Get Updates
Get notified of breaking news, exclusive insights, and must-see stories!

ಒಳಚರಂಡಿ ವ್ಯವಸ್ಥೆಗೆ ಹಿಡಿದ ಕನ್ನಡಿ

ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಭಾರಿ ಮಳೆ ಆಯಿತು ಎಂದು ಹೇಳಿದ್ದೆವಲ್ಲವೇ. ಬೆಂಗಳೂರಿನಲ್ಲಿ ಬಿದ್ದಿದ್ದು ಕೇವಲ 3 ಸೆಂಟಿ ಮೀಟರ್‌ ಮಳೆ ಮಾತ್ರ. ಆದರೂ, ಬೆಂಗಳೂರಿನಲ್ಲಿ ನಿನ್ನೆ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿನ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು.

ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿತ್ತು. ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ, ರಸ್ತೆಯಲ್ಲಿ ನೀರು ಕೆರೆಯಂತೆ ನಿಂತಿತ್ತು. ಮೈಕೋ ಲೇಔಟ್‌, ಬಿಟಿಎಂ ಲೇಔಟ್‌, ಗಿರಿನಗರ ಮುಂತಾದ ಪ್ರದೇಶಗಳಲ್ಲಿ ಒಂದೂವರೆ ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತಿತ್ತು. ದ್ವಿಚಕ್ರ ವಾಹನ ಚಾಲಕರಂತೂ ನೀರಿನಲ್ಲಿಯೇ ತಮ್ಮ ವಾಹನ ಓಡಿಸಲು ಹೋಗಿ ಪಟ್ಟ ಪಾಡು ಅಷ್ಟಿಷ್ಟಲ್ಲ.

ತಗ್ಗು ಪ್ರದೇಶದ ಜನರಂತೂ ಬೆಂಗಳೂರು ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದುದು ಸಾಮಾನ್ಯವಾಗಿತ್ತು. ಬೆಂಗಳೂರಿನ ಬಹುತೇಕ ಒಳಚರಂಡಿಗಳು ಕಟ್ಟಿಕೊಂಡಿರುವ ಕಾರಣ ಜಲಮಂಡಳಿಯ ಕಚೇರಿಗಳ ಮುಂದೆ ಬುಧವಾರ ಬೆಳಗ್ಗೆ ಜನರು ದೂರು ದಾಖಲಿಸಲು ಸಾಲು ಗಟ್ಟಿ ನಿಂತಿದ್ದರು.

ಹನುಮಂತನಗರ, ಚಾಮರಾಜಪೇಟೆ, ಎನ್‌.ಆರ್‌. ಕಾಲೋನಿ, ಬನಶಂಕರಿ, ಗಿರಿನಗರ, ಯಶವಂತಪುರಗಳಲ್ಲಿ ಕನಿಷ್ಠ 10 ಮರಗಳು ನೆಲಕಚ್ಚಿದ ಕಾರಣ ಸಂಚಾರ ಕೆಲ ಕಾಲ ಸ್ತಬ್ದವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ, ಸಂಚಾರವನ್ನು ಸುಗಮಗೊಳಿಸಲು ಪೊಲೀಸರೊಂದಿಗೆ ಹರ ಸಾಹಸ ನಡೆಸಿದರು.

ಈ ಮಧ್ಯೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿದೆ. ಉತ್ತರ ಒಳನಾಡಿನ ಹಲವೆಡೆ ಹಾಗೂ ಕರಾವಳಿಯ ಅಲ್ಲಲ್ಲಿ ಮಳೆ ಬಿದ್ದಿದೆ. ಮೂರ್ನಾಡಿನಲ್ಲಿ ಅತಿ ಹೆಚ್ಚು ಎಂದರೆ 8 ಸೆಂಟಿ ಮೀಟರ್‌ ಮಳೆ ಆಗಿದೆ. ಮಧುಗಿರಿಯಲ್ಲಿ 7 ಸೆಂಟಿ ಮೀಟರ್‌, ಬಂಟ್ವಾಳ, ಬನವಾಸಿ, ಚಿಕ್ಕನಾಯಕನಹಳ್ಳಿ, ಹೊಳಲ್ಕೆರೆಗಳಲ್ಲಿ 4 ಸೆಂಟಿ ಮೀಟರ್‌, ರಬಕವಿ, ಯಲಹಂಕ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನಲ್ಲಿ ಸರಾಸರಿ 3 ಸೆಂಟಿ ಮೀಟರ್‌ ಮಳೆ ಬಿದ್ದಿದೆ.

ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡು ಹಾಗೂ ಕರಾವಳಿ ಕರ್ನಾಟಕದ ಅಲ್ಲಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಒಂದೆರಡು ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಈಗ ಬೆಂಗಳೂರಿನಲ್ಲಿ 8 ಗಂಟೆ. ಈಗಂತೂ ಗುಡುಗು, ಸಿಡಿಲು, ಮಿಂಚಿನ ಆರ್ಭಟಗಳೊಂದಿಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ನಿಮ್ಮೂರಲ್ಲಿ ಹೇಗೆ ? ಮಳೆ - ಬೆಳೆ ಚೆನ್ನಾಗಿದೆಯಲ್ಲ. ಎಲ್ಲರೂ ಕ್ಷೇಮವಷ್ಟೇ?.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+