Get Updates
Get notified of breaking news, exclusive insights, and must-see stories!

ವಿಶ್ವ ಪ್ರವಾಸೋದ್ಯಮ ದಿನದಂದು ಪ್ರವಾಸಿಗರಿಗೊಂದು ವೆಬ್‌ ಸೈಟ್‌

ನವದೆಹಲಿ : ಪ್ರವಾಸೋದ್ಯಮ ಇಲಾಖೆ ಬುಧವಾರದಂದು ಪ್ರವಾಸಿಗರಿಗೆ ಪ್ರವಾಸೀ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ, ಸುರಕ್ಷೆ ಮತ್ತು ಸೌಕರ್ಯಗಳನ್ನು ಒದಗಿಸುವ ಸರಣಿ ಕಾರ್ಯಕ್ರಮಗಳ ಯೋಜನೆಯನ್ನು ಬುಧವಾರ ಆರಂಭಿಸಿದೆ.

ವಿಶ್ವ ಪ್ರವಾಸೋದ್ಯಮ ದಿನವಾದ ಸೆಪ್ಟೆಂಬರ್‌ 27ರಂದು ಈ ಯೋಜನೆಯನ್ನು ಉದ್ಘಾಟಿಸಲಾಗಿದೆ. ಈ ಸಂದರ್ಭದಲ್ಲಿ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಅನಂತ್‌ ಕುಮಾರ್‌ ಪ್ರಾದೇಶಿಕ ಪ್ರವಾಸೀ ಕೇಂದ್ರಗಳ ಕುರಿತು ಮಾಹಿತಿ ಪಡೆವ ಸೌಲಭ್ಯವನ್ನು ಇನ್ನೊಂದು ವಾರದಲ್ಲಿ ಕಲ್ಪಿಸಲಾಗುವುದು ಎಂದರು. ಮೊದಲು ದೆಹಲಿಯಲ್ಲಿ ಮಾಹಿತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದ ಅನಂತ್‌ಕಮಾರ್‌ ಈ ಕಾರ್ಯಕ್ಕೆ ಸರಕಾರದಿಂದ ಬಿಡುಗಡೆಯಾಗಿರುವ ಹಣ ಏನೇನೂ ಸಾಲದು ಎಂದರು. ಈ ಯೋಜನೆಗೆ 480 ಬಿಲಿಯನ್‌ ರೂಪಾಯಿಗಳ ಅಗತ್ಯವಿದೆ. ಆದರೆ ಸರಕಾರ ಬಿಡುಗಡೆ ಮಾಡಿರುವ ಹಣ ಕೇವಲ 3.5 ಬಿಲಿಯನ್‌ ರೂಪಾಯಿ ಮಾತ್ರ.

ಮಾಹಿತಿತಂತ್ರಜ್ಞಾನ ಸಚಿವ ಪ್ರಮೋದ್‌ಮಹಾಜನ್‌ ಅವರು www.tourismofindia.com ಎಂಬ ವೆಬ್‌ ಸೈಟ್‌, ತಾಜ್‌ ಮಹಲ್‌ ಮತ್ತು ಖುಜರಾಹೋ ಕುರಿತ ಸಿಡಿ ರೋಮ್‌ಗಳನ್ನು ಬಿಡುಗಡೆ ಮಾಡಿದರು. ಇನ್ನೆರಡು ತಿಂಗಳಲ್ಲಿ ಈ ವೆಬ್‌ಸೈಟ್‌ ಮುಖಾಂತರ ಪ್ರವಾಸಿಗರು ಪ್ರವಾಸೀ ತಾಣಗಳ ಬಗೆಗಿನ ಸಂಪೂರ್ಣ ವಿವರ ಪಡೆಯಬಹುದು. ಐಟಿ ಎನ್ನುವುದು 21ನೇ ಶತಮಾತನದ ಭಾಷೆಯಾಗಿದ್ದು, ಪ್ರವಾಸೋದ್ಯಮದ ಮೇಲೆ ಇದು ನೇರ ಪರಿಣಾಮವುಂಟು ಮಾಡುತ್ತದೆ ಎಂದು ಮಹಾಜನ್‌ ಅಭಿಪ್ರಾಯಪಟ್ಟರು. ತಮ್ಮ ಇಲಾಖೆಯು ಪ್ರವಾಸೋದ್ಯಮದ ಅಭಿವೃದ್ಧಿಗೆ ಆರ್ಥಿಕ ಸಹಕಾರವೂ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದ ಮಹಾಜನ್‌ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳೆರಡೂ ಖಾಸಗೀ ವಲಯವನ್ನು ಅವಲಂಭಿಸಿರುವ ಪುಟ್ಟ ಖಾತೆಗಳು ಎಂದರು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+