ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆ ಬದು-ಕಿ-ನ ಮಬ್ಬಿ-ನ-ಲ್ಲಿ ತಬ್ಬಿ-ಬ್ಬಾ-ದ-ವ-ರು !

By Staff
|
Google Oneindia Kannada News

ಹೊಸದಿಲ್ಲಿ : ಅಕ್ಟೋಬರ್‌ 1, ವಿಶ್ವ ವಯೋವೃದ್ಧರ ದಿನ. ಹಿರಿಯರಿಗೆ ಸಲ್ಲ್ಲುತ್ತಿರುವ ಸ್ಥಾನಮಾನಗಳಿಗೆ ಸಂಬಂಧಿಸಿದಂತೆ ಯೋಚಿಸಲು ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆ ಬಿಡುವು ಮಾಡಿಕೊಂಡ ದಿನ. ಅಕ್ಟೋಬರ್‌ 1ನ್ನು ವಿಶ್ವ ವಯೋವೃದ್ಧರ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಘೋಷಿಸಿದೆ. ಈ ಹಿನ್ನೆಯಲ್ಲಿ ಭಿಕ್ಷುಕರ ನಾಡಾಗಿರುವ ಬಡ ಭಾರತದ ವೃದ್ಧರ ಚಿತ್ರಣ ಇಲ್ಲಿದೆ.

ರಾಮಶರ್ಮ ಎಂಬ ವೃದ್ಧರಿಗೆ 60 ತುಂಬಿದ ದಿನ ಆತ ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮಾಲೀಕ ಕರೆದು ಹೇಳಿದ. ನೀವು ನಿವೃತ್ತರಾಗಿ. ರಾಮಶರ್ಮರಿಗೆ ಚಿಂತೆಯೇನೂ ಇರಲಿಲ್ಲ. ಅವರಿಗೆ ನಾಲ್ಕು ಗಂಡು ಮಕ್ಕಳಿದ್ದರು. ಧೈರ್ಯವಾಗಿ ಕೆಲಸ ಬಿಟ್ಟರು.

ಈ ಮುಂಚೆಯಿಂದಲೇ ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿ ಅನುಭವಿಸುತ್ತಿದ್ದ ಶರ್ಮರ ನೋವು ಹೆಚ್ಚಾಗುತ್ತಾ ಹೋಯಿತು. ಅವರ ಹೆಂಡತಿಯಾಟ್ಟಿಗೆ ಭಿಕ್ಷೆ ಬೇಡುವ ಕೆಲಸವನ್ನು , ಮುಂದಿನ ಕೇವಲ ಎರಡು ವರ್ಷಗಳಲ್ಲಿ ಅವರು ಹುಡುಕಿಕೊಂಡರು. ಬದುಕಲೇಬೇಕಾದ ಅನಿವಾರ್ಯತೆಗೆ ಭಿಕ್ಷುಕರಾದ ಶರ್ಮ, ಬಡತನದ ರೇಖೆಯಿಂದ ಕೆಳಗೆ ವಾಸಿಸುತ್ತಿರುವ ಭಾರತದ 7 ಕೋಟಿ ವೃದ್ಧರಲ್ಲಿ ಶೇಕಡಾ 40ರಷ್ಟಿರುವ ಭಿಕ್ಷುಕರಲ್ಲಿ ಒಬ್ಬರಾದರು.

ಬೆಳೆಯುತ್ತಿರುವ ವೃದ್ಧಾಶ್ರಮಗಳ ಸಂಖ್ಯೆ: ಭಾರತದಲ್ಲಿ ಇವತ್ತು ವೃದ್ಧಾಶ್ರಮಗಳು ಶಾಲಾ-ಕಾಲೇಜುಗಳ ಸಂಖ್ಯೆಯಂತೆ ಬೆಳೆಯುತ್ತಿವೆ. ಭಾರತದ ಶೇಕಡಾ 90ರಷ್ಟು ವೃದ್ಧರು ಅಸಂಘಟಿತ ವಲಯದಲ್ಲಿದ್ದಾರೆ. ಅವರಿಗೆ ನಿವೃತ್ತಿ ಸೌಲಭ್ಯಗಳು ಸಿಗುತ್ತಿಲ್ಲ. 60 ದಾಟಿದ ಶೇಕಡಾ 55ರಷ್ಟಿರುವ ವೃದ್ಧೆಯರು ವಿಧವೆಯರಾಗಿದ್ದಾರೆ. ಇವರಲ್ಲಿ ಶೇಕಡಾ 80ರಷ್ಟು ಗ್ರಾಮಾಂತರ ಪ್ರದೇಶಗಳಿಂದ ಬಂದವರು. ಇವರಲ್ಲಿ ಶೇಕಡಾ 73 ಜನ ಅನಕ್ಷರಸ್ಥರು. ಬರುವ 2025ರ ಹೊತ್ತಿಗೆ ಈ ದೇಶದ ವೃದ್ಧರ ಸಂಖ್ಯೆ ಸುಮಾರು 18 ಕೋಟಿಗೇರಲಿದೆ ಎಂದು ಅಂದಾಜು ಮಾಡಲಾಗಿದೆ.

ಕೈಗಾರೀಕರಣ, ಪಾಶ್ಚಾತ್ಯೀಕರಣ, ನಗರೀಕರಣ ಮತ್ತು ವಲಸೆಗಳು ಕೌಟುಂಬಿಕ ರಚನೆಯಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗಿವೆ. ‘ಹೆಲ್ಪ್‌ ಏಜ್‌ ಇಂಡಿಯಾ’ ಎಂಬ ಸರ್ಕಾರೇತರ ಸಂಸ್ಥೆಯಾಂದು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಂಡಿದೆ. ವೃದ್ಧರಿಗಾಗಿ ವೃದ್ದಾಶ್ರಮ ಮತ್ತು ಪೋಷಣಾ ಕೇಂದ್ರಗಳನ್ನು ಅದು ತೆರೆದಿದೆ.

ವೃದ್ಧರೆಂದರೆ ಖರ್ಚಿಗಾಗಿ ಇರುವ ಜನ ಎನ್ನುವ ತೀರ್ಮಾನ ಅನೇಕರದು

ಅವಿಭಕ್ತ (ಸಮ್ಮಿಶ್ರ) ಕುಟುಂಬ ಪರಿಕಲ್ಪನೆ ಸಹಜವಾಗಿ ವೃದ್ಧರಿಗೆ ಎಲ್ಲ ರೀತಿಯ ರಕ್ಷಣೆ ಒದಗಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ ‘ಹೆಲ್ಪ್‌ ಏಜ್‌ ಇಂಡಿಯಾ’ ಸಂಸ್ಥೆಯ ಡೈರೆಕ್ಟರ್‌ ಜನರಲ್‌ ಎಸ್‌. ಎಸ್‌. ಸಿಂಧು.

ವೃದ್ಧರೆಂದರೆ ಖರ್ಚಿಗಾಗಿ ಇರುವ ಜನ ಎನ್ನುವ ಸ್ವಯಂ ತೀರ್ಮಾನ ಅನೇಕರದು. ಆದ್ದರಿಂದ ಸರ್ಕಾರ ಮತ್ತು ಇತರ ಸ್ವಯಂ ಸಂಘಟನೆಗೂ ಕೂಡಾ ವೃದ್ಧರನ್ನು ಕಡೆಗಣಿಸಿವೆ ಎನ್ನುವುದು ಸಿಂಧು ಅವರ ದೂರು.

ವೃದ್ಧರ ಸಮಸ್ಯೆಗಳನ್ನು ಕುರಿತು ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಸೆಪ್ಟಂಬರ್‌ 23ರಿಂದ 25ರವರೆಗೆ ‘ಹೆಲ್ಪ್‌ ಏಜ್‌ ಇಂಡಿಯಾ’ ಸಂಸ್ಥೆ ನಡೆಸಿಕೊಟ್ಟಿದೆ. ಪಾಶ್ಚಾತ್ಯರಂತೆ ಭಾರತದಲ್ಲೂ ಕುಟುಂಬಗಳು ಬಹುಕಾಲ ಒಟ್ಟಿಗೆ ಬದುಕುತ್ತಿಲ್ಲ. ಇದು ಈ ಮುಂಚೆ ಬೆಳೆದು ಬಂದ ಸಂಸ್ಕೃತಿಗೆ ವಿರುದ್ಧವಾಗಿದೆ. ವಯೋವೃದ್ಧರಿಗೆ ಕೇವಲ ನೆರವಷ್ಟೇ ಅಲ್ಲ , ಸ್ವಾತಂತ್ರ ಕೂಡಾ ಬೇಕು. ಆದರೆ ಅವರಿಗೆ ಸಿಗುತ್ತಿರುವುದು ಕೆಲವು ಸೌಲಭ್ಯಗಳು ಮಾತ್ರ. ಅವರ ಸೇವೆಯನ್ನು ಸಮಾಜ ಕಡೆಗಣಿಸುತ್ತಿದೆ. ಆದರೆ ಅವರಿಗೆ ಸಮಾಜದ ಎಲ್ಲ ಪ್ರಕಾರಗಳೂ ಲಭ್ಯವಾಗಬೇಕು ಎಂಬುದು ಈಗಿನ ವಾದ ಎಂದು ‘ಹೆಲ್ಪ್‌ ಏಜ್‌ ಇಂಡಿಯಾ’ ಸಂಸ್ಥೆಯ ರಾಬರ್ಟ್‌ ಹೇಳುತ್ತಾರೆ.

ಸರ್ಕಾರಗಳ ಗಮನ ಅಗತ್ಯ: ಒಂದು ಕಾಲದಲ್ಲಿ ಇಡೀ ಕುಟುಂಬದ ಆಧಾರವಾಗಿದ್ದ ವೃದ್ಧರು ವೃದ್ಧಾಶ್ರಮ ಸೇರದಿರುವಂತೆ ಆದಷ್ಟೂ ನೋಡಿಕೊಳ್ಳಬೇಕು. ಒಂಟಿತನ ವೃದ್ಧರಿಗೆ ತುಂಬಾ ತೊಂದರೆ ಕೊಡುತ್ತದೆ. ಅವರಿಗೆ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ನೆರವು ಅತ್ಯಗತ್ಯ. ಅದನ್ನು ಕೊಡುವುದು ಎಲ್ಲ ಯುವ ಪೀಳಿಗೆಯ ಕರ್ತವ್ಯ. ಭಾರತದಲ್ಲಿ ಸಾಮಾಜಿಕ ಭದ್ರತೆ ಎಂಬುದೇ ಅಸ್ಥಿತ್ವದಲ್ಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳು ಗಮನ ಹರಿಸಬೇಕೆಂಬುದು ‘ಹೆಲ್ಪ್‌ ಏಜ್‌ ಇಂಡಿಯಾ’ ಸಂಸ್ಥೆಯ ಸದಸ್ಯ ಅರುಣ್‌ ಸೇಠ್‌ ಅವರದು.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X