ಬೃಹತ್ ಖೋಟಾ ನೋಟು ಜಾಲ ಪತ್ತೆ, 9 ಜನರ ಬಂಧನ
ಬೆಂಗಳೂರು : ನಗರ ಪೊಲೀಸರು ಬೃಹತ್ ಖೋಟಾ ನೋಟು ಜಾಲವನ್ನು ಬಯಲಿಗೆಳೆದಿದ್ದು, ಓರ್ವ ಮಹಿಳೆ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ.
ಬಂದಿತರೆಲ್ಲಾ ಕೇರಳದವರಾಗಿದ್ದು, ಭಾರತ ಮತ್ತು ಯುನೈಟೆಡ್ ಅರೇಬಿಕ್ ಎಮಿರೇಟ್ಸ್‌ನ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದರು. ಮುದ್ರಣಕ್ಕಾಗಿ ಬಳಸುತ್ತಿದ್ದ ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳು, ಚಲಾವಣೆ ಮಾಡಿರದ 20 ಲಕ್ಷದ 52 ಸಾವಿರ ರುಪಾಯಿ ಮೌಲ್ಯದ ಖೋಟಾನೋಟುಗಳು, ಬಂದಿತರ ವಾಹನಗಳು ಹಾಗೂ ಸೆಲ್‌ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಮಡಿಯಾಳ್ ಸೋಮವಾರ ತಿಳಿಸಿದ್ದಾರೆ.
ಪ್ರಸಾದ್ ಬಾಬು ಹಾಗೂ ಡೆಸ್ಕ್ ಟಾಪ್‌ನಲ್ಲಿ ಡಿಪ್ಲೊಮ ಪದವಿ ಪಡೆದಿರುವ ಬಿನಯ್ ಜೋಸೆಫ್ ಈ ಜಾಲದ ಪ್ರಮುಖ ಆರೋಪಿಗಳು. ಈ ಹಿಂದೆ ಕೇರಳದ ಕಾಸರಗೋಡಿನಲ್ಲಿ ಖೋಟಾನೋಟು ಮುದ್ರಿಸುತ್ತಿದ್ದ ಪ್ರಸಾದ್ ಬಾಬು ಬಂಧನಕ್ಕೊಳಗಾಗಿದ್ದು, ಜಾಮೀನು ಪಡೆದಿದ್ದ ಎಂದು ಮಡಿಯಾಳ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆರೋಪಿ ಬಿನಯ್, ಖೋಟಾ ನೋಟುಗಳನ್ನು ಹೇಗೆ ಮುದ್ರಿಸುತ್ತಿದ್ದರು ಎಂಬುದನ್ನು ಪ್ರದರ್ಶಿಸಿದನು. ಒಂದು ಪಿ.ಸಿ., ಒಂದು ಸ್ಕಿೃೕನ್ ಪ್ರಿಂಟಿಂಗ್ ಯಂತ್ರ, ನೋಟುಗಳನ್ನು ಮುದ್ರಿಸುವ ಹಾಗೂ ಕತ್ತರಿಸುವ ಯಂತ್ರ, ಒಂದು ಅಂಬಾಸೆಡರ್ ಕಾರು ಹಾಗೂ ಎರಡು ಮೋಟಾರು ಸೈಕಲ್ಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
50, 100 ಹಾಗೂ 500 ರು. ನೋಟುಗಳ ಸುಮಾರು 50 ಲಕ್ಷ ರುಪಾಯಿಯನ್ನು ಬೆಂಗಳೂರು, ಮುಂಬೈ ಹಾಗೂ ಕೇರಳದ ಕೆಲವು ಪ್ರದೇಶಗಳಲ್ಲಿ ಚಲಾವಣೆ ಮಾಡಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ವಶಪಡಿಸಿಕೊಂಡಿರುವ 500 ಹಾಗೂ 50 ರುಪಾಯಿ ನೋಟುಗಳನ್ನು ಗೋಷ್ಠಿಯಲ್ಲಿ ಪ್ರದರ್ಶಿಸಿ-ದರು.
ಕಳೆದ ಒಂದೂವರೆ ತಿಂಗಳಲ್ಲಿ ಬೆಂಗಳೂರು ಪೊಲೀಸರು ಪತ್ತೆ ಹಚ್ಚುತ್ತಿರುವ 3ನೇ ಖೋಟಾ ಜಾಲ ಇದಾಗಿದ್ದು, ಈ ಮೊದಲು ನಕಲಿ ಒಂದಂಕಿ ಲಾಟರಿ ಹಾಗೂ ನಕಲಿ ಛಾಪಾ ಕಾಗದ ಜಾಲ ಪತ್ತೆ ಮಾಡಿರುವುದನ್ನು ಸ್ಮರಿಸಬಹುದು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications