ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗ-ಪ್ಪ-ನ ತಲೆ- ಮೇ-ಲೆ ಹರಿ-ದಾ-ಡು-ತ್ತಿ-ರುವ ಗೋ-ಪಾ-ಲ ಚಕ್ರ

By Staff
|
Google Oneindia Kannada News

*ಹೆಚ್‌. ಸಿ. ರಘುನಾಥ

ಗು-ರು-ವಾ-ರ ರಾತ್ರಿ-ಯಿಂ-ದ ನಾಡಿ-ನ-ಲ್ಲಿ ನಡೆ-ಯು-ತ್ತಿ-ರು-ವ ರಾಮಾ-ಯ-ಣ-ವ-ನ್ನೆ-ಲ್ಲಾ ನೋಡಿ-ದ ಮೇಲೆ, ಯಾಕಾ-ದ-ರೂ ತಪ್ಪಿ-ಸಿ-ಕೊಂ-ಡು ಬಂದೆ ಎಂದು ನಾಗ-ಪ್ಪ-ನಿ-ಗೆ ಅನ್ನಿ-ಸಿ-ರ-ಬೇ-ಕು. ನಾಗ-ಪ್ಪ ತಪ್ಪಿ-ಸಿ-ಕೊಂ-ಡು ಬಂದ-ದ್ದು , ಆತ-ನ ಕುಟುಂಬ-ದ-ವ-ರಿ-ಗೆ ಬಿಟ್ಟು ಯಾರಿ-ಗೂ ಇಷ್ಟ-ವಾ-ದಂ-ತೆ ಕಾ-ಣು-ತ್ತಿ--ಲ್ಲ . ಕುಟುಂ-ಬ-ದ-ವ-ರು ಕೂಡ ಬ-ಹಿ-ರಂ-ಗ-ವಾ-ಗಿ ತಮ್ಮ ಸಂತೋ-ಷ-ವ-ನ್ನು ಹೇಳಿ-ಕೊ-ಳ್ಳು-ವ ಸ್ಥಿತಿ-ಯ-ಲ್ಲಿ ಇಲ್ಲ--ದಿ-ರು-ವು-ದು ಈ ಹೊತ್ತಿ-ನ ನಾ-ಗ-ಪ್ಪ-ನ ಬದುಕಿ-ನ ದುರಂ-ತವೇ ಸರಿ.

-ನಾ-ಗ-ಪ್ಪ ತಪ್ಪಿ-ಸಿ-ಕೊಂ-ಡು ಬಂದಿರು-ವು-ದ-ರಿಂ-ದ, ಕ್ಷ-ಣ ಚಿತ್ತ ಕ್ಷಣ ಪಿತ್ತ ಮನೋ-ಭಾ-ವ-ದ ವೀರ-ಪ್ಪ-ನ್‌-ನಿಂ-ದ ರಾಜ್‌-ಕು-ಮಾ-ರ್‌-ಗೆ ತೊಂದ-ರೆ-ಯಾ-ಗ-ಬ-ಹು-ದೆ-ನ್ನು-ವ ಗುಮಾ-ನಿ-ಗ-ಳು ನಾಗ-ಪ್ಪ ಬಂದ ಕ್ಷಣ-ದಿಂ-ದ-ಲೂ ಹಬ್ಬಿ-ದ್ದ--ವು. ಈ ಗುಮಾ-ನಿ-ಗ-ಳಿ-ಗೆ ಮೂರ್ತ-ರೂ-ಪು ಕೊಟ್ಟಿ-ದ್ದು, ನಾಲ್ಕು ಬಾರಿ ಕಾಡಿ-ಗೆ ಪ್ರವಾ-ಸ ಹೋಗಿಬಂದ ಗೋಪಾ-ಲ್‌ ಎಂಬ ಉಭ-ಯ ಸರ್ಕಾ-ರ-ಗ-ಳ ದೂತ.

ಶನಿ-ವಾ-ರ ಬೆಳಿ-ಗ್ಗೆ ಕಾಡಿ-ನಿಂ-ದ ಚೆನ್ನೈ-ನಲ್ಲಿ ಪ್ರತ್ಯ-ಕ್ಷ-ನಾ-ದ ಗೋಪಾ-ಲ್‌, ಮೊದ-ಲು ಸಿಡಿ-ಸಿ-ದ ಬಾಂಬ್‌- ನಾಗ-ಪ್ಪ-ನಿಂ-ದಾ-ಗಿ-ಯೇ ಸಂಧಾ-ನ ಹಾಳಾ-ಯಿ-ತು ಎಂಬು-ದು. ನಾಗ-ಪ್ಪ ಪರಾ-ರಿ-ಯಾ-ಗ-ದಿ-ದ್ದ-ರೆ ತಮ್ಮ ಕೃಷ್ಣ ಸಂಧಾ-ನ ಯಶ-ಸ್ವಿ-ಯಾ-ಗು-ತ್ತಿ-ತ್ತು , ಗಾಂಧಿ ಜಯಂ-ತಿ-ಯ ಮರು-ದಿ-ನ ರಾಜ್‌-ರೊಂದಿ-ಗೆ ನಾಡಿ-ನ-ಲ್ಲಿ-ರು-ತ್ತಿ-ದ್ದೆ ಎಂದು ಗೋಪಾ-ಲ್‌ ಹೇಳಿ-ದ್ದಾ--ರೆ. ಇ-ದ-ರಿಂ-ದಾ-ಗಿ ನಾಗ-ಪ್ಪ-ನ ತಲೆ-ಯ ಮೇಲೆ -ಕೂ-ತಿ-ದ್ದ ಗೂಬೆ-ಯ ಚಿತ್ರ-ಕ್ಕೆ ಜೀವ ಬಂದಂ-ತಾ-ಯಿ-ತು.

ನಾಟಕಕ್ಕೆ ಕೊನೆ ಸೀನು ಎಂಬುದೇ ಇಲ್ಲ ! : ಗೋಪಾ-ಲ್‌-ರ ಹಿಂದಿ-ನ ಸಂಧಾ-ನ-ಯಾ-ತ್ರೆ-ಗ-ಳು, ಅವ-ರು ಕಾಡಿ-ನಿಂ-ದ ನಾಡಿ-ಗೆ ಬಂದಾ-ಗ-ಲೆ-ಲ್ಲಾ ಉದು-ರಿ-ಸು-ವ ಆಣಿ-ಮು-ತ್ತು-ಗ-ಳ-ನ್ನು ಮೊದ-ಲಿ-ನಿಂ-ದ ಗಮ-ನಿ-ಸು-ತ್ತಾ ಬಂದ-ವ-ರಿ-ಗೆ, ಶನಿ-ವಾ-ರ-ದ ಗೋಪಾ-ಲ್‌ -ಮಾ-ತು-ಗ-ಳ-ನ್ನು ನಂಬು-ವು-ದು ಕಷ್ಟ. ಕಳೆ-ದ ಬಾರಿ ಕಾ-ಡಿ-ನಿಂ-ದ ಗೋಪಾ-ಲ್‌ ವಾಪ-ಸ್ಸಾ-ದಾಗ-ಲೂ, ಸುಪ್ರಿಂ-ಕೋ-ರ್ಟ್‌ ತೀರ್ಪು ತಮ್ಮ ಸಂಧಾ-ನ-ಕ್ಕೆ ಅಡ್ಡಿ-ಯಾ-ಯಿ-ತು ಎಂದಿ-ದ್ದ-ರು. ಆ-ದ-ರೆ, ಈ ಸಾರಿ ಕಾನೂನು ತೊಡ-ಕು-ಗ-ಳ-ನ್ನು ವೀರ-ಪ್ಪ-ನ್‌-ಗೆ ಮನ-ವ-ರಿ-ಕೆ ಮಾಡಿ-ಸಿ-ದ್ದಾ-ರಂ-ತೆ. ಆದ-ರೆ, ಕಳೆ-ದ ಸಲ ಕನ್ವಿ-ನ್ಸ್‌ ಆಗ-ದ ವೀರ-ಪ್ಪ-ನ್‌ ಈ ಸ-ಲ -ಜಾ-ಣ ಮರಿ-ಯಾ-ಗು-ವ ಗೋಪಾಲ ಕಥೆ-ಯನ್ನು ಎರ-ಡೂ ರಾಜ್ಯ-ಗ-ಳ ಅಬಾ-ಲ ಸರ್ಕಾ-ರ-ಗ-ಳ-ಷ್ಟೇ ನಂಬ-ಲು ಸಾಧ್ಯ. ಇದ-ರಿಂ-ದಾ-ಗಿ, ಗೋಪಾ-ಲ್‌ ತಮ್ಮ ವಿಫ-ಲ-ತೆ-ಯ-ನ್ನು ಮುಚ್ಚಿಕೊ-ಳ್ಳ-ಲು ನಾ-ಗ-ಪ್ಪ-ನನ್ನು ಬ-ಲಿಪಶು ಮಾಡಿದ್ದಾರೆ-ನ್ನು-ವ ಸಂಶ-ಯ ಬಲ-ವಾ-ಗು-ತ್ತ-ದೆ.

ಅದೇ-ನೇ ಇರ-ಲಿ, ಗೋಪಾ-ಲ್‌ ಮರ-ಳಿ ಬಂದಿ-ರು-ವ ಹಿನ್ನೆ-ಲೆ-ಯ-ಲ್ಲಿ ರಾಜ್‌ ಊರಿ-ಗೆ ಬರು-ವ ದಿನ ಮತ್ತೆ ದೂರ-ವಾ-ಗಿ-ದೆ. ಅಲ್ಲ-ದೇ ರಾಜ್‌-ರ-ನ್ನು ಬಿಡಿ-ಸಿ-ಕೊ-ಳ್ಳು-ವ ಸರ್ಕಾ-ರ-ಗಳ ಕಾರ್ಯ-ತಂ-ತ್ರ-ದ-ಲ್ಲಿ ಕೆ-ಲ-ವು ಬದ-ಲಾ-ವ-ಣೆಗ-ಳಾ-ಗು-ವ ಸಾಧ್ಯ-ತೆ-ಗ-ಳು ದಟ್ಟ-ವಾ-ಗಿ-ವೆ. ಸಂಧಾ-ನ-ದ ಪ್ರಕ್ರಿ-ಯೆ ಬದ-ಲಾ-ಗು-ವ ನಿರೀ-ಕ್ಷೆ-ಯಿ-ದೆ. ಹಾಗೆ-ಯೇ, ಊರಿಗೊಬ್ಬ-ಳೇ ಪದ್ಮಾ-ವ-ತಿ ಎನ್ನು-ವ ತ-ಮ್ಮ ನೀತಿ-ಯ-ನ್ನು ಸರ್ಕಾ-ರಗ-ಳು ಬದ-ಲಿ-ಸಿ-ಕೊಂ-ಡು, ಹೊಸ ಸಂಧಾ-ನ-ಕಾ-ರ-ನ-ನ್ನು -ಬ-ಳ-ಸಿ-ಕೊ-ಳ್ಳು-ವ ಸಾಧ್ಯ-ತೆ-ಗ-ಳಿ-ವೆ. ಸಂ-ಧಾ-ನ ಸಾಕು, ಕಾರ್ಯಾ-ಚ-ರ-ಣೆ ಬೇಕು ಎನ್ನು-ವ -ಘೋ-ಷ-ಣೆ, ಮರು-ಹು-ಟ್ಟು ಪಡೆ-ಯಲಾ-ರ-ದು ಎನ್ನು-ವಂ-ತಿ-ಲ್ಲ.

ಈ ನಡು-ವೆ, ನಾನು ಮರ-ಳಿ ಕಾಡಿ-ಗೆ ಹೋಗ-ಲು ಸಿದ್ಧ ಎಂದು ನಕ್ಕೀರ-ನ್‌ ಗೋಪಾ-ಲ್‌ ತಮ್ಮ ಉತ್ಸಾ-ಹ-ವ-ನ್ನು ಪ್ರಕ-ಟಿ-ಸಿ-ದ್ದಾ---ರೆ. ಅವರ ಉತ್ಸಾಹವನ್ನು ಗಮನಿಸಿದರೆ ಪ್ರತಿ ಸಾರಿ ಕಾಡಿನಿಂದ ವಾಪಸ್ಸಾಗುವಾಗಲೂ ಮತ್ತೆ ಕಾಡಿಗೆ ಹೋಗಲು ನಿಶ್ಚಯಿಸಿಕೊಂಡೇ ಬರುತ್ತಾರೆ ಅನಿಸುತ್ತದೆ. ಆದ-ರೆ, ಕೆಲ-ವು ಸುದ್ದಿ-ಮೂ-ಲ-ಗ-ಳು ಮತ್ತೆ ಕಾಡಿ-ನ ಕಡೆ ತಲೆ ಹಾಕಿ ಮಲ-ಗ-ದಂ-ತೆ ಗೋಪಾ-ಲ್‌-ಗೆ ವೀರ-ಪ್ಪ-ನ್‌ ತಾಕೀ-ತು ಮಾಡಿ-ದ್ದಾ-ನೆಂ-ದು ಹೇಳು-ತ್ತಿ-ವೆ. ಅದೇ-ರೀ-ತಿ ನಾಗ-ಪ್ಪ-ನ-ನ್ನು ಮರ-ಳಿ ಅರ-ಣ್ಯ-ಕ್ಕೆ ಕಳಿ-ಸ-ಲು ವೀರ-ಪ್ಪ-ನ್‌ ಕೇಳಿ-ದ್ದಾ-ನೆಂ-ಬ ಸುದ್ದಿ-ಯೂ ಹರಿ-ದಾ-ಡುತ್ತಿ-ದೆ. ಎಲ್ಲ-ವೂ ಸ್ಪಷ್ಟ-ವಾ-ಗ-ಲು, ಕನಿ-ಷ್ಟ ಒಂದೆ-ರ-ಡು ದಿನ-ವಾ-ದ-ರೂ ಬೇಕು. ಆ-ದ-ರೆ, ರಾಜ್‌ -ಬಿ-ಡು-ಗ-ಡೆಗೆ ಅ-ಡ್ಡಿಯಾ-ದ-ನೆ-ನ್ನು-ವ ಅಪ-ರಾ-ಧಿ-ಯ ಸ್ಥಾನ-ದ-ಲ್ಲಿ ನಿಂತಿ-ರು-ವ ನಾಗ-ಪ್ಪ-ನಿ-ಗೆ ಸಾಂತ್ವ-ನ ಹೇಳ-ಲು ಸ್ವತಃ ರಾಜ್‌ ಅವ-ರೇ ಬರ-ಬೇ-ಕೇ-ನೋ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X