಯೂಜಿಲೆಂಡಿಗೆ ಬನ್ನಿ - ನಮಗೆ 2000 ಜನ ಬೇಕು’

By Staff
|
Google Oneindia Kannada News

ಬೆಂಗಳೂರು : ಅಮೆರಿಕದತ್ತಲೇ ಮುಖ ಮಾಡಿರುವ ಭಾರತದ ಐಟಿ ತಂತ್ರಜ್ಞರನ್ನು ಆಕರ್ಷಿಸಲು ಜರ್ಮನಿ ಗ್ರೀನ್‌ಕಾರ್ಡ್‌ ಆಮಿಷ ಒಡ್ಡಿತು. ಪ್ರಯೋಜನವಾಗಲಿಲ್ಲ. ಈಗ ನ್ಯೂಜಿಲೆಂಡ್‌ 2 ಸಾವಿರ ಮಾಹಿತಿ ತಂತ್ರಜ್ಞರನ್ನು ನೇಮಿಸಿಕೊಳ್ಳಲು ದೇಶಾದ್ಯಂತ ಪ್ರದರ್ಶನ ನಡೆಸಿದೆ, ಅದೂ ಅಮೆರಿಕ ಎಚ್‌-1 ಬಿ ವೀಸಾ ಕೊಡುವ ಕಾಲ ಹತ್ತಿರವಿರುವಾಗ. ಇದು ಎಷ್ಟರ ಮಟ್ಟಿಗೆ ಕ್ಲಿಕ್‌ ಆಗುತ್ತದೆ ಅನ್ನೋದನ್ನ ನಮ್ಮ ಐಟಿ ಧುರೀಣರೇ ಹೇಳಬೇಕು.

ಇತ್ತೀ-ಚೆ-ಗೆ ನ್ಯೂಜಿಲೆಂಡ್‌ ಇಮ್ಮೈಗ್ರೇಷನ್‌ ಸರ್ವಿಸ್‌ (ಎನ್‌ ಝಡ್‌ ಐ ಎಸ್‌) ಐಟಿ ನುರಿತರನ್ನು ಸೆಳೆಯಲು ನಗರದಲ್ಲಿ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿತ್ತು. ಪ್ರದರ್ಶನದ ನಂತರ ಸುದ್ದಿಗಾರರೊಡನೆ ಮಾತನಾಡಿದ ಎನ್‌ ಝಡ್‌ ಐ ಎಸ್‌ನ ಏಷ್ಯಾ ಹಾಗೂ ಮಿಡ್ಲ್‌ ಈಸ್ಟ್‌ ಪ್ರಾದೇಶಿಕ ನಿರ್ದೇಶಕ ಆ್ಯರನ್‌ ಬೇಕರ್‌, ನಾವು ಈ ವರ್ಷ 2000 ಐಟಿ ವೃತ್ತಿಪರರನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಮೂವ್‌ ಐಟಿ ಟು ನ್ಯೂಜಿಲೆಂಡ್‌ ಎಂಬ ವಿಚಾರ ಸಂಕಿರಣವನ್ನು ಹೈದರಾಬಾದ್‌ನಲ್ಲಿ ನಡೆಸಿ, ಈಗ ಬೆಂಗಳೂರಲ್ಲೂ ನಡೆಸುತ್ತಿದ್ದೇವೆ ಎಂದರು.

ನ್ಯೂಜಿಲೆಂಡಿನಲ್ಲೂ ಸುಮಾರು 1000 ಐಟಿ ಕಂಪನಿಗಳಿದ್ದು ಪ್ರತಿ ಕಂಪನಿಯಲ್ಲಿ 8ರಿಂದ 20 ತಜ್ಞ-ರು ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಸರ್ಕಾರ ವೃತ್ತಿಪರರನ್ನು ಪ್ರೋತ್ಸಾಹಿಸುವ ನೀತಿಗಳನ್ನು ರೂಪಿಸಿದೆ. ಲಕ್ಷಾಂತರ ರುಪಾಯಿ ಸಂಬಳ ಸಿಗಲಿದ್ದು , ಶಿಕ್ಷಕ ಮತ್ತಿತರ ವೃತ್ತಿ ಮಾಡುತ್ತಿರುವವರಿಗಿಂತ ದುಪ್ಪಟ್ಟಿದೆ. ಈವರೆಗೆ ನ್ಯೂಜಿಲೆಂಡಿಗೆ ವಲಸೆ ಬಂದಿರುವವರ ಸಂಖ್ಯೆ ಸರಾಸರಿ 38 ಸಾವಿರವಷ್ಟೆ. ಭಾರತದಲ್ಲಿ ಐಟಿ -ತ-ಜ್ಞ-ರು ಕಂಡಾಪಟ್ಟೆ ಸಿಗುತ್ತಾರೆಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇವೆ. ದೇಶಾದ್ಯಂತ ಇಂಥ ಪ್ರದರ್ಶನಗಳನ್ನು ನಡೆಸಿ, ಅವಕಾಶವನ್ನು ಮನವರಿಕೆ ಮಾಡಿಸಿ ನಮ್ಮ ದೇಶಕ್ಕೆ ಕೊಂಡೊಯ್ಯುತ್ತೇವೆ ಎಂದು ಬೇಕರ್‌ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X