Get Updates
Get notified of breaking news, exclusive insights, and must-see stories!

ಶಸ್ತ್ರಚಿಕಿತ್ಸೆಗಾಗಿ ಇಂದು ಮುಂಬಯಿಗೆ ಪ್ರಧಾನಿ ವಾಜಪೇಯಿವಿಶೇಷ ಉಪಕರಣಗಳೊಂದಿಗೆ ಸಜ್ಜಾದ ಡಾ. ಚಿತ್ತರಂಜನ್‌ ತಂಡ

ಮುಂಬಯಿ : ಕಳೆದ ಕೆಲವು ದಿನಗಳಿಂದ ಮಂಡಿ ನೋವಿನಿಂದ ನರಳುತ್ತಿರುವ ಪ್ರಧಾನಿ ವಾಜಪೇಯಿ ಅವರು, ಶಸ್ತ್ರ ಚಿಕಿತ್ಸೆಗಾಗಿ ಸೋಮವಾರ ಮುಂಬಯಿಗೆ ಆಗಮಿಸುತ್ತಿದ್ದಾರೆ.

ಮಂಡಿ ನೋವಿನ ನಡುವೆಯೂ ಯಶಸ್ವಿ ಅಮೆರಿಕಾ ಪ್ರವಾಸ ಪೂರೈಸಿದ ಪ್ರಧಾನಿಯವರು, ಇಲ್ಲಿನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ದಕ್ಷಿಣ ಮುಂಬೈನಲ್ಲಿರುವ ಈ ಸುಸಜ್ಜಿತ ಆಸ್ಪತ್ರೆ ಪ್ರಧಾನಿಯವರ ಶಸ್ತ್ರ ಚಿಕಿತ್ಸೆಗಾಗಿ ಸಜ್ಜಾಗಿದೆ. ಮುಂಬಯಿಗೆ ಆಗಮಿಸುವ ಅವರು ಕೆಲಕಾಲ ರಾಜಭವನದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ವಾಜಪೇಯಿ ಅವರಿಗೆ ಮಂಡಿಯ ಶಸ್ತ್ರ ಚಿಕಿತ್ಸೆ ಮಾಡುವ ಸಲುವಾಗಿಯೇ ಅಮೆರಿಕೆಯಿಂದ ಖ್ಯಾತ ಮೂಳೆ ತಜ್ಞ ಡಾ. ಚಿತ್ತರಂಜನ್‌ ರಣಾವತ್‌ ಸೋಮವಾರ ಮುಂಬಯಿಗೆ ಆಗಮಿಸುತ್ತಿದ್ದಾರೆ. ಪ್ರಧಾನ ಮಂತ್ರಿಗಳ ವಿಶೇಷ ರಕ್ಷಣಾ ಪಡೆ ಈಗಾಗಲೇ ಆಸ್ಪತ್ರೆಯನ್ನು ಸುತ್ತುವರಿದಿದೆ. ಡಾ. ಚಿತ್ತರಂಜನ್‌ ಅವರು, ಶಸ್ತ್ರ ಚಿಕಿತ್ಸೆಗಾಗಿ ತಮ್ಮದೇ ಆದ ವಿಶೇಷ ವೈದ್ಯರ ತಂಡ ಹಾಗೂ ವಿಶೇಷ ಹಾಗೂ ಅತ್ಯಾಧುನಿಕ ಉಪಕರಣಗಳನ್ನೂ ತರುತ್ತಿದ್ದಾರೆ.

ಮಂಗಳವಾರ ವಾಜಪೇಯಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆಸ್ಪತ್ರೆಯ ಆವರಣದೊಳಗೆ ಪತ್ರಿಕಾಗೋಷ್ಠಿ ನಡೆಸಲೂ ವ್ಯವಸ್ಥೆ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+