Get Updates
Get notified of breaking news, exclusive insights, and must-see stories!

ಅಧಿಕಾರಕ್ಕಾಗಿ ಪಕ್ಷಗಳ ವಿಲೀನ ಕ್ಷುಲ್ಲಕ ರಾಜಕೀಯ : ಹೆಗಡೆ

ಬೆಂಗಳೂರು : ಅಧಿಕಾರಕ್ಕಾಗಿ ಮತ್ತೆ ಒಂದುಗೂಡುವುದು ಕ್ಷುಲ್ಲಕ ರಾಜಕೀಯ ಎಂದು ಹೇಳುವ ಮೂಲಕ ಜನತಾದಳ (ಯು) ನಾಯಕ ರಾಮಕೃಷ್ಣ ಹೆಗಡೆ ಅವರು, ದಳ ಬಣಗಳು ಒಂದುಗೂಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಇತ್ತ ಜೆ.ಎಚ್‌. ಪಟೇಲ್‌ ಅವರು, ಎರಡೂ ಬಣಗಳನ್ನು ಒಂದುಗೂಡಿಸಲು ಯತ್ನಿಸುತ್ತಿರುವಾಗ ಹೆಗಡೆಯವರ ಈ ಬಿರು ನುಡಿಗಳು ದಳ ಬಣಗಳ ವಿಲೀನದ ಕನಸು ನುಚ್ಚು ನೂರು ಮಾಡಿವೆ.

ಗುರುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದಲ್ಲಿ ಸಂಯುಕ್ತ ಜನತಾದಳ ವಿಲೀನವಾಗುವ ಸಾಧ್ಯತೆಯನ್ನು ಅಲ್ಲಗಳೆದರು. ಸಮಾಜದ ಒಳಿತಿಗಾಗಿ ಅಥವಾ ಜನತೆಯ ಹಿತಾಸಕ್ತಿಯ ರಕ್ಷಣೆಗೆ ಪಕ್ಷ ಒಂದಾಗುವುದರಲ್ಲಿ ಅರ್ಥವಿದೆ ಆದರೆ, ಸ್ವಾರ್ಥಕ್ಕಾಗಿ - ಅಧಿಕಾರಕ್ಕಾಗಿ ವಿಲೀನವಾಗುವುದು ಹೇಯ ರಾಜಕೀಯ ಎಂದರು.

ಎರಡೂ ಪಕ್ಷಗಳು ಒಂದಾಗುವ ಸಂದರ್ಭ ಈಗ ಬಂದಿಲ್ಲ. ಜನತಾದಳವನ್ನು ಕಟ್ಟಿ ಬೆಳೆಸಲು ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದನ್ನು ಕೆಲವರು ಒಡೆದರು ಎಂದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಪಕ್ಷ ಕಟ್ಟಲು ಪಟ್ಟ ಶ್ರಮವನ್ನು ವಿವರಿಸಿದರು.

ಜನತಾದಳವನ್ನು ಆಗ ಒಡೆಯಲು ಯಾವುದೇ ಕಾರಣ ಇರಲಿಲ್ಲ. ಸ್ವಪ್ರತಿಷ್ಠೆಗಾಗಿ ಜಾತ್ಯತೀತ ಜನತಾದಳದ ಕೆಲವು ನಾಯಕರು ಈ ಕಾರ್ಯ ಮಾಡಿದರು ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ಇಂದು ಜಾತ್ಯತೀತ ಜನತಾದಳದಲ್ಲಿರುವ ಶೇ.90 ಕಾರ್ಯಕರ್ತರು ಅವಿಭಜಿತ ಜನತಾದಳಕ್ಕೆ ಸೇರಿದವರಾಗಿದ್ದು, ಅವರು ತಮ್ಮ ಪಕ್ಷಕ್ಕೆ ಬರುವುದಾದರೆ, ಪಕ್ಷದ ಬಾಗಿಲು ತೆರೆದಿರುತ್ತದೆ ಎಂದರು.

ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಪಕ್ಷ ಎನ್‌.ಡಿ.ಎ. ಯಾಂದಿಗೆ ಸಖ್ಯ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಎನ್‌ಡಿಎ ಸಂಬಂಧ ಕಡಿದುಕೊಂಡು ಬರುವಂತೆ ಜಾತ್ಯತೀತ ಜನತಾದಳ ನಾಯಕರು ಮಾಡುತ್ತಿರುವ ಸಲಹೆಗೆ ಉತ್ತರಿಸಿದ ಹೆಗಡೆ, ಅವರ ನಿಲುವು ಹಾಗಿದ್ದಲ್ಲಿ ವಿಲೀನದ ಬಗ್ಗೆ ಅವರು ಮಾತನಾಡುವ ಅಗತ್ಯವೇ ಇಲ್ಲ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+