Get Updates
Get notified of breaking news, exclusive insights, and must-see stories!

ಪುಟಿನ್‌ ಭೇಟಿಯಲ್ಲಿ ಭಾರತ- ರಷ್ಯಾ ದಾಖಲೆ ಒಡಂಬಡಿಕೆ

ನವದೆಹಲಿ : ಭಾರತ ಮತ್ತು ರಷ್ಯಾ 17 ಒಡಂಬಡಿಕೆಗಳಿಗೆ ಸಹಿ ಮಾಡಿದ್ದು, ಈ ಹಿಂದೆ ಯಾವುದೇ ರಾಷ್ಟ್ರದ ಅಧ್ಯಕ್ಷರ ಭೇಟಿಯಲ್ಲಿ ಇಷ್ಟೊಂದು ಒಡಂಬಡಿಕೆಗಳಾಗಿರಲಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬುಧವಾರ ಈ ದಾಖಲೆಗೆ ಕಾರಣರಾಗಿದ್ದಾರೆ.

ವಿವಿಧ ಕ್ಷೇತ್ರಗಳ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ಮಂಗಳವಾರ 12 ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಿದ್ದವು. ಬುಧವಾರ ಒಡಂಬಡಿಕೆಗಳ ಯಾದಿಗೆ ಇನ್ನೂ 5 ಹೊಸ ಒಪ್ಪಂದಗಳು ಸೇರಿದವು. ಎಲ್ಲಾ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿದ ನಂತರ ವಿಶ್ವದ ಅದ್ಭುತ ಆಗ್ರಾದ ತಾಜ್‌ಮಹಲ್‌ ನೋಡಲು ಪುಟಿನ್‌ ತೆರಳಿದರು.

ರಕ್ಷಣಾ ತಂತ್ರಜ್ಞಾನ ಕುರಿತಂತೆ ಭಾರತ ಹಾಗೂ ರಷ್ಯಾ 300 ಕೋಟಿ ಡಾಲರ್‌ಗಳ ವಹಿವಾಟಿನ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಡಂಬಡಿಕೆಯಿಂದ ರಷ್ಯಾದ 310ಟಿ- 90 ಟ್ಯಾಂಕ್‌ಗಳು, ಕೆರಿಯರ್‌ ಅಡ್ಮಿರಲ್‌ ಗೋರ್‌ಶ್ಕೋವ್‌ ವಿಮಾನ ಭಾರತಕ್ಕೆ ದೊರೆಯಲಿವೆ. ಜೊತೆಗೆ 140ಎಸ್‌ಯು- 30 ಕಾಂಬ್ಯಾಟ್‌ ವಿಮಾನದ ಉತ್ಪಾದನೆಗೆ ಪರವಾನಗಿಯೂ ದೊರೆತಿದೆ. ಉಳಿದಂತೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಅಂಚೆ ಸಂವಹನಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.

ಕಾಶ್ಮೀರ ಸಮಸ್ಯೆ- ಸಂಧಾನವೇ ಸೂಕ್ತ : ಇದಕ್ಕೂ ಮುನ್ನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್‌, ಜಮ್ಮು- ಕಾಶ್ಮೀರ ವಿಷಯದಲ್ಲಿ ವಿದೇಶೀ ಹಸ್ತಕ್ಷೇಪ ಕೂಡದು ಎಂಬ ಭಾರತದ ನಿಲುವನ್ನು ಸಮರ್ಥಿಸಿದರು. ಹದಗೆಟ್ಟಿರುವ ಭಾರತ- ಪಾಕಿಸ್ತಾನಗಳ ಸಂಬಂಧ ಸುಧಾರಣೆಗೆ ಸಂಧಾನವೇ ಸೂಕ್ತ ಮಾರ್ಗ ಎಂದು ಹೇಳಿದರು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+