500 ಬೆಂಬಲಿಗರೊಂದಿಗೆ ನಾಳೆ ಕಾಡಿಗೆ ಹೋಗುತ್ತಾರಂತೆ ರಮೇಶ್
ಬೆಂಗಳೂರು : ಸ್ವಾತಂತ್ರ್ಯ ಯೋಧರು, ಶಾಲಾ ಬಾಲಕರು, ರಾಜ್ ಅಭಿಮಾನಿಗಳು ವೀರಪ್ಪನ್ ವಶದಿಂದ ಡಾ. ರಾಜ್‌ಕುಮಾರ್ ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗುವ ವಿಫಲ ಯತ್ನ ಮಾಡಿದ್ದು, ನಿಮಗೂ ಗೊತ್ತಲ್ಲ. ರಾಜ್‌ಕುಮಾರ್ ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗಲು ತಾವೂ ಸಿದ್ಧ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ತಾರೆ ಹಾಗೂ ಸಂಸತ್ ಸದಸ್ಯೆ ಜಯಪ್ರದಾ ಹಾಯಾಗಿ ಅಮೆರಿಕಕ್ಕೆ ಹೋಗಿದ್ದೂ ಇತಿಹಾಸ.
ಈಗ ಅದೇ ರೀತಿಯ ಹೇಳಿಕೆಯನ್ನು ಮಾಜಿ ಸಚಿವ ಎಸ್. ರಮೇಶ್ ಶುಕ್ರವಾರ ನೀಡಿದ್ದಾರೆ. ತಮ್ಮ 500 ಮಂದಿ ಬೆಂಬಲಿಗರೊಂದಿಗೆ ಮೌನ ಮೆರವಣಿಗೆಯಲ್ಲಿ ಶನಿವಾರ ಕಾಡಿಗೆ ಹೋಗುವ ಸಾಹಸವನ್ನು ತಾವು ಮಾಡುತ್ತಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಮೇಶ್ ಕೇವಲ ಮಾಜಿ ಸಚಿವರಷ್ಟೇ ಅಲ್ಲ. ಚಲನಚಿತ್ರ ನಿರ್ಮಾಪಕರು, ವಿತರಕರು. ಮಿಗಿಲಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಕಾಲ ಅಲ್ಲೂ ರಾಜಕೀಯ ಮಾಡಿದವರು. ಕಳೆದ 54 ದಿನದಿಂದ ಸುಮ್ಮನ್ನಿದ್ದ ಇವರು ಈಗ ಇದ್ದಕ್ಕಿದ್ದಂತೆ ರಾಜ್‌ಕುಮಾರ್ ಅವರನ್ನು ಬಿಡಿಸಿಕೊಂಡು ಬರಲು ತಮ್ಮ ಬೆಂಬಲಿಗರೊಂದಿಗೆ ಕಾಡಿಗೆ ಹೊರಡುವ ನಿರ್ಧಾರ ಕೈಗೊಂಡಿರುವುದು ಎಲ್ಲರ ಹುಬ್ಬೇರಿಸಿದೆ.
ಕಾಡಿಗೆ ಹೋಗುವುದಾಗಿ ಹೇಳಿಕೆ ಕೊಟ್ಟಿದ್ದ ರಜನಿಕಾಂತ್, ಜಯಪ್ರದಾ, ಅಂಬರೀಶ್ ಎಲ್ಲರೂ ನಾಡಿನಲ್ಲಿ ಹಾಯಾಗಿರುವಾಗ ಗೋಪಾಲ್ ಮಾತ್ರ ಹೆಗಡೆ ಅವರು ಹೇಳಿದಂತೆ ಬಚ್ಚಲು ಮನೆಗೆ ಹೋದಂತೆ ಪದೇ ಪದೇ ಕಾಡಿಗೆ ಹೋಗುತ್ತಿದ್ದಾರೆ. ರಮೇಶ್ ಅವರು ಗೋಪಾಲ್‌ಗೆ ಕಂಪನಿ ಕೊಡುತ್ತಾರೇನೋ ಕಾದು ನೋಡೋಣ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications