ಶೇರು ವಹಿವಾಟು ವೃದ್ಧಿಗೆ ಮೂಲ ಸೌಕರ್ಯಗಳ ಕೊರತೆ
ಬೆಂಗಳೂರು: ‘ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಒಟ್ಟು ಶೇರು ವಹಿವಾಟನ್ನು 7000 ಕೋಟಿ ರೂಪಾಯಿಗಳಿಗೆ ಏರಿಸಬೇಕೆಂಬ ಗುರಿ ತಲುಪಬೇಕಾದರೆ ನಮ್ಮ ದೇಶದಲ್ಲಿನ ಮೂಲ ಸೌಕರ್ಯಗಳು ತ್ವರಿತಗತಿಯಲ್ಲಿ ವೃದ್ಧಿಯಾಗಬೇಕು’
‘ಹೊಸ ಆರ್ಥ ವ್ಯವಸ್ಥೆಯಲ್ಲಿ ಆರ್ಥಿಕ ಸೇವೆಗಳು ’ ಎಂಬ ವಿಷಯದ ಬಗ್ಗೆ ಭಾರತೀಯ ಉದ್ದಿಮೆಗಳ ಒಕ್ಕೂಟ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಪ್ರಧಾನ ಭಾಷಣ ಮಾಡಿದ ಇನ್‌ವೆಸ್ಟ್ ಮಾರ್ಟ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹೇಮಾಂಗ್ ರಾಜಾ ಅವರು ಕಂಡ ಮುನ್ನೋಟವಿದು.
ಮೂರು ವರ್ಷಕ್ಕೆ ಕೊನೆಗೊಂಡ ಅವಧಿಯಲ್ಲಿ ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್‌ನ ಶೇರು ವಹಿವಾಟಿನ ಗಾತ್ರ 20 ರಿಂದ 25 ಕೋಟಿ ರೂಪಾಯಿ ಮುಟ್ಟಬೇಕಾಗಿತ್ತು. ( ಇದರಲ್ಲಿ ಆನ್ ಲೈನ್ ಟ್ರೇಡಿಂಗ್‌ನ ಪಾಲು ಶೇ. 25) ಆದರೆ, ವಾಸ್ತವಾಂಶ ಎಂದರೆ ಸಾಧಿತ ಶೇರು ವಹಿವಾಟಿನ ಗಾತ್ರ ಈ ಅವಧಿಯಲ್ಲಿ ಕೇವಲ 14000 ಕೋಟಿ. (ಆನ್ ಲೈನ್ ಟ್ರೇಡಿಂಗ್ ಪಾಲು ಶೇ. 20)
ಆನ್ ಲೈನ್ ಟ್ರೇಡಿಂಗ್ ಜಾಲಕ್ಕೆ ಪ್ರವೇಶಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಆದರೆ , ಈ ಏರಿಕೆ ಪ್ರವೃತ್ತಿಗೆ ಅನುಗುಣವಾಗಿ ಬ್ಯಾಂಡ್‌ವಿಡ್ತ್ ಮುಂತಾದ ಮೂಲ ಸೌಲಭ್ಯಗಳ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿಲ್ಲ ಎಂದು ಹೇಮಾಂಗ್ ರಾಜಾ ವಿಷಾದಿಸಿದರು. ಆನ್ ಲೈನ್ ಟ್ರೇಡಿಂಗ್ ಕ್ಷೇತ್ರದಲ್ಲಿರುವವರು ಗ್ರಾಹಕರಿಗೆ ತಿಳವಳಿಕೆ ನೀಡುವ ಕಾರ್ಯಕ್ರಮಗಳನ್ನು ಬೃಹತ್ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕೆಂದೂ ಅವರು ಸಲಹೆ ಮಾಡಿದರು.
ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ವರದಿಯ ಪ್ರಕಾರ ಇವತ್ತು ಶೇರು ವ್ಯವಹಾರದಲ್ಲಿ ಬಂಡವಾಳ ತೊಡಗಿಸುತ್ತಿರುವವರ ಸಂಖ್ಯೆ 19 ದಶಲಕ್ಷ. ಇವರಲ್ಲಿ ಬಹುತೇಕ ಮಂದಿ ದೇಶದ ಹತ್ತು ಪ್ರಮುಖ ನಗರಗಳಿಂದ ಬಂದವರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications