ಪ್ಯಾರಿಸ್ ರಜತ ಪರದೆಯ ಮೇಲೆ ಸಕ್ಕರೆ ಬೈಲು
ಪ್ಯಾರಿಸ್: ಈಗಾಗಲೇ ನಾಲ್ಕು ಭಾರತೀಯ ಸಿನಿಮಾಗಳು ತೆರೆ ಕಂಡಿರುವ ಫ್ರಾನ್ಸ್‌ನಲ್ಲಿ ಕರ್ನಾಟಕದ ಸಕ್ಕರೆ ಬೈಲು ಆನೆಗಳ ಕುರಿತ ಚಿತ್ರ ಸೆ. 27ರ ಬುಧವಾರದಂದು ತೆರೆ ಕಾಣಲಿದೆ.
ಒಂದೇ ವರ್ಷದಲ್ಲಿ ತೆರೆ ಕಂಡ ಐದನೇ ಚಿತ್ರವಾಗಲಿರುವ ಹಾತಿ ಚಿತ್ರದ ನಿರ್ದೇಶಕರು ಫಿಲಿಪ್ ಗೌಟಿಯರ್.
ಚಿತ್ರ ಮಕ್ಬೂಲ್ ಮತ್ತು ಆತನ ಆನೆ ವಿಕ್ರಮ್ ಸುತ್ತ ತಿರುಗುತ್ತದೆ. ವಿಕ್ರಮ್‌ನನ್ನು ಸಾಕಲಾರದೆ ಮಕ್ಬೂಲ್, ಸರಕಾರಕ್ಕೆ ಮಾರುತ್ತಾನೆ. ನಂತರ ಹೊಸ ಮಾವುತನ ಸಂಗಡ ಬೆಳೆಯುವ ವಿಕ್ರಮ್ ಅಂತಿಮವಾಗಿ ತನ್ನ ಒಡೆಯ ಮಕ್ಬೂಲ್‌ನನ್ನು ಸೇರಿಕೊಳ್ಳುತ್ತದೆ. ಇದು ಚಿತ್ರದ ಸಾರಾಂಶ.
ಪತ್ನಿ ಸ್ಫೂರ್ತಿ: 1993ರಲ್ಲಿ ಮಾವುತರ ಬದುಕಿನ ಬಗ್ಗೆ ಚಿತ್ರ ನಿರ್ಮಿಸಬೇಕೆಂಬ ಸ್ಫೂರ್ತಿಯನ್ನು ದಕ್ಷಿಣ ಭಾರತ ಮೂಲದ ತಮ್ಮ ಪತ್ನಿ ಪ್ರಜ್ಞಾ ಚೋಟಾ ಅವರ ಮೂಲಕ ಪಡೆದುದ್ದಾಗಿ ನಿರ್ದೇಶಕ ಫಿಲಿಪ್ ಗೌಟಿಯರ್ ಹೇಳಿದ್ದಾರೆ. ಈ ಭಾಗದ ಜನರ ಮತ್ತು ಮಾವುತರ ಜೀವನ ಮತ್ತು ಇತರ ವಿಷಯಗಳನ್ನು ಅರಿತಿದ್ದ ತಮ್ಮ ಪತ್ನಿ ಸಹಕಾರದಿಂದ ಚಿತ್ರ ಸಹಜವಾಗಿ ಮೂಡಿಬರಲು ಸಹಾಯಕವಾಯಿತು. ಈ ಸಂಬಂಧ ಲಂಡನ್‌ನಲ್ಲಿ ಮೂರು ವರ್ಷ ಸಂಶೋಧನೆ ನಡೆಸಿದ್ದಾಗಿ ಫಿಲಿಪ್ ಹೇಳಿದ್ದಾರೆ.
ಕೆನಡಾದ ರಾಕ್ ಡೀಮರ್ ಎಂಬವರು ನಿರ್ಮಿಸಿರುವ ಈ ಚಿತ್ರದ ಶೂಟಿಂಗ್ 1996ರ ನವೆಂಬರ್‌ನಲ್ಲಿ ಪ್ರಾರಂಭವಾಗಿ 14 ತಿಂಗಳಲ್ಲಿ ಮುಗಿಯಿತು. ಇದರಲ್ಲಿ 150 ಆನೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ಫಿಲಿಪ್ ತಿಳಿಸಿದ್ದಾರೆ.
ಸಕ್ಕರೆಬೈಲು : ಮೈಸೂರು ಮಹಾರಾಜರ ಮಾವುತರ ಸ್ಥಳವಾಗಿದ್ದ ಸಕ್ಕರೆಬೈಲು, ಈಗಲೂ ರಾಜ್ಯ ಸರಕಾರದ ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿರುವ ಆನೆಗಳನ್ನು ಪಳಗಿಸುವ ಮತ್ತು ತರಬೇತಿ ನೀಡುವ ಸ್ಥಳವಾಗಿ ಮಾರ್ಪಟ್ಟಿದೆ. ಆನೆಗಳನ್ನು ಪಳಗಿಸುವ ರಾಜ್ಯದ ಏಕೈಕ ಸ್ಥಳವಾಗಿರುವ ಸಕ್ಕರೆಬೈಲು ಅರಣ್ಯಪ್ರದೇಶದಲ್ಲಿ ವಿಶ್ವವಿಖ್ಯಾತ ದಸರೆಯಲ್ಲಿ ಭಾಗವಹಿಸುವ ಎಲ್ಲ ಆನೆಗಳಿಗೂ ತರಬೇತಿ ನೀಡಲಾಗುತ್ತದೆ. ದಸರೆಗಲ್ಲದೆ ಇತರ ಕೆಲಸಗಳಿಗೂ ಬಳಸುವ ಆನೆಗಳನ್ನು ಇಲ್ಲಿಯೇ ಪಳಗಿಸಲಾಗುತ್ತದೆ.
ಕಳೆದ ಎರಡು ವರ್ಷಗಳವರೆಗೆ ಅಂಬಾರಿ ಹೊರುತ್ತಿದ್ದ ದ್ರೋಣನಿಂದ ಹಿಡಿದು ಈಗಿನ ಬಲರಾಮನ ತನಕ ಎಲ್ಲ ಆನೆಗಳ ತರಬೇತಿ ಶಿಬಿರ ಸಕ್ಕರೆಬೈಲು. ಕಟ್ಟೇಪುರ, ತಿತಿಮತಿ, ಹೆಬ್ಬಳ್ಳ, ಬೇಡಗುಳಿ, ದೊಡ್ಡಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಿಂದ ಆನೆಗಳನ್ನು ಹಿಡಿದು ಇಲ್ಲಿನ ಶಿಬಿರಕ್ಕೆ ತರಲಾಗುತ್ತದೆ.
ಸಕ್ಕರೆಬೈಲು ರಾಜ್ಯದ ಸುಂದರ ಪ್ರವಾಸಿ ತಾಣ ಹಾಗೂ ಚಿತ್ರೀಕರಣ ತಾಣ. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿವೆ. ಇಷ್ಟಾದರೂ ಇಲ್ಲಿ ಆನೆಗಳ ಪಳಗಿಸುವಿಕೆ, ಮಾವುತರ ಬಗೆಗಿನ ವಿವರಗಳಿರುವ ಚಿತ್ರಗಳು ಈವರೆಗೆ ಬಂದಿರಲಿಲ್ಲ.
ದೇಶ ಬಿಟ್ಟು ಹೋದವರಿಗೆ ದೇಶೀ ಮನರಂಜನೆ
ರಜನೀಕಾಂತ್ ಅಭಿನಯದ ತಮಿಳು ಚಿತ್ರ ಪಡೆಯಪ್ಪ, ಹಿಂದಿಯ ಹಮ್ ಆಪ್‌ಕೆ ಹೈನ್ ಕೌನ್, ಕಮಲ್‌ಹಾಸನ್ ಅವರ ಇಂಡಿಯನ್ ಸೇರಿದಂತೆ ಈಗಾಗಲೇ ನಾಲ್ಕು ಚಿತ್ರಗಳು ತುಂಬಿದ ಗೃಹಗಳಿಂದ ಪ್ರದರ್ಶನ ಕಂಡಿವೆ. ಇವೆಲ್ಲವೂ ಬಹುತೇಕ ಭಾರತದ ಸಂಪ್ರದಾಯ, ಹೋರಾಟ ಮುಂತಾದ ಸಾಂಸ್ಕೃತಿಕ ಅಂಶಗಳನ್ನಿಟ್ಟುಕೊಂಡು ಮಾಡಿದ ಚಿತ್ರಗಳಾಗಿವೆ. ಇಂಡಿಯನ್ ಚಿತ್ರ ಹೊರತುಪಡಿಸಿದರೆ ಉಳಿದ ಎಲ್ಲ ಚಿತ್ರಗಳ ಚಿತ್ರೀಕರಣ ಬಹುತೇಕ ಭಾರತದಲ್ಲೇ ನಡೆದಿದೆ. ದಕ್ಷಿಣ ಭಾರತೀಯರೇ ಹೆಚ್ಚಾಗಿರುವ ಫ್ರಾನ್ಸ್‌ನಲ್ಲಿ ಹಿಂದಿ ಮತ್ತು ತಮಿಳು ಚಿತ್ರಗಳಿಗೆ ವ್ಯಾಪಕ ಬೇಡಿಕೆಯಿದೆ. ಬ್ರಿಟನ್‌ಗೆ ಹೋಲಿಸಿದರೆ ಫ್ರಾನ್ಸ್ , ಭಾರತೀಯ ಚಿತ್ರಗಳಿಗೆ ಸಣ್ಣ ಮಾರುಕಟ್ಟೆಯೆಂದೇ ಹೇಳಬೇಕು.
ಫ್ರಾನ್ಸ್‌ನಲ್ಲಿ ಸುಮಾರು ಐದು ಲಕ್ಷದಷ್ಟಿರುವ ಭಾರತ, ಬಾಂಗ್ಲಾ, ಲಂಕಾ ಮತ್ತು ಪಾಕಿಸ್ತಾನದಿಂದ ಹೋದ ವಲಸಿಗರು ಮನರಂಜನೆಗೆ ಭಾರತೀಯ ಚಿತ್ರಗಳನ್ನೇ ಅವಲಂಬಿಸಬೇಕಾಗಿದೆ. ಪ್ರತಿ ತಿಂಗಳೂ ಬರುತ್ತಲೇ ಇರುವ ವಲಸಿಗರಿಂದ ಸಿನಿಮಾ ಮಾರುಕಟ್ಟೆಯಂತೂ ವಿಸ್ತಾರಗೊಳ್ಳುತ್ತಿದೆ.
1 ಮುಖಪುಟ / ಮನೆ ಆಚೆಯ ಮನೋನಂದನ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications