ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಜಿ ವೈದ್ಯ-ರ ಕಡ್ಡಾ-ಯ ಗ್ರಾ-ಮೀ-ಣ ಸೇವೆ 6 ವರ್ಷ-ಗ-ಳಿಂ-ದ 3 ವರ್ಷ-ಕ್ಕೆ ಇಳಿ-ಕೆ

By Staff
|
Google Oneindia Kannada News

ಬೆಂಗಳೂರು : ಸ್ನಾತಕೋತ್ತರ ಪದವಿ ಗಳಿ-ಸಿ-ದ ಎಲ್ಲಾ ವೈದ್ಯರು ಗ್ರಾಮೀ-ಣ ಪ್ರದೇ-ಶ-ದ-ಲ್ಲಿ -ಕ-ಡ್ಡಾ-ಯ-ವಾ-ಗಿ ಆರು ವರ್ಷ-ಗ-ಳ ಸೇವೆ ಸಲ್ಲಿ-ಸ-ಬೇ-ಕೆಂ-ದು ಈವರೆಗಿದ್ದ ನಿಯಮ-ವ-ನ್ನು ಸಡಿ-ಲಿ--ಸಿರು-ವ ಸರ್ಕಾ-ರ, ಆರು ವರ್ಷಗಳ ಸೇವೆಯನ್ನು ಮೂರು ವರ್ಷಕ್ಕೆ ಇಳಿಸ-ಲು ನಿರ್ಧ-ರಿ-ಸಿದೆ.

ಶುಕ್ರವಾರ-ದ ಕ್ಯಾಬಿನೆಟ್‌ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಾರ್ತಾ ಮತ್ತು ಪ್ರಚಾರ ಮಂತ್ರಿ ಬಿ.ಕೆ. ಚಂದ್ರ ಶೇಖರ್‌ ಸುದ್ದಿಗಾರರಿಗೆ ಹೇಳಿದ್ದಾರೆ. ಜನರಲ್‌ ಡ್ಯೂಟಿ ವೈದ್ಯರಿಗೆ ಮತ್ತು ದಂತ ವೈದ್ಯರಿಗೆ ಗ್ರಾಮೀಣ ಪ್ರದೇಶದ ಸೇವೆಯ ಅವಧಿಯನ್ನು ಮೂರು ವರ್ಷಕ್ಕಿಳಿಸಲಾಗಿದೆ. ಆದರೆ ಸರಕಾರಿ ಸೇವೆಯಲ್ಲಿರುವ ಎಂಬಿಬಿಎಸ್‌ ವೈದ್ಯರಿಗೆ ಈ ಪದ್ಧತಿ ಅನ್ವಯಿಸುವುದಿಲ್ಲ ಎಂದು ಸಚಿವರು ಹೇಳಿದರು.

ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ 550 ಮಂದಿ ವೈದ್ಯಕೀಯ ಅಧಿಕಾರಿಗಳು, 80 ದಂತ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಸಮಿತಿಯಾಂದನ್ನು ರಚಿಸಲು ನಿರ್ಧರಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ 700 ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಮದ್ದೂರು, ಸಿರಿಗುಪ್ಪ , -ಯಳಂದೂರುಗಳಲ್ಲಿ ಮಹಿಳೆಯರಿಗೆ ಮೆಡಿಕಲ್‌ ಕಿಟ್‌ ಹಂಚುವ ಕಾರ್ಯಕ್ರಮ ಆರಂಭಿಸಲಾಗುವುದು . ಇದಕ್ಕಾಗಿ ಸುಮಾರು ಎರಡೂವರೆ ಕೋಟಿ ರೂಪಾಯಿ ವ್ಯಯಿಸಲಾಗುವುದು. ಸುರಕ್ಷಾ ಹೆರಿಗೆ ಯೋಜನೆಗೆ 1.02 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X