Get Updates
Get notified of breaking news, exclusive insights, and must-see stories!

ತಾನ್ಸಿ ಭೂ ಹಗರಣ : ಜಯಾ, ಶಶಿಕಲಾಗೆ ಮೂರು ವರ್ಷ ಕಠಿಣ ಶಿಕ್ಷೆ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ, ಅಖಿಲಭಾರತ ಅಣ್ಣಾಡಿಎಂಕೆ ಪ್ರ ಧಾನ ಕಾರ್ಯದರ್ಶಿ ಜೆ. ಜಯಲಲಿತಾ ಹಾಗೂ ಅವರ ಸಮೀಪವರ್ತಿ ಶಶಿಕಲಾ ಸೇರಿದಂತೆ ತಾನ್ಸಿ ಭೂಹಗರಣದ ಐವರು ಆರೋಪಿಗಳಿಗೆ ವಿಶೇಷ ನ್ಯಾಯಾಲಯ 5 ವರ್ಷಗಳ ಕಠಿಣ ಸೆರೆವಾಸ ವಿಧಿಸಿದೆ.

ಸೋಮವಾರ ತೀರ್ಪು ನೀಡಿದ ಮೂರನೇ ವಿಶೇಷ ನ್ಯಾಯಮೂರ್ತಿ ಪಿ. ಅಂಬುಝಗನ್‌, ಪ್ರತಿ ಅಪರಾಧಿಗಳಿಗೆ ತಲಾ 10 ಸಾವಿರ ರುಪಾಯಿ ದಂಡ ವಿಧಿಸಿದ್ದಾರೆ. ತಮಿಳುನಾಡಿನ ಮಾಜಿ ಕೈಗಾರಿಕಾ ಸಚಿವ ಮಹಮದ್‌ ಆಸಿಫ್‌, ತಾನ್ಸಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್‌. ಶ್ರೀನಿವಾಸನ್‌ ಹಾಗೂ ಐಎಎಸ್‌ ಅಧಿಕಾರಿ ಕರ್ಪೂರ ಸುಂದರಪಾಂಡಿಯನ್‌ ಮತ್ತು ರೆವಿನ್ಯೂ ಇಲಾಖೆಯ ಮಾಜಿ ವಿಶೇಷ ಜಿಲ್ಲಾಧಿಕಾರಿ ಎಸ್‌ ನಾಗರಾಜನ್‌ ದಂಡ ತೆರಬೇಕೆಂದು ಕೋರ್ಟ್‌ ಆದೇಶಿಸಿದೆ.

ಇವರಲ್ಲಿ ಮಾಜಿ ಸಚಿವ ಆಸಿಫ್‌ ಅವರನ್ನು ಆರೋಪಮುಕ್ತಗೊಳಿಸಿರುವ ನ್ಯಾಯಮೂರ್ತಿಗಳು ಜಯಾ ಹಾಗೂ ಶಶಿಕಲಾ ಅವರ ಜೊತೆ ಇತರ ಮೂವರಿಗೆ ಶಿಕ್ಷೆ ವಿಧಿಸಿದ್ದಾರೆ.

ಜಯಲಲಿತಾ ಮತ್ತು ಶಶಿಕಲಾ ಅವರ ಒಡೆತನವಿದ್ದ ಸಂಸ್ಥೆಗೆ ತಾನ್ಸಿ ಸರಕಾರಿ ಭೂಮಿಯನ್ನು ಕಡೆಮೆ ಬೆಲೆಗೆ ಮಾರಿದ್ದರಿಂದ ಸರಕಾರಕ್ಕೆ ಸುಮಾರು 41. 6 ಕೋಟಿ ರುಪಾಯಿ ನಷ್ಟ ಸಂಭವಿಸಿತ್ತು.

ಜಾಮೀನು : ಜಯಲಲಿತಾ ಅವರಿಗೆ ಜಾಮೀನು ಸಿಕ್ಕಿದ್ದು, ನವೆಂಬರ್‌ 7ರ ಒಳಗಾಗಿ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಹೇಳಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+