ಐಸಿಸಿ ಟೂರ್ನಿ : ಭಾರತ, ಜಹೀರ್ ಖಾನ್ ಶುಭಾರಂಭ
ನೈರೋಬಿ: ಐಸಿಸಿ ನಾಕ್ಔಟ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಅತಿಥೇಯ ಕೀನ್ಯಾ ವಿರುದ್ಧ 8 ವಿಕೆಟ್ಗಳ ನಿರೀಕ್ಷಿತ ಜಯ ಗಳಿಸಿತು.
ಗೆಲ್ಲಲು 50 ಓವರ್ಗಳಲ್ಲಿ 209 ರನ್ಗಳ ಸವಾಲು ಪಡೆದ ಭಾರತ ಇನ್ನೂ 7.3 ಓವರುಗಳಿರುವಂತೆಯೇ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಭಾರತದ ಪರ 68 ರನ್ (7 ಬೌಂಡರಿ) ಗಳಿಸಿದ ದ್ರಾವಿಡ್ ಔಟಾಗದೆ ಉಳಿದರು. ಉತ್ತಮ ಆರಂಭ ಒದಗಿಸಿಕೊಟ್ಟ ನಾಯಕ ಸೌರವ್ ಗಂಗೂಲಿ, ಮಾರಿಸ್ ಒಡುಂಬೆ ಬೌಲಿಂಗ್ನಲ್ಲಿ ಸ್ಟಂಪ್ ಆಗುವ ಮುನ್ನ 66 (7 ಬೌಂಡರಿ, 2 ಸಿಕ್ಸರ್) ರನ್ಗಳಿಸಿದ್ದರು. 33 ಎಸೆತಗಳಲ್ಲಿ 7 ಬೌಂಡರಿಗಳಿದ್ದ 39 ರನ್ ಗಳಿಸಿದ ವಿನೋದ್ ಕಾಂಬ್ಳಿ ತಮ್ಮ ಹಳೆಯ ಆಟ ನೆನಪಿಸಿದರು.
ಕೀನ್ಯಾ ಪರ ರವಿಂದು ಶಾ (60), ಒಡುಂಬೆ (51) ಹಾಗೂ ಥಾಮಸ್ ಒಡೊಯಾ (ಔಟಾಗದೆ 35) ಬಿಟ್ಟರೆ ಉಳಿದವರಾರೂ 20ರ ಗಡಿ ದಾಟಲಿಲ್ಲ. ಭಾರತದ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದ ವೇಗಿ ಜಹೀರ್ ಖಾನ್ 10 ಓವರ್ಗಳಲ್ಲಿ 48 ರನ್ ನೀಡಿ 3 ವಿಕೆಟ್ ಗಳಿಸಿದರು. ಉಳಿದಂತೆ ಪ್ರಸಾದ್, ಅಗರ್ಕರ್ ಹಾಗೂ ಕುಂಬ್ಳೆ ತಲಾ 2 ವಿಕೆಟ್ ಗಳಿಸಿದರು. ಕೀನ್ಯಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 208ರನ್ ಗಳಿಸಿತು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications