ಆಯುಧ ಹಿಡಿದು ಹೋರಾಟಕ್ಕೆ ವೀರಪ್ಪನ್ ಸನ್ನಾಹ
ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಟಾಡಾ ಮತ್ತು ಇತರ ಮೊಕದ್ದಮೆಗಳ ಅಡಿಯಲ್ಲಿ ಜೈಲಿನಲ್ಲಿರುವ ತನ್ನ ಎಲ್ಲ ಸಹಚರರು ಬಿಡುಗಡೆಯಾಗದ ಹೊರತು ಒತ್ತೆಯಾಳುಗಳನ್ನು ಬಿಡುವುದು ಸಾಧ್ಯವಿಲ್ಲವೆಂದು ಮತ್ತೊಮ್ಮೆ ಸಾರಿ ಹೇಳಿರುವ ವೀರಪ್ಪನ್ ತನ್ನ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿದ್ದಾನೆ.
ಅಪಹೃತರ ಸಲುವಾಗಿ ಸರಕಾರಗಳು ತನ್ನ ಬೇಡಿಕೆಯನ್ನು ಈಡೇರಿಸಲೇ ಬೇಕು ಎಂದಿರುವ ವೀರಪ್ಪನ್, ತನ್ನ ತಾಳ್ಮೆಗೂ ಮಿತಿಯಿದೆ ಅದಕ್ಕಾಗಿ ಸರಕಾರಗಳು ಹೇಳಿದ್ದಷ್ಟನ್ನು ಮಾಡಬೇಕು ಎಂದು ಗುಡುಗಿದ್ದಾನೆ. ಟಿಎನ್‌ಎಲ್‌ಎ ಮತ್ತು ಟಿಎನ್‌ಆರ್‌ಟಿ ಸದಸ್ಯರೂ ಸೇರಿದಂತೆ ತಾವೆಲ್ಲರೂ ನಂಬಿಕೊಂಡು ಬಂದಿರುವ ಮೌಲ್ಯಗಳಿಗೆ ಜೀವಕೊಡಲೂ ಸಿದ್ಧ , ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಆಶ್ಚರ್ಯದ ಸಂಗತಿ ಎಂದರೆ ಈ ಬಾರಿಯ ಕ್ಯಾಸೆಟ್ ತಲುಪಿರುವುದು ರಾಜಕಾರಣಿ ನೆಡುಮಾರನ್ ಕಚೇರಿಗೆ.
ಸರಕಾರಗಳು ಒಂದು ಕಡೆ ಶಾಂತಿ ಸಂಧಾನ ನಡೆಸುತ್ತಾ ಇನ್ನೊಂದು ಕಡೆ ಪೊಲೀಸರ ಸಹಾಯದಿಂದ ಹಿಡಿಯಲು ಯತ್ನಿಸುತ್ತಿರುವುದು ಅಕ್ಷಮ್ಯ. ಕರ್ನಾಟಕದಲ್ಲಿರುವ ತಮಿಳರಿಗೆ ಸೈನ್ಯದ ನೆರವನ್ನಾದರೂ ಪಡೆದು ರಕ್ಷಣೆ ನೀಡಬೇಕೆಂದೂ ತಿಳಿಸಿದ್ದಾನೆ.
ಆಯುಧ ಹಿಡಿದು ಹೋರಾಟ : ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮಿಳರ ಬಿಡುಗಡೆಗೆ ಹೋರಾಡುತ್ತಿರುವ ನೆಡುಮಾರನ್ ಬಗ್ಗೆ ಟಿಎನ್‌ಎಲ್‌ಎ ಮತ್ತು ಟಿಎನ್‌ಆರ್‌ಟಿ ಸದಸ್ಯರು ತನಗೆ ತಿಳಿಸಿದ್ದು, ಈಗ ಆಯುಧ ಹಿಡಿದು ಹೋರಾಡದೆ ಅನ್ಯ ಮಾರ್ಗವಿಲ್ಲ ಹಾಗಾಗಿ ಇಂಥ ಹೋರಾಟದ ಅಂಗವಾಗಿ ತಾನು ಅಪಹರಣ ನಡೆಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಕಾವೇರಿ ಗಲಭೆ, ಮಧ್ಯಂತರ ಪರಿಹಾರದ ಆದೇಶ ಎಲ್ಲದರ ಬಗ್ಗೆಯೂ ಮಾತನಾಡಿರುವ ವೀರಪ್ಪನ್, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶವನ್ನು ಜಾರಿಗೊಳಿಸುವಂತೆ ಮಾಡುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ಸುಪ್ರೀಂಕೋರ್ಟ್‌ಗಳು ಈಗ ಕರ್ನಾಟಕವನ್ನು ಕಾನೂನು ವ್ಯವಸ್ಥೆ ಕಾಯ್ದುಕೊಳ್ಳಬೇಕು ಇಲ್ಲದಿದ್ದರೆ ರಾಜೀನಾಮೆ ಕೊಡಬೇಕು ಎಂದು ಹೇಳುತ್ತಿರುವುದಕ್ಕೆ ಅರ್ಥವಿಲ್ಲ ಎಂದು ಆರೋಪಿಸಿದ್ದಾನೆ.
ಕ್ರಮ ಏಕಿಲ್ಲ : ಇಂಧಿರಾಗಾಂಧಿ ಹತ್ಯೆಯ ಹಿಂದಿರುವ ಮಂತ್ರಿಗಳು ಮತ್ತು ರಾಜಕಾರಣಿಗಳು ಹಾಗೂ ರಷೀದ್ ಕೊಲೆ ಸಂಬಂಧ ಜಾಲಪ್ಪ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಗಂಭೀರ ಪ್ರಶ್ನೆಗಳನ್ನೂ ವೀರಪ್ಪನ್ ಎತ್ತಿದ್ದಾನೆ.ಎಂಟು ವರ್ಷಗಳಿಂದ ಜೈಲಿನಲ್ಲಿ ವಿಚಾರಣೆ ಇಲ್ಲದೆ ಕೊಳೆಯುತ್ತಿರುವವವರ ಸಂಬಂಧ ಮಾನವ ಹಕ್ಕುಗಳ ಬಗ್ಗೆಯೂ ಮಾತನಾಡಿದ್ದಾನೆ.
ಕ್ಯಾಸೆಟ್ ಅನ್ನು ಯಾರು, ಯಾವಾಗ ಯಾರಿಗೆ ಕೊಟ್ಟರು ಎಂಬ ಬಗ್ಗೆ ಈವರೆಗೆ ಖಚಿತವಾಗಿ ತಿಳಿದು ಬಂದಿಲ್ಲ. ಆದರೆ ನೆಡುಮಾರನ್ ಅವರ ಆದೇಶದಂತೆ ಕ್ಯಾಸೆಟ್‌ನ ಅಂಶಗಳನ್ನು ತಾವು ಫ್ಯಾಕ್ಸ್ ಮಾಡಿದ್ದಾಗಿ ಅವರ ಕಚೇರಿ ಸಹಾಯಕರು ತಿಳಿಸಿದ್ದಾರೆ. ನೆಡುಮಾರನ್ ಈಗ ಮಧುರೆಯಲ್ಲಿದ್ದಾರೆ. ಅಡಗುತಾಣದಿಂದ ಸಹ ನಿರ್ದೇಶಕ ನಾಗಪ್ಪ ತಪ್ಪಿಸಿಕೊಂಡು ಬಂದ ಕೆಲವೇ ಗಂಟೆಗಳಲ್ಲಿ ತಮಿಳುನಾಡು ತಲುಪಿರುವ ಹೊಸ ಕ್ಯಾಸೆಟ್‌ನಲ್ಲಿ ನಾಗಪ್ಪ ಅವರ ಬಗ್ಗೆ ಪ್ರಸ್ತಾಪವಿಲ್ಲ ಎನ್ನಲಾಗಿದೆ.
ಕ್ಯಾಸೆಟ್ ರ್ಯಾಕ್
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications