ಮಾಲಿನ್ಯನಗರಿಯಲ್ಲೂ ಸಿಕ್ಕ ಶುದ್ಧ ಜೀವಾನಿಲ!
ಲಾಲ್‌ಬಾಗ್‌ನಲ್ಲಿ ಶುಕ್ರವಾರ ಮುಂಜಾನೆ ಉಚಿತವಾಗಿ ದೊರೆತ ಆಮ್ಲಜನಕದಲ್ಲಿ ತಾಜಾತನವಿತ್ತು, ಗುರುವಾರ ವಾಹನಗಳ ಹೊಗೆಯ ಧೂಳು ಬಾಗ್‌ನ ನಡೆದಾಡದ ಜೀವಗಳ ತಲೆಯ ಮೇಲೆ ಕೂರದ್ದಕ್ಕೆ. ಪರಿಣಾಮ ನರಸಿಂಹಯ್ಯ ತಾತ ಕೊಂಚ ಜಾಸ್ತಿ ಹೊತ್ತೇ ವಾಕ್ ಮಾಡಿದರಂತೆ.
ಪರೀಕ್ಷೆ ಮುಗಿಸಿ, ದಸರಾ ರಜೆ ಅನುಭವಿಸುತ್ತಿರುವ ಬೆಂಗಳೂರಿನ ಪುಟಾಣಿಗಳು ಕಾಗದದ ದೋಣಿ ಮಾಡಿಕೊಂಡು ಚರಂಡಿಯಲ್ಲಿ ಮಳೆ ಹರಿಸುವ ಹೊಳೆಗಾಗಿ ಕಾಯುತ್ತಿವೆ. ಕಳೆದ ವಾರ ಧೋ ಅಂತ ಮಳೆ ಬಂದರೂ ಪರೀಕ್ಷೆಯಿದ್ದ ಕಾರಣ ಶೀತ ಆಗುತ್ತೆ ಅಂತ ಅಮ್ಮ ದೋಣಿ ಆಟ ಆಡೋಕೆ ಬಿಟ್ಟಿರಲಿಲ್ಲ. ಆವತ್ತಿನ ಆಸೆ ತೀರಿಸಿಕೊಳ್ಳುವ ಮಕ್ಕಳ ಬಯಕೆ ಇನ್ನೂ ಈಡೇರಿಲ್ಲ. ಪಶ್ಚಿಮ ಬಂಗಾಳದಲ್ಲಿ ಮೊಳಕಾಲುದ್ದದ ನೀರಲ್ಲೇ ಸೈಕಲ್ ತಳ್ಳುವ ಚಾಕರಿ ಮಕ್ಕಳ ದುಃಖ ಅರ್ಥವಾಗದ ಈ ಮಕ್ಕಳು, ‘ನಮಗಾದ್ರೂ ಆ ಛಾನ್ಸ್ ಸಿಗಬಾರ್ದಿತ್ತೆ’ ಅನ್ನುತ್ತಿದ್ದಾರೆ.
ಮಳೆ ವಾಸನೆ ಮೂಗಿಗೇರಿಸುತ್ತಾ ಬಿಸಿಬಿಸಿ ಬೀದಿವಡೆ ತಿನ್ನೋ ಜನರು ವಡೆ ವ್ಯಾಪಾರಿ ಕಡೆ ತಿರುಗಿಯೂ ನೋಡುತ್ತಿಲ್ಲ. ಫುಟ್‌ಬಾತ್ ಬಜಾರು ಮಳೆಯ ಜೂಟಾಟವಿಲ್ಲದೆ ನಿರಾಳ ಸಾಗಿದೆ. ಸೆಕೆ ನಾಡು ಆಸ್ಟ್ರೇಲಿಯಾದ ಮಳೆಯಲ್ಲೇ ಆಡಿದ ಭಾರತ ಸೋಲಿನಲ್ಲಿ ಒದ್ದೆಮುದ್ದೆಯಾಗಿದೆ.
ಉತ್ತರ ಒಳನಾಡಿನಲ್ಲಿ ಮಾನ್ಸೂನ್ ಚಟುವಟಿಕೆಯಿಂದಿದ್ದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ತನಗೆ ಬೇಕಾದ ಕಡೆಗಳಲ್ಲಿ ಮಾತ್ರ ಮಳೆರಾಯ ಓಡಾಡಿದ್ದಾನೆ. ಸಿರಗುಪ್ಪದಲ್ಲಿ 6 ಸೆಂ.ಮೀ., ಮುದ್ದೇಬಿಹಾಳ್- ಅಫ್ಜಲ್‌ಪುರ- ಅರಸಲುನಲ್ಲಿ 4, ಬಾದಾಮಿ- ರಾಯಚೂರಲ್ಲಿ 3, ಮುಲ್ಕಿ, ಪಣಂಬೂರು, ಗುಲ್ಬರ್ಗಾ, ಬೀದರ್‌ಗಳಲ್ಲಿ 2 ಸೆಂ.ಮೀ. ಭೂಮಿ ನೆನೆಸಿದ್ದಾನೆ.
ಶುಕ್ರವಾರ ವಾಹನಗಳು ಮತ್ತೆ ಹೊಗೆಯುಗುಳಿವೆ. ಶನಿವಾರದ ಲಾಲ್‌ಬಾಗ್ ವಾಕಿಂಗ್ ಶುಕ್ರವಾರದಷ್ಟು ಚುರುಕಾಗಿ ಖಂಡಿತ ಇರುವುದಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications