Get Updates
Get notified of breaking news, exclusive insights, and must-see stories!

ಹೈದರಾಬಾದ್‌ನಲ್ಲಿ ಎಚ್‌ಎಸ್‌ಬಿಸಿ ಜಾಗತಿಕ ಸೇವಾ ಕೇಂದ್ರ

ಹೈದರಾಬಾದ್‌ : ಹಾಂಗ್‌ಕಾಂಗ್‌ ಅಂಡ್‌ ಶಾಂಘೖ ಬ್ಯಾಂಕಿಂಗ್‌ ಕಾರ್ಪೋರೇಷನ್‌ (ಎಚ್‌ಎಸ್‌ಬಿಸಿ) ತನ್ನ ಎರಡನೇ ಜಾಗತಿಕ ವಿದ್ಯುನ್ಮಾನ ಪರಿಷ್ಕರಣ ( ಎಲೆಕ್ಟ್ರಾನಿಕ್‌ ಪ್ರೊಸೆಸಿಂಗ್‌) ಸೇವಾ ಕೇಂದ್ರವನ್ನು ಭಾರತದಲ್ಲಿ ತೆರೆದಿದೆ. ಭಾರತದ ಈ ಕೇಂದ್ರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಸೋಮವಾರ ಹೈದರಾಬಾದ್‌ನಲ್ಲಿ ಉದ್ಘಾಟಿಸಿದರು.

ಭಾರತದಲ್ಲಿ ಆರಂಭಗೊಂಡ ಈ ಪ್ರಪ್ರಥಮ ಕೇಂದ್ರವನ್ನು ಹೈಟೆಕ್‌ ಸಿಟಿಯಲ್ಲಿ ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಎಸ್‌ಬಿಸಿಯ ಚೀಫ್‌ ಎಕ್ಸಿಕ್ಯೂಟಿವ್‌ ಕೀತ್‌ ವಿಟ್ಸನ್‌ ಅವರು, ಬ್ಯಾಂಕ್‌ ವಿಶ್ವದಲ್ಲಿ ಕೇವಲ ಎರಡು ಸೇವಾ ಕೇಂದ್ರಗಳನ್ನು ಹೊಂದಿದ್ದು, ಎರಡನೇ ಕೇಂದ್ರವನ್ನು ಇಲ್ಲಿ ಆರಂಭಿಸಿದೆ, ಮೊದಲ ಸೇವಾ ಕೇಂದ್ರ ಚೀನಾದಲ್ಲಿದೆ ಎಂದು ವಿವರಿಸಿದರು.

ಆರಂಭಿಕವಾಗಿ ಪ್ರಥಮ ಹಂತದಲ್ಲಿ ಬ್ಯಾಂಕ್‌ನಲ್ಲಿ ಮೂರು ಮಿಲಿಯನ್‌ ಡಾಲರ್‌ ಹಣ ತೊಡಗಿಸಲಾಗಿದ್ದು, ಉತ್ತರರೋತ್ತರದಲ್ಲಿ ಬ್ಯಾಂಕ್‌ ಕೇಂದ್ರವನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ಅವರು ಹೇಳಿದರು. ಈ ಕೇಂದ್ರದಲ್ಲಿ ಸುಮಾರು 200 ಮಾಹಿತಿ ತಂತ್ರಜ್ಞಾನ (ಐಟಿ) ಪರಿಣತರು ಸೇವೆ ಸಲ್ಲಿಸಲಿದ್ದು, ದಿನನಿತ್ಯವೂ 10 ಸಾವಿರ ವಹಿವಾಟು ನಡೆಯಲಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಹೈದರಾಬಾದ್‌ನಲ್ಲಿರುವ ಈ ಕೇಂದ್ರವು ಬ್ರಿಟನ್‌, ಮಿಡ್ಲ್‌ ಈಸ್ಟ್‌, ಏಷ್ಯಾ ಪೆಸಿಫಿಕ್‌ ಮತ್ತು ಅಮೆರಿಕ ಎಚ್‌ಎಸ್‌ಬಿಸಿಯ ಅಂಗಸಂಸ್ಥೆಗಳ ಕಚೇರಿಯ ಕಾರ್ಯವನ್ನೂ ನೋಡಿಕೊಳ್ಳಲಿದೆ. ಚೀನಾದಲ್ಲಿರುವ ಕೇಂದ್ರವು ಹಾಂಕಾಂಗ್‌ ಹಾಗೂ ಬ್ರಿಟನ್‌ನ ವಹಿವಾಟನ್ನು ಮಾತ್ರ ನಿರ್ವಹಿಸುತ್ತಿದೆ.

ಹೈದರಾಬಾದ್‌ನಲ್ಲಿ ಮಾಹಿತಿ ತಂತ್ರಜ್ಞಾನದ ಕುಶಲಿಗಳ ಲಭ್ಯತೆ ಹಾಗೂ ಇಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಇರುವ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಸೇವಾಕೇಂದ್ರವನ್ನು ತೆರೆಯಲಾಯಿತು ಎಂದು ವಿಟ್ಸನ್‌ ಹೇಳಿದರು. ತಮ್ಮ ಸಂಸ್ಥೆಯು ವಿಮಾ ವಲಯಕ್ಕೂ ಕಾಲಿಡುವ ಬಗ್ಗೆ ಚಿಂತಿಸುತ್ತಿದೆ ಎಂದೂ ಹೇಳಿದರು. (ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+