Get Updates
Get notified of breaking news, exclusive insights, and must-see stories!

ರೈತರಿಗೆ ವಿದೇಶೀ ಬಿತ್ತನೆ ಬೀಜ ದೊರಕಿಸಲು ಕೇಂದ್ರ ಬದ್ಧ- ಪರೋಡ

ಬೆಂಗಳೂರು : ಕೇಂದ್ರ ಸರ್ಕಾರ ಸದ್ಯದಲ್ಲೇ ಬೀಜನೀತಿ (ಸೀಡ್‌ ಪಾಲಿಸಿ) ಯನ್ನು ಪುನರ್‌ ಪರಾಮರ್ಶಿಸಲಿದ್ದು, ಬಿತ್ತನೆ ಬೀಜಗಳ ಆಮದಿಗೆ ಈಗ ಇರುವ ಅಡೆತಡೆಗಳೆಲ್ಲಾ ತೊಡೆದು ಹೋಗಲಿವೆ ಎಂದು ಭಾರತೀಯ ಕೃಷಿ ಸಂಶೋಧನಾ ಸಮಿತಿ (ಐ.ಸಿ.ಎ.ಆರ್‌) ಯ ಡೈರೆಕ್ಟರ್‌ ಜನರಲ್‌ ಆರ್‌.ಎಸ್‌. ಪರೋಡ ಮಂಗಳವಾರ ತಿಳಿಸಿದ್ದಾರೆ.

ಏಕ ಗವಾಕ್ಷಿ ಮಂಜೂರಾತಿ, ಹೊಸ ದಿಗ್ಬಂಧನ -ಪ--ದ್ಧ-ತಿ ಹಾಗೂ ಸೂಕ್ತ ರೀತಿಯ ಪರಿಶೀಲನಾ ಪದ್ಧತಿಗಳನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು. ಇದರಿಂದ ಬಿತ್ತನೆ ಬೀಜಗಳ ಆಮದು ಕುರಿತ ಗೊಂದಲ ಬಗೆಹರಿಯಲಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂಥ ನೀತಿಯನ್ನು ಭಾರತವೇ ಮೊದಲು ಜಾರಿಗೆ ತರುತ್ತಿರುವುದು ಎಂದು ನಗರದಲ್ಲಿ ನಡೆದ ಸೀಡ್‌ 2000 ಸಮಾವೇಶದ ಚರ್ಚೆಯಲ್ಲಿ ಪರೋಡ ಸುದ್ದಿಗಾರರಿಗೆ ಹೇಳಿದರು.

ಐ.ಸಿ.ಎ.ಆರ್‌ನ ಮಾಜಿ ಡೈರೆಕ್ಟರ್‌ ಜನರಲ್‌ ಎಂ.ವಿ. ರಾವ್‌ ನೈತೃತ್ವದ ಸಮಿತಿ ಬೀಜನೀತಿಯ ಪುನರ್‌ ಪರಾಮರ್ಶೆಗೆ ಸೂಕ್ತ ನಿರ್ದೇಶನಗಳನ್ನು ನೀಡಿದೆ. ನಿರ್ದೇಶನಗಳನ್ನು ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಿ, ಜಾರಿಗೆ ತರಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.

ಸಸ್ಯ ವೈವಿಧ್ಯತೆ ರಕ್ಷಣೆ ಮತ್ತು ರೈತರ ಹಕ್ಕು ಮಸೂದೆಯನ್ನು ನವೆಂಬರ್‌ ತಿಂಗಳಲ್ಲಿ ಸಂಸತ್ತಿನಲ್ಲಿ ಜಾರಿಗೆ ತರಲಾಗುವುದು. ಸಾಹಿಬ್‌ ಸಿಂಗ್‌ ವರ್ಮ ನೇತೃತ್ವದ ಜಂಟಿ ಆಯ್ಕೆ ಸಮಿತಿ ಮಸೂದೆಯಲ್ಲಿ ಕೆಲ ಅಂಶಗಳನ್ನು ಸೇರಿಸುವಂತೆ ಈಗಾಗಲೇ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+