ವೀರಪ್ಪನ್ ಕಣ್ತಪ್ಪಿಸಿ ಅಡಗುತಾಣದಿಂದ ತಪ್ಪಿಸಿಕೊಂಡು ಬಂದ ನಾಗಪ್ಪ
ಮೈಸೂರು : ನಾಗಪ್ಪ ಅವರನ್ನು ವೀರಪ್ಪ ಬಿಡುಗಡೆ ಮಾಡಿಲ್ಲ , ಅವರು ನರಹಂತಕನ ಕಣ್ಣು ತಪ್ಪಿಸಿ ಕಾಡಿನಿಂದ ಓಡಿ ಬಂದಿದ್ದಾರೆ.
ನಾಗಪ್ಪ ವೀರಪ್ಪನ್ ವಶದಿಂದ ತಪ್ಪಿಸಿಕೊಂಡು ಗಾಜನೂರಿಗೆ ಬಂದಿರುವುದನ್ನು ರಾಜ್‌ಕುಮಾರ್ ಅವರ ಕುಟುಂಬದ ಮೂಲಗಳೂ ಖಚಿತ ಪಡಿಸಿವೆ. ಅನಾರೋಗ್ಯದಿಂದ ಬಳಲುತಿದ್ದ ನಾಗಪ್ಪ ಅವರು, ಗಾಜನೂರಿನಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ತಿಳಿಸಿದ್ದಾರೆ.
ಕಳೆದ 60 ದಿನಗಳಿಂದಲೂ ವೀರಪ್ಪನ್ ವಶದಲ್ಲಿದ್ದ ನಾಗಪ್ಪ ಅವರು, ಮಲ ವಿಸರ್ಜನೆಗೆಂದು ಹೋದವರು, ವೀರಪ್ಪನ್ ಚಾರರ ಕಣ್ಣುತಪ್ಪಿಸಿ, ಗಾಜನೂರಿಗೆ ಓಡಿ ಬಂದಿದ್ದಾರೆಂದು, ಗಾಜನೂರಿನಲ್ಲಿ ಅವರನ್ನು ನೋಡಿರುವ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಳಿದ ಒತ್ತೆಯಾಳುಗಳ ಮೇಲೆ ಪರಿಣಾಮ ಏನು ? : ನಾಗಪ್ಪ ಅವರೇನೋ ವೀರಪ್ಪನ್ ವಶದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆದರೆ, ಇದರಿಂದ ಕಾಡಿನಲ್ಲಿ ವೀರಪ್ಪನ್ ವಶದಲ್ಲಿರುವವರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಬಗ್ಗೆ ಎಲ್ಲರ ಚಿಂತೆ ಆಗಿದೆ. ಗೋಪಾಲ್ ಮತ್ತು ವೀರಪ್ಪನ್ ನಡುವೆ ನಾಲ್ಕನೇ ಸುತ್ತಿನ ನಿರ್ಣಾಯಕ ಸಂಧಾನ ಮಾತುಕತೆಗಳು ನಡೆಯುತ್ತಿರುವಾಗ ನಾಗಪ್ಪ ತಪ್ಪಿಸಿಕೊಂಡಿರುವುದು, ವೀರಪ್ಪನ್‌ಗೆ ನುಂಗಲಾರದ ತುತ್ತಾಗಿರಲಿಕ್ಕೂ ಸಾಕು. ಗುರುವಾರ ಕರ್ನಾಟಕದಲ್ಲಿ ಬಂದ್ ನಡೆಯುತ್ತಿದ್ದಾಗ, ಅತ್ತ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಕರುಣಾನಿಧಿ ಅವರು, ರಾಜ್‌ಕುಮಾರ್ ಅವರ ಬಿಡುಗಡೆ ಗುರುವಾರವೇ ಆದರೂ ಆಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ನಾಗಪ್ಪ ಈಗ ವೀರಪ್ಪನ್ ವಶದಿಂದ ತಪ್ಪಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್‌ಕುಮಾರ್ ಹಾಗೂ ಮತ್ತಿಬ್ಬರ ಬಿಡುಗಡೆ ಮತ್ತಷ್ಟು ವಿಳಂಬವಾದರೂ ಆಗಬಹುದು ಶಂಕೆ ಮೂಡಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications