Get Updates
Get notified of breaking news, exclusive insights, and must-see stories!

‘ನೊಂ-ದ ಹೆಣ್ಣಿ-ಗೆ ಭರ-ವ-ಸೆ, ಜಿಲ್ಲೆ-ಗೊಂ--ದು ಮ-ಹಿ-ಳಾ ಸಾಂತ್ವನ ಕೇಂದ್ರ’

ಶಿವಮೊಗ್ಗ : ಶೋಷಿತ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಮಂಗಳವಾರ ಹೇಳಿದ್ದಾರೆ.

ಅವರು ಶಿವಮೊಗ್ಗ ಜೇಸಿ ಮತ್ತು ವಾಸವಿ ಮಹಿಳಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಡೆದ ಸರ್ವ ಮಹಿಳಾ ಸಂಸತ್ತು (ಮೊಕ್‌ ಪಾರ್ಲಿಮೆಂಟ್‌) ಕಾರ್ಯಕ್ರಮದ ಸಮಾರೋಪ ಭಾಷಣ ಮಾಡುತ್ತಿದ್ದರು. ಈಗಾಗಲೇ ರಾಜ್ಯದ ನಾಲ್ಕು ಕಡೆಗಳಲ್ಲಿ ಸಾಂತ್ವನ ಕೇಂದ್ರಗಳು ಕೆಲಸ ಆರಂಭಿಸಿದ್ದು ಉಳಿದ ಜಿಲ್ಲೆಗಳಲ್ಲಿ ಕೂಡ ಇಂತಹ ಘಟಕಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಶೋಷಿತ ಮಹಿಳೆಯರಿಗೆ ಅನುಕಂಪದ ಅಗತ್ಯವಿರುವುದಿಲ್ಲ. ಬದಲಾಗಿ ಅವರಿಗೆ ಬದುಕಿನಲ್ಲಿ ಭರವಸೆ ಹುಟ್ಟಿಸುವುದು ಮತ್ತು ಅವರ ಬದುಕಿಗೆ ಅಗತ್ಯವಾದ ಉದ್ಯೋಗವನ್ನು ಕಲ್ಪಿಸಿಕೊಡುವುದು ಅಗತ್ಯವಾಗಿರುತ್ತದೆ. ಸಾಂತ್ವನ ಕೇಂದ್ರದ ಮೂಲ ಉದ್ದೇಶವೇ ಇದಾಗಿರುತ್ತದೆ ಎಂದು ಸಚಿವೆ ಹೇಳಿದರು. ಇದಕ್ಕೆ ಪೂರಕವಾಗಿ ಈಗಾಗಲೇ ಮಹಿಳಾ ಸಹಾಯವಾಣಿ ಯಶಸ್ವಿಯಾಗಿ ಕೆಲಸ ಮಾಡುತ್ತದೆ ಎಂದ ಸಚಿವೆ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿಗಾಗಿ ಮಹಿಳೆಯರೇ ಸಂಘಟಿತರಾಗಿ ಹೋರಾಡಬೇಕು ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+