ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕ, ಕರಾವಳಿಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

By Staff
|
Google Oneindia Kannada News

ಬೆಂಗ-ಳೂ-ರು : ರಾಜ್‌ಕುಮಾರ್‌ ಬಿಡುಗಡೆಗೆ ಆಗ್ರಹಿಸಿ ಕೇಂದ್ರದ ಮೇಲೆ ಒತ್ತಡ ಹೇರಲು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಸಂಘಟನೆಗಳು ನೀಡಿದ್ದ 12 ಗಂಟೆಗಳ ಕರ್ನಾಟಕ ಬಂದ್‌ ಸಂಪೂರ್ಣ ಶಾಂತಿಯುತವಾಗಿತ್ತು. ಬಂದ್‌ ಕರೆಗೆ ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಉಡುಪಿ, ಗುಲ್ಬರ್ಗಾ, ಕಾರವಾರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿದ್ದರೆ, ದಾವಣಗೆರೆ, ಚಿತ್ರದುರ್ಗಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು, ಶಿವಮೊಗ್ಗ, ಹಾಸನ, ಚಾಮರಾಜನಗರ, ಕೋಲಾರ, ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಬಂದ್‌ಗೆ ಬಹುತೇಕ ಬೆಂಬಲ ವ್ಯಕ್ತವಾಗಿತ್ತು. ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದ ಚಿಕ್ಕ ಪುಟ್ಟ ಘಟನೆಗಳನ್ನು ಹೊರತು ಪಡಿಸಿ, ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.

ರಾಜ್ಯಾದ್ಯಂತ ಬಂದ್‌ ಶಾಂತಿಯುತವಾಗಿತ್ತು ಎಂದು ಪೊಲೀಸ್‌ ಮಹಾನಿರ್ದೇಶಕ ಸಿ. ದಿನಕರ್‌ ಹೇಳಿದ್ದಾರೆ. ಹೈಕೋರ್ಟ್‌ ನಿರ್ದೇಶನದಂತೆ ಬಂದ್‌ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.

ಗುಲ್ಬ-ರ್ಗಾ: ಗುಲ್ಬ-ರ್ಗಾ-ದ-ಲ್ಲಿ ಬಂದ್‌ ನೀರಸವಾಗಿತ್ತು. ಕೆಲ-ವು ಚಿ-ತ್ರ-ಮಂ-ದಿ-ರ-ಗ-ಳು ಪ್ರದ-ರ್ಶ-ನ ಸ್ಥಗಿ-ತ-ಗೊ-ಳಿ-ಸಿ-ದ್ದವು. ಕೇಂದ್ರ ಸರ-ಕಾ-ರಿ ಕಚೇ-ರಿ-ಗ-ಳೂ ಸೇರಿ-ದಂ-ತೆ ಬ್ಯಾಂಕ್‌-ಗ-ಳು, ಹೋಟೆ-ಲ್‌-ಗ-ಳು, ಅಂ-ಗ-ಡಿ ವಹಿ-ವಾ-ಟು, ಗ್ರಾಮಾಂ-ತ-ರ ಪ್ರದೇ-ಶ-ಗ-ಳ ಬಸ್‌ ಸೇವೆ-ಗ-ಳು ಎಂದಿ-ನಂ-ತೆ ಕಾರ್ಯನಿರ್ವಹಿಸಿದವು. ಕಾಲೇ-ಜು-ಗ-ಳನ್ನು ಹೊರ-ತು-ಪ-ಡಿ-ಸಿ ಎಲ್ಲಾ ಶಾಲೆ-ಗಳಿಗೆ ರಜೆ ಘೋಷಿ-ಸ-ಲಾ-ಗಿ-ತ್ತು.

ಮಿಶ್ರ-ಪ್ರ-ತಿ-ಕ್ರಿ-ಯೆ: ದಾವ--ಣ-ಗೆ-ರೆ, ಶಿವ-ಮೊ-ಗ್ಗ, ಚಿತ್ರ-ದು-ರ್ಗಗ-ಳ-ಲ್ಲಿ -ಮಿ-ಶ್ರ ಪ್ರತಿ-ಕ್ರಿಯೆ ವ್ಯಕ್ತ-ವಾ-ಗಿ-ದೆ ಎಂದು ಇನ್ಸ್‌-ಪೆ-ಕ್ಟ-ರ್‌ ಜನ-ರ-ಲ್‌ ಎ.ಆರ್‌. ಇನ್‌-ಫ್ಯಾಂಟ್‌ ತಿಳಿ-ಸಿ-ದ್ದಾ-ರೆ. ಮುನ್ನ-ಚ್ಚ-ರಿ-ಕೆ ಕ್ರಮ-ವಾ-ಗಿ 284 ಜನ-ರ-ನ್ನು ಪೊಲೀ-ಸ-ರು ವಶ-ಕ್ಕೆ ತೆಗೆ-ದು-ಕೊಂ-ಡಿ-ದ್ದರು. ದಾವ-ಣ-ಗೆ-ರೆ-ಯ-ಲ್ಲಿ ಎಲ್ಲ ವಾಣಿ-ಜ್ಯ ವಹಿ-ವಾ-ಟು ಸ್ಥಗಿ-ತ-ಗೊಂ-ಡಿ-ದ್ದವು. ಶಾಲಾ-ಕಾಲೇಜು-ಗ-ಳಿ-ಗೆ ರಜೆ ಘೋಷಿ-ಸ-ಲಾ-ಗಿತ್ತು. ಕೆಲ-ವು ಕಚೇ-ರಿ-ಗ-ಳು ಕಾರ್ಯ-ನಿ-ರ್ವ-ಹಿ-ಸಿವೆ. ಸಾರಿ-ಗೆ ಸಂಸ್ಥೆ-ಯ ಬಸ್‌-ಗ-ಳು ಹಾಗೂ ಆಟೋ-ರಿ-ಕ್ಷಾ-ಗ-ಳು ಓ-ಡಾ-ಡಿದವು. ಪೆಟ್ರೋ-ಲ್‌ ಬಂ-ಕ್‌-ಗ-ಳು ಮುಚ್ಚಿ-ದ್ದವು.

ಬಳ್ಳಾ-ರಿ ಜಿಲ್ಲೆ-ಯ ಹರ-ಪ-ನ-ಹ-ಳ್ಳಿ- ಪಟ್ಟ-ಣ-ದ-ಲ್ಲಿ ಗುಂಪೊಂ-ದು ವೀರ-ಪ್ಪ-ನ್‌ ಪ್ರತಿ-ಕೃ-ತಿ ದಹ-ನ ಮಾಡಿ-ತು. ದಾವ-ಣ-ಗೆ-ರೆ- ಜಿಲ್ಲೆಯ ಜಗ-ಳೂ-ರಿ-ನ-ಲ್ಲಿ ಬಂ-ದ್‌ ನೀರ-ಸ-ವಾ-ಗಿ-ತ್ತು ಎಂದು ವರ-ದಿ-ಗ-ಳು ತಿಳಿಸಿ-ವೆ.

ಹು-ಬ್ಬ-ಳ್ಳಿ-ಧಾರ-ವಾ-ಡ : ಸಾರಿ-ಗೆ ಸೇವೆ ಸೇರಿ-ದಂ-ತೆ ಎಲ್ಲಾ ವಾಣಿ-ಜ್ಯ ವಹಿ-ವಾ-ಟು-ಗ-ಳು ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಎಂದಿ-ನಂ-ತಿತ್ತು. ಸುಮಾ-ರು 40 ಜನ-ರಿ-ದ್ದ ರಾಜ್‌ ಅಭಿ-ಮಾ-ನಿ-ಗ-ಳು ಮಾತ್ರ ಪ್ರಮು-ಖ ಬೀದಿ-ಗ-ಳ-ಲ್ಲಿ ಮೆರ-ವ-ಣಿ-ಗೆ ನ-ಡೆ-ಸಿ ತಹ-ಶೀ-ಲ್ದಾ-ರ-ರಿ-ಗೆ ಮನ-ವಿ ಸಲ್ಲಿ-ಸಿ-ದ-ರು. ಚಿತ್ರ-ಮಂ-ದಿ-ರ-ಗ-ಳ ಮಾಲಿಕರು ಬಂ-ದ್‌-ಗೆ ಬೆಂ-ಬ-ಲ ವ್ಯಕ್ತ-ಪ-ಡಿ-ಸಿ ಬೆಳ-ಗಿ-ನ ಎರ-ಡು ಪ್ರದ-ರ್ಶ-ನ-ಗ-ಳ-ನ್ನು ರದ್ದು-ಪ-ಡಿ-ಸಿ-ದ್ದರು ಎಂದು ಪೊಲೀ-ಸ್‌ ಕಮೀ-ಷ-ನ-ರ್‌ ಧರ್ಮ-ಪಾ-ಲ್‌ ನೇಗಿ ತಿಳಿ-ಸಿ-ದ್ದಾ-ರೆ.

ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X