ವಿಕ್ರಮ ಸಂವತ್ಸರದಿ ಕ್ರಮತಪ್ಪಿದ ಮಳೆರಾಯ
ಬೆಂಗಳೂರು:ಸಾಮಾನ್ಯವಾಗಿ ದಸರೆಯ ವೈಭವಕ್ಕೆ ಅಡ್ಡಿಯಾಗದ ಮಳೆ ಈ ಬಾರಿ ಅದೇಕೋ ಅಡ್ಡಿ ಮಾಡಿದೆ. ವಿಕ್ರಮನಾಮ ಸಂವತ್ಸರದಲ್ಲಿ ಮಳೆರಾಯನೇಕೆ ಕ್ರಮ ತಪ್ಪಿದನೋ ತಿಳಿಯದು. ರಾಜ್ಯಾದ್ಯಂತ ಮಳೆರಾಯ ಅರ್ಭಟ ಮಾಡಿದ್ದಾನೆ.
ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಅತಿರೇಕವಾಗಿದೆ. ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ಸಾಕಪ್ಪಾ ಸಾಕು ಎನ್ನುವಷ್ಟು ಮಳೆ ಸುರಿದಿದೆ. ಕಳೆದ ಐದಾರು ದಿನಗಳಿಂದ ಭಾರಿ ಆರ್ಭಟ ಮಾಡಿದ ಮಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಂಚ ತಣ್ಣಗಾಗಿದೆ.
ಹೀಗಾಗಿ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ತೀರಪ್ರದೇಶದ ಕೆಲವೆಡೆ ಹಾಗೂ ಒಳನಾಡಿನ ಅನೇಕ ಕಡೆ ಮಳೆ ಬಿದ್ದಿದೆ. ಹೊನ್ನಾಳಿಯಲ್ಲಿ 4, ತರಿಕೆರೆಯಲ್ಲಿ 3, ಬಂಟ್ವಾಳ, ಖಾನಾಪುರ, ರಾಣೆಬೆನ್ನೂರುಗಳಲ್ಲಿ ತಲಾ 2, ಕಾರವಾರ, ಸಂಕೇಶ್ವರ, ಚಿತ್ರದುರ್ಗ, ಆಗುಂಬೆಗಳಲ್ಲಿ ತಲಾ 1 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಮಳೆಗೆ ಬಿಡುವು ದೊರೆತಿತ್ತು.
ಮಳೆ ಕಡಿಮೆಯಾದಂತೆ ಹವಾಮಾನದಲ್ಲೂ ಕೊಂಚ ಏರು ಪೇರಾಗಿದೆ. ಒಳನಾಡಿನ ಕೆಲವೆಡೆ ದಿನದ ಉಷ್ಣಾಂಶ ಏರಿತ್ತು. ಶುಕ್ರವಾರದ ಬೆಳಗ್ಗೆ ವರೆಗಿನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಹಲವೆಡೆ, ಒಳನಾಡಿನ ಕೆಲವು ಕಡೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿ ಮಳೆ ಬೀಳುವ ಸಾಧ್ಯತೆ ಇದೆ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಹಗುರದಿಂದ ಮಳೆ ಆಗುವ ನಿರೀಕ್ಷೆ ಇದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications