ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ದರೋಡೆಕೋರರ ಬಂಧನ, 6 ಲಕ್ಷ ಬೆಲೆಯ ವಸ್ತುಗಳ ವಶ

By Staff
|
Google Oneindia Kannada News

ಬೆಂಗಳೂರು : ಜೆನ್‌ ಕಾರ್‌ ಉಪಯೋಗಿಸಿ ನಗರದಲ್ಲಿ ದರೋಡೆ ಮಾಡುತ್ತಿದ್ದ ನಸ್ರು ತಂಡದ 3 ಮಂದಿಯನ್ನು ಚಿಕ್ಕಪೇಟೆ ಪೊಲೀಸರು ಬಂಧಿಸಿದ್ದು, 13 ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಲಕ್ಷ ರುಪಾಯಿ ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅರಕೆರೆಯ ಜಬೀ (24), ಮಂಗಮ್ಮನ ಪಾಳ್ಯದ ಮುನಾವರ್‌ ಪಾಷ ಉರುಫ್‌ ಮುನ್ನಾ (26) ಹಾಗೂ ಆಸಿಫ್‌ ಅಲಿಯಾಸ್‌ ಸೈಯದ್‌ ಆಸಿಫ್‌ ಬಂದಿತರು. ಇವರಿಂದ 1 ರಿವಾಲ್ವರ್‌, ಮಾರುತಿ- 800 ಕಾರ್‌, ಯಮಾಹ ಆರ್‌ಎಕ್ಸ್‌ 100 ಮೊಬೈಕ್‌, ಗುಂಡುಗಳು, ಒಡವೆಗಳು, ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದೇ ತಂಡದ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಮುಂದುವರೆಸಿದ್ದಾರೆ. ಆರೋಪಿಗಳು ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ವಿವಿಧ ಪೊಲೀಸ್‌ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X