ಗೋಪಾಲ್ ಜೊತೆಯಲ್ಲಿ ಹೋದ ಯಾರಿವರು ?
ಚೆನ್ನೈ : ವೀರಪ್ಪನ್ ಬಳಿಗೆ ಸಂಧಾನಕ್ಕಾಗಿ ತೆರಳಿರುವ ಸಂಧಾನಕಾರರ ತಂಡಕ್ಕೆ ಮತ್ತೊಬ್ಬ ಹೊಸ ಸದಸ್ಯರ ಸೇರ್ಪಡೆಯಾಗಿದ್ದು, ಚೆನ್ನೈ ಮೂಲದ ವಕೀಲ, ಎನ್. ಚಂದ್ರಶೇಖರನ್ ಗೋಪಾಲ್ ಬಳಗವನ್ನು ಈರೋಡ್ ಬಳಿ ಸೇರಿಕೊಂಡಿದ್ದಾರೆ ಎಂದು ಚೆನ್ನೈ ಮೂಲಗಳು ತಿಳಿಸಿವೆ.
ಐದನೇ ಬಾರಿ ವೀರಪ್ಪನ್ ಬಳಿ ತೆರಳಿರುವ ನಕ್ಕೀರನ್ ಗೋಪಾಲ್‌ರನ್ನು ಈ ಬಾರಿ ಪಿ. ನೆಡುಮಾರನ್, ಜಿ. ಸುಕುಮಾರನ್ ಮತ್ತು ಪ್ರೊ. ಪಿ. ಕಲ್ಯಾಣಿ ಅವರು ಸೇರಿಕೊಂಡಿರುವುದು ಈಗಾಗಲೇ ವರದಿಯಾಗಿತ್ತು . ಪ್ರಸ್ತುತ ಚಂದ್ರಶೇಖರನ್ ಅವರ ಸೇರ್ಪಡೆಯಾಂದಿಗೆ ಸಂಧಾನಕಾರರ ಗುಂಪು ಗೋಪಾಲ್ ಒಳಗೊಂಡಂತೆ ಐದಕ್ಕೇರಿದೆ. ಆದರೆ, ಚಂದ್ರಶೇಖರನ್ ಅವರು ಸಂಧಾನಕಾರರಾಗಿ ತೆರಳಿದ್ದಾರೆಯೇ ಅಥವಾ ವೀರಪ್ಪನ್ ಮತ್ತು ಗೋಪಾಲ್ ಬಳಗಕ್ಕೆ ಕಾನೂನು ವಿಷಯಗಳ ಕುರಿತು ವಿವರಿಸುವುದಕ್ಕೆ ತೆರಳಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಎಲ್-ಟಿ-ಟಿ-ಇ ಬೆಂಬ-ಲಿ-ಗ ಚಂ-ದ್ರಶೇ-ಖ-ರನ್
ಎಸ್. ಕೆ. ಮಹಾಜನ್ ನ್ಯಾಯಾಂಗ ವಿಚಾರಣೆಯಲ್ಲಿ ಎಲ್‌ಟಿಟಿಇ ಪರವಾಗಿ ವಾದಿಸಿದ್ದ ಚಂದ್ರಶೇಖರನ್ ಅವರನ್ನು ಗೋಪಾಲ್ ಬಳಗವನ್ನು ಸೇರಿಕೊಳ್ಳುವಂತೆ ಕಳೆದ ಅಕ್ಟೋಬರ್ 11 ರಂದು ಕೇಳಿಕೊಳ್ಳಲಾಗಿತ್ತು. ಮಧುರೈನವರಾದ ಚಂದ್ರಶೇಖರನ್ ಎಲ್‌ಟಿಟಿಇ ಬೆಂಬಲಿಗನೆಂದೇ ಗುರುತಿಸಿಕೊಂಡವರು. ರಾಜೀವ ಗಾಂಧಿ ಹತ್ಯೆ ವಿಚಾರಣೆಯ ಸಂದರ್ಭದಲ್ಲಿಯೂ ಎಲ್‌ಟಿಟಿಇ ಪರವಾಗಿ ಗುರುತಿಸಿಕೊಂಡಿದ್ದ ಅವರು ತಮಿಳ್ ದೇಸೀಯ ಇಯಕ್ಕಂ ನಾಯಕ ಪಿ. ನೆಡುಮಾರನ್ ಅವರ ವಿಶ್ವಾಸಿ ಎನ್ನಲಾಗಿದೆ.
ತಮಿ-ಳ-ರ ನಾಯ-ಕ ಪಿ.ನೆಡು-ಮಾ-ರ-ನ್
ಎಲ್-ಟಿ-ಟಿ-ಇ-ಯ ಕಟ್ಟಾ ಬೆಂಬ-ಲಿ-ಗ ಎಂದೇ -ಗು-ರ್ತಿ-ಸ-ಲ್ಪ-ಡು-ವ ನೆಡು-ಮಾ-ರ-ನ್ 80 ರ ದಶ-ಕ-ದ-ಲ್ಲಿ ತಮಿ-ಳು-ನಾ-ಡು -ರಾ-ಜ್ಯ ಕಾಂ-ಗ್ರೆ-ಸ್ ಅಧ್ಯಕ್ಷರಾ-ಗಿ-ದ್ದ-ರು. -ಪ-ಕ್ಷದ ಎಲ್-ಟಿ-ಟಿ-ಇ ವಿರು-ದ್ಧ--ದ ಧೋರ-ಣೆ-ಗೆ ಬೇಸ-ತ್ತು ಪಕ್ಷ-ದಿಂ-ದ ಹೊರ-ಬಂ-ದ-ರು. ಆನಂ-ತ-ರ ಯಾವ ರಾಜ-ಕೀ-ಯ ಪಕ್ಷ-ವನ್ನೂ ಸೇರ-ಲಿ-ಲ್ಲ .
ರಾಜ-ಕೀ-ಯ ಪಕ್ಷ-ಗ-ಳಿಂ-ದ ದೂರ-ವಿ-ದ್ದ-ರೂ, ಎಲ್ಲಾ ಪಕ್ಷ-ಗ-ಳಲ್ಲೂ ಇವ-ರ ಅಭಿ-ಮಾ-ನಿ-ಗ-ಳಿ-ದ್ದಾ-ರೆ. ತ-ಮಿ-ಳುನಾ-ಡಿ-ನ ಗೌ-ರ-ವಾ-ನ್ವಿ-ತ ನಾಯ-ಕ-ರ-ಲ್ಲಿ ಇವರೂ ಒಬ್ಬ-ರು. ಮಧು-ರೈ ಮೂಲ-ದ ನೆಡು-ಮಾ-ರ-ನ್ -ಪ್ರ-ಸ್ತು-ತ ತಮಿ-ಳ-ರ್ ದೇಶೀ-ಯ ಇಯ-ಕ್ಕಂ ಸಂಘ-ಟ-ನೆ-ಯ ನಾಯ-ಕ.
ಸುಮಾ-ರು ಹದಿ-ನೈ-ದು ದಿನ-ಗಳ ಹಿಂದೆ ನೆಡು-ಮಾ-ರ-ನ್ ಅವ-ರ-ನ್ನು ಧ್ವನಿ-ಸು-ರು-ಳಿ-ಯ ಮೂಲ-ಕ ವೀರ-ಪ್ಪ-ನ್ ಸಂ-ಪ-ರ್ಕಿ-ಸಿ-ದ್ದ . ಸರ್ಕಾ-ರ-ದ ಭಯೋ-ತ್ಪಾ-ದ-ಕ ನೀತಿ-ಯ-ನ್ನು ಪ್ರ-ತಿ-ಭ-ಟಿ-ಸು-ತ್ತಿ-ರುವು-ದ-ಕ್ಕೆ ಹಾಗೂ ಎಲ್-ಟಿ-ಟಿ-ಇ-ಯ-ನ್ನು ಬೆಂಬ-ಲಿ-ಸು-ತ್ತಿ-ರು-ವು-ದ-ಕ್ಕೆ ನೆಡು-ಮಾ-ರ-ನ್ ಅವ-ರ-ನ್ನು ವೀರ-ಪ್ಪ-ನ್ ಪ್ರಶಂ-ಸಿ-ದ್ದ. ನೀವು ಪ್ರಜಾ-ತಾಂ-ತ್ರಿ-ಕ ಚೌಕ-ಟ್ಟಿ-ನ-ಲ್ಲಿ ನಡೆಸು-ತ್ತಿ-ರು-ವ ಹೋರಾ-ಟ-ವ-ನ್ನೇ ನಾನು -ಆ-ಯು-ಧ ಹಿಡಿ-ದು ಮಾಡುತ್ತಿ-ದ್ದೇ-ನೆ ಎಂದು ಹೇಳಿ-ಕೊಂ-ಡಿ-ದ್ದ.
-ದ-ಲಿ-ತ-ರ ಮಿತ್ರ ಪ್ರೊಫೆ-ಸ-ರ್ ಪಿ.ಕಲ್ಯಾ-ಣಿ
-ದ-ಲಿತ-ರ ವಿರು-ದ್ಧ-ದ ಪೊಲೀ-ಸ್ ದಬ್ಬಾ-ಳಿ-ಕೆ-ಯ ವಿರೋ-ಧಿ ಆಂದೋ-ಲ-ನ-ದ-ಲ್ಲಿ ಪ್ರೊಫೆ-ಸ-ರ್ ಕಲ್ಯಾ-ಣಿ ಅವ-ರ-ದ್ದು ಮೊದ-ಲ ಹೆಸ-ರು. ಜನಿ-ಸಿ-ದ್ದು ತಿರು-ನೆ-ಲ್-ವೇ-ರಿ ಜಿಲ್ಲೆ-ಯ ಸೌಂ-ದ-ರ-ಪಾಂ-ಡಿ-ಯ-ಪು-ರಂ-ನ-ಲ್ಲಿ . ವಿಳ್ಳು-ಪು-ರಂ-ನ ಕಲಾ ಕಾಲೇ-ಜಿ-ನ-ಲ್ಲಿ ಪ್ರಾಧ್ಯಾ-ಪ-ಕ-ರಾ-ಗಿ ಸೇವೆ ಸಲ್ಲಿ-ಸುತ್ತಿ-ದ್ದು , -ಪಿ-ಯು-ಸಿ-ಎ-ಲ್-ನ ನಾಗ-ರಿ-ಕ ಹಕ್ಕು-ಗ-ಳ ಹೋರಾ-ಟ-ದಲ್ಲಿ ತ-ಮ್ಮ-ನ್ನು ತೊಡ-ಗಿ-ಸಿ-ಕೊಂ-ಡಿದ್ದಾ-ರೆ.
-ಪಿ-ಯು-ಸಿ-ಎ-ಲ್ ಪುದು-ವೈ ಸುಕು-ಮಾ-ರ-ನ್
ಪಾಂಡಿ-ಚೆ-ರಿ ಪಿಯು-ಸಿ-ಎ-ಲ್- ಘಟ-ಕ-ದ ಕಾರ್ಯ-ದ-ರ್ಶಿ. ದಲಿ-ತ-ರ ವಿರು-ದ್ಧ ಪೋಲೀ-ಸ-ರ ದಬ್ಬಾ-ಳಿ-ಕೆ-ಯ ವಿರೋ-ಧಿ ಚಳ-ವ-ಳಿ-ಯ-ಲ್ಲಿ ದುಡಿ-ದಿ-ದ್ದಾ-ರೆ. ಕೊಡೈ-ಕೆ-ನಾ-ಲ್ ಟಿವಿ ಕೇಂದ್ರ -ಸ್ಫೋ-ಟದ ಪ್ರಕ-ರ-ಣ-ದ-ಲ್ಲಿ ಸುಕು-ಮಾರ-ನ್ ಪೊಲೀ-ಸ-ರ ಸಂಶ-ಯ-ಕ್ಕೊ-ಳ-ಗಾ-ಗಿ-ದ್ದ-ರು. ಇದೇ ಪ್ರಕ-ರ-ಣ-ದ-ಲ್ಲಿ ಪ್ರಸ್ತು-ತ ವೀರ-ಪ್ಪ-ನ್ ಜೊತೆ-ಗಿ-ರು-ವ ತಮಿ-ಳು ಉಗ್ರ ಮಾರ-ನ್ ಭಾಗಿ-ಯಾ-ಗಿ-ದ್ದ ಎನ್ನು-ವ ಅಂ-ಶ ಗಮ-ನಾ-ರ್ಹ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications