ನಾಳೆ ಚಳಿಗಾಲ ಅಂತ ಮಳೆಗೆ ತಿಳಿಯದೇ?
ಬೆಂಗಳೂರು : ಹಳ್ಳಿಯ ಮನೆಯಾಂದರ ಗೋಡೆ ಮೇಲೆ ನೇತು ಹಾಕಿರುವ ಕಾಲನಿರ್ಣಯ ಕ್ಯಾಲೆಂಡರ್‌ನಲ್ಲಿ ಹಾಲಿನ ಲೆಕ್ಕ, ಸಾಲ, ಬಿತ್ತನೆ, ಗೊಬ್ಬರಗಳ ಬಗೆಗೆ ಏನೋ ಲೆಕ್ಕಾಚಾರದ ಚಿತ್ತು ಮಾಡಿರುವ ಮನೆಯಾಕೆಗೆ ಭಾನುವಾರದಿಂದ ಸಾಂಪ್ರದಾಯಿಕವಾಗಿ ಚಳಿಗಾಲ ಆರಂಭವಾಗುತ್ತದೆ ಅಂತ ಗೊತ್ತಿರುವುದಿಲ್ಲ. ಹಾಗೆಯೇ ಮಳೆಗೂ ಕೂಡ.
ಮಂಗಳೂರು ವಿಮಾನ ನಿಲ್ದಾಣದ ಬಟಾ ಬಯಲಿನಲ್ಲಿ ಶುಕ್ರವಾರ ಸಂಜೆ ಸರಿಯಾಗಿ ಎರಡು ಸೆಂಟಿ ಮೀಟರ್ ಮಳೆ ಪಿರಿಪಿರಿಗುಟ್ಟಿದೆ. ನವರಾತ್ರಿಯಲ್ಲಿ ಹುಲಿವೇಷಕ್ಕೆಂದು ಬಣ್ಣ ಖರೀದಿಸಲು ಪೇಟೆಗೆ ಹೊರಟ ಕರಾವಳಿ ಊರ ಮಂದಿಯೆಲ್ಲ ಹಿಂದಿರುಗುವಾಗ ಸುರಿಯಲಾರಂಭಿಸಿದ ಮಳೆಗೆ ಬೈದುಕೊಳ್ಳುತ್ತಾ ಬಣ್ಣಗಳನ್ನು ಪ್ಲಾಸ್ಟಿಕ್ ಕವರಿನಲ್ಲಿ ಮತ್ತಷ್ಟು ಜೋಪಾನವಾಗಿಟ್ಟುಕೊಂಡರು. ಬೆಂಗಳೂರು ಆಕಾಶದಲ್ಲಿ ಸಂಜೆ ತೇಲುತ್ತಿದ್ದ ಕಪ್ಪು ಮೋಡ ಪರದೆಗಳೆಲ್ಲಾ ಶನಿವಾರ ಬೆಳಗಿನವರೆಗೆ ಹನಿ ಹನಿಯಾಗಿ ಸುರಿದು... ಬೆಳಗ್ಗೆ ಹತ್ತುಗಂಟೆಗೆ ಬಿಸಿಲ ಕೋಲು ಮಹಡಿಗಳ ಮೇಲೂರಿತು. ಸಂಜೆ ಹೊತ್ತಿಗೆ ಹೀಗೆ ಕಂಪ್ಯೂಟರ್ ಸ್ಕಿೃೕನ್ ನೋಡಿ ಬೇಸತ್ತು ಹೊಸೂರು ಹೆದ್ದಾರಿಯತ್ತ ಕಣ್ಣು ಹಾಯಿಸುತ್ತಿದ್ದರೆ ರಸ್ತೆ ಮೇಲೆ ಮೆಗಾ ವಾಹನಗಳು ಫಳಾರನೆ ನೀರು ಚಿಮ್ಮಿಸಿಕೊಂಡು ಹೋಗುತ್ತಿವೆ. ಒನಕೆ ಧಾರೆ ಸುರಿಯುತ್ತಿದೆ.
ನಮ್ಮ ಶಿರಾದ ಪ್ರತಿನಿಧಿಯ ಫೋನು ಆಗಲೇ ಬಂದಿದೆ. ಅಲ್ಲಿ ಮನೆಯಂಗಳದ ಗುಲಾಬಿ ಗಿಡಗಳು... ಕ್ರೋಟನ್ ಎಲೆಗಳಿಂದ ನೀರು ತೊಟ್ಟಿಕ್ಕುವಷ್ಟು ಮಳೆಯ ಕೃಪೆ ಹರಿದಿದೆ. ಅರಸಿಕೆರೆಯ ಕೋಡಿ ಬಳಿ ಬಟ್ಟೆ ಒಗೆಯುತ್ತಿದ್ದವರೆಲ್ಲಾ ಹನಿಯಲಾರಂಭಿಸಿದ ಮಳೆ ನೋಡಿ ಗೊಣಗುತ್ತಾ, ಮತ್ತೆ ಬಂದಿರುವ ಮಳೆಗೆ ಒಳಗೊಳಗೇ ಖುಷಿ ಪಡುತ್ತಾ ಸಂಜೆ ಮನೆಗೆ ಹೋಗಿದ್ದಾರೆ.
ಹವಾಮಾನ ಇಲಾಖೆ ನೀಡಿದ ಆಂಥೆಟಿಕ್ ಹಾರೊಸ್ಕೋಪ್ ಪ್ರಕಾರ ಭಾನುವಾರ ಮಂಗಳೂರು , ಕಾರವಾರಗಳಲ್ಲಿ ಮಳೆಗಾಲವೇ ಮುಂದುವರೆದಿರುತ್ತದೆ. ಬೆಂಗಳೂರಿನಲ್ಲಿ ಮೋಡ ಮುಸುಕಿರುತ್ತದಂತೆ. ಇಲ್ಲದಿದ್ದರೆ ಹೊಗೆ ತುಂಬಿರುತ್ತದೆ ಬಿಡಿ. ಉತ್ತರ ಕರ್ನಾಟಕಕ್ಕೆ ಮಾತ್ರ ಸ್ವಲ್ಪ ಮಳೆಯ ಯೋಗವಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications