ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿ-ಮ್ಮ ಮನೆಗೆ ನಲ್ವ-ತ್ತು ವರ್ಷ ತುಂಬಿ-ತಾ: ಹೋ-ಗಿ ಕಾರ್ಪೊ-ರೇ-ಷ-ನ್‌-ಗೆ

By Staff
|
Google Oneindia Kannada News

ಬೆಂಗಳೂರು :ಏನಾದರೂ ಒಂದು ಅನಾಹುತ, ಅಪಘಾತ ಆಗಬೇಕು. ಅಲ್ಲಿಯವರೆಗೆ ನಮ್ಮ ಆಡಳಿತ ಎಚ್ಚೆತ್ತುಕೊಳ್ಳುವುದಿಲ್ಲ. ಅನಾಹುತ ಆದಮೇಲಾದರೂ ಎಚ್ಚೆತ್ತುಕೊಳ್ಳುತ್ತಾರಲ್ಲಾ , ಅಂಥವರು ಅಭಿನಂದನಾರ್ಹರು.

ಇಷ್ಟುದಿನ ಇಲ್ಲದಿದ್ದ ಹಳೆಯ ಕಟ್ಟಡಗಳನ್ನು ಕುರಿತ ಕಾಳಜಿ ಈಗ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಮೈಚಳಿ ಕೊಡವಿಕೊಂಡು ಎದ್ದು ನಿಂತಿದೆ. ಇದಕ್ಕೆ ನಾವು ಮೊದಲು ಮಳೆರಾಯನನ್ನು ಅಭಿನಂದಿಸಬೇಕು. ರ-ಸ್ತೆ ಎಂದ ಮೇಲೆ ಹೊಂ-ಡ-ಕೊ-ಳ್ಳ-ಗ-ಳಿರಲೇ ಬೇಕು ಅನ್ನು-ವ ಪರಿ-ಸ್ಥಿ-ತಿ-ಯ-ಲ್ಲಿ-ರು-ವ ಬೆಂಗ-ಳೂ-ರಿ-ನ ರಸ್ತೆ-ಗ-ಳ-ಲ್ಲಿ-ನ ಗುಂಡಿ-ಗ-ಳ-ನ್ನು ತುಂಬು-ವ ಆಂದೋ-ಲ-ನ-ವ-ನ್ನು ಅ.14 ರಿಂದ ಪಾಲಿ-ಕೆ ಹಮ್ಮಿ-ಕೊಂ-ಡಿ-ದೆ. ಇ-ದರ-ಷ್ಟೇ ಮುಖ್ಯ-ವಾ-ದ ಮತ್ತೊಂ-ದು ಯೋಜ-ನೆ 40 ವರ್ಷ ತುಂಬಿ-ದ ಪ್ರತಿ ಮನೆ--ಯೂ ಪಾಲಿ-ಕೆ-ಯಿಂ-ದ ಪ್ರಮಾ-ಣ ಪತ್ರ ಹೊಂದ-ಬೇ-ಕೆ-ನ್ನು-ವುದು.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲಕೆಲವು ಕಟ್ಟಡಗಳು ನೆಲಕಚ್ಚಿವೆ. ನಾಲ್ಕಾರು ಜೀವಗಳು ಕೊನೆಯುಸಿರೆಳೆದಿವೆ. ಇದಕ್ಕೆಲ್ಲ ಕಾರಣ : ಹಳೆ ಮನೆಗಳ ಕುಸಿತ , ಪಾಲಿಕೆಯ ಗುತ್ತಿಗೆದಾರರು ಕಟ್ಟಿದ ಕಳಪೆ ಕೆಲಸದ ಹೊಸ ವಸತಿ ಸಮುಚ್ಚಯಗಳ ದುರಂತ. ಇ-ದ-ನ್ನು ಮನ-ಗಂ-ಡೇ ಮಳೆಯ ಆರ್ಭಟ ನಿಧಾ-ನ-ವಾ-ಗುತ್ತಿದ್ದಂತೆಯೇ ಮಹಾ ನಗರ ಪಾಲಿಕೆ, ನಲ್ವತ್ತು ವರ್ಷಕ್ಕಿಂತ ಹಳೆಯ ಕಟ್ಟಡಗಳಿಗೆ ಕಟ್ಟಡ ಭ-ದ್ರತೆಯ ಪ್ರಮಾಣ ಪತ್ರ ಪಡೆಯುವಂತೆ ಆದೇಶಿಸಿದೆ.

ಹಳೆಯ ಕಟ್ಟಡದ ಮಾಲೀಕರು ತಕ್ಷಣ ಕಟ್ಟಡ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಪ್ರಮಾಣ ಪತ್ರ ಪಡೆಯುವ ಸ್ಥಿತಿಯಲ್ಲಿ ಇಲ್ಲದ ಕಟ್ಟಡಗಳನ್ನು ಸರ್ಟಿಫಿಕೇಟಿಗೋಸ್ಕರವಾದರೂ ರಿಪೇರಿ ಮಾಡಿಸಬೇಕು. ತಪ್ಪಿದರೆ ನಗರ ಪಾಲಿಕೆಯವರು ಬಂದು ಕಟ್ಟಡವನ್ನು ಒಡೆದು ಹಾಕುತ್ತಾರೆ. ಛಾವಣಿ ಸರಿ ಮಾಡುವಂತೆ ಬಾಡಿಗೆ ಮನೆಯವರು ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಮಾಲಿಕರು ಈಗ ಸುಮ್ಮನಿರುವುದು ಸಾಧ್ಯವಿಲ್ಲ.

ನಗರಪಾಲಿಕೆ ಕಟ್ಟಡಗಳಿಗೂ ಇದು ಹೊರತಲ್ಲ : ಕುಸಿಯುವ ಕಟ್ಟಡಕ್ಕೆ ಖಾಸಗಿ, ಸರಕಾರಿ ಎಂಬ ಭೇದವಿದೆಯೇ ? 1996ರಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ವಸತಿ ಗೃಹಗಳು ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ವಸತಿ ಗೃಹಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಾ. ಸಿ.ಎಸ್‌. ವಿಶ್ವನಾಥ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯ ವರದಿ ಮೇರೆಗೆ 9 ಕಾರ್ಮಿಕ ವಸತಿ ಗೃಹ ಕಟ್ಟಡಗಳನ್ನು ಕೆಡವಲಾಗಿತ್ತು. ಆದ್ದರಿಂದ ಈಗ ಪಾಲಿಕೆ ಹೊರಡಿಸಿರುವ ಆದೇಶ ಮಹಾನಗರ ಪಾಲಿಕೆಯ ವಸತಿ ಕಟ್ಟಡ, ಕಚೇರಿ ಮತ್ತು ಸಾರ್ವಜನಿಕ ಉಪಯೋಗದ ಕಟ್ಟಡಗಳಿಗೂ ಅನ್ವಯಿಸುತ್ತದೆ.

ನಗರ ಪಾಲಿಕೆ ಆದೇಶ ಹೊರಡಿಸಿರುವುದು ನಲ್ವತ್ತು ವರ್ಷಗಳ ಹಿಂದಿನ ಕಟ್ಟಡಗಳಿಗೆ ಸಂಬಂಧಿಸಿದಂತೆ ಮಾತ್ರ. ಆದರೆ ದಶಕ ಮೀರದ ಕಟ್ಟಡಗಳು ಢಮಾರಾಗುವುದನ್ನು ತಡೆಗಟ್ಟಲು ಏನು ಮಾಡುವುದು ?

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X