ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

60 ಇದ್ದ ಪದ್ಮ ಪ್ರಶಸ್ತಿಗಳ ಸಂಖ್ಯೆ ಈಗ ಶತಕಕ್ಕೇರಿಕೆ

By Staff
|
Google Oneindia Kannada News

ನವದೆಹಲಿ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗೌರವಿಸುವ ಸಲುವಾಗಿ ಕೇಂದ್ರ ಸರಕಾರ ನೀಡುವ ಪದ್ಮಭೂಷಣ, ಪದ್ಮ ವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳ ಸಂಖ್ಯೆಯನ್ನು 60ರಿಂದ 100ಕ್ಕೆ ಏರಿಸಲು ಸರಕಾರ ನಿರ್ಧರಿಸಿದೆ.

ಪ್ರಶಸ್ತಿ ಸಮಿತಿ ಪುರಸ್ಕಾರಗಳ ಸಂಖ್ಯೆನ್ನು ಹೆಚ್ಚಿಸುವಂತೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಷಯವನ್ನು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಮೋದ್‌ ಮಹಾಜನ್‌ ತಿಳಿಸಿದ್ದಾರೆ. ಇನ್ನು ಮುಂದೆ 20 ಪದ್ಮವಿಭೂಷಣ, 30 ಪದ್ಮ ಭೂಷಣ ಮತ್ತು 50 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ವಿದೇಶೀಯರು - ಅನಿವಾಸಿ ಭಾರತೀಯರಿಗೆ ನೀಡುವ ಪ್ರಶಸ್ತಿಯೂ ಈ ಹೆಚ್ಚಾದ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತದೆ. 1954ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿ ನೀಡುವ ಪದ್ಧತಿ ಜಾರಿಗೆ ಬಂತು. ಮಧ್ಯೆ ಕೆಲವು ತಾಂತ್ರಿಕ ತೊಡಕುಗಳು ಉಂಟಾದಾಗ್ಯೂ ಕೂಡ ಈಗ 1996ರಿಂದ ಪ್ರಶಸ್ತಿ ಪ್ರಕಟಣೆ ಹಾಗೂ ಪ್ರದಾನ ಯಥಾಪ್ರಕಾರವಾಗಿ ನಡೆಯುತ್ತಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X