Get Updates
Get notified of breaking news, exclusive insights, and must-see stories!

ಸಿಇಟಿ : ಉಳಿಕೆ ಸೀಟುಗಳ ಭರ್ತಿಗೆ ಕೋರ್ಟ್‌ ನಿರ್ದೇಶನ

ಬೆಂಗಳೂರು : 2000-2001ನೇ ಸಾಲಿಗೆ ಉಳಿದಿರುವ 154 ವೈದ್ಯಕೀಯ ಸೀಟುಗಳ ಭರ್ತಿಗೆ ಸಂಬಂಧಿಸಿದಂತೆ ಕನ್ನಡೇತರರಿಗೆ ಶೇಕಡಾ 15 ಸೀಟುಗಳನ್ನು ನೀಡಬಹುದೆಂದು ಮಂಗಳವಾರ ರಾಜ್ಯ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಸಂಬಂಧ ಸಾಮಾನ್ಯ ಪರೀಕ್ಷಾ ಪ್ರವೇಶ ಕೇಂದ್ರಕ್ಕೆ ಮಾರ್ಗದರ್ಶಿ ಸೂಚನೆ ಹೊರಡಿಸಿರುವ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಪಿ. ಮೋಹನ್‌ಕುಮಾರ್‌, ಉಳಿದ ಸೀಟುಗಳನ್ನು ಉಚಿತ ಮತ್ತು ಪೇಮೆಂಟ್‌ ಸೀಟುಗಳನ್ನು ನಿಯಮದಂತೆ ಹಂಚಲು ನಿರ್ದೇಶನ ನೀಡಿದ್ದಾರೆ.

ಖಾಲಿ ಉಳಿದಿರುವ ಸೀಟುಗಳನ್ನು ತುಂಬುವ ಕುರಿತು ಸಲ್ಲಿಸಲಾಗಿರುವ ರಿಟ್‌ ಅರ್ಜಿಗಳ ವಿಚಾರಣೆ ಇನ್ನೂ ನಡೆಯುತ್ತಿದ್ದು, ಈಗ ಮಧ್ಯಂತರ ಆದೇಶ ಹೊರಬಿದ್ದಿದೆ. ಉಳಿದ ಸೀಟುಗಳನ್ನು ತುಂಬಲು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಬಿಡಲಾಗುವುದೆ ಅಥವಾ ಎಲ್ಲ ಸೀಟುಗಳನ್ನೂ ಹೊರ ರಾಜ್ಯದವರಿಗೆ ನೀಡಲಾಗುವುದೆ ಎಂದು ಅರ್ಜಿದಾರರು ತಿಳಿಯಬಯಸಿದ್ದರು.

ಸಿಇಟಿ ಸಂದರ್ಶನವನ್ನು ಈ ಮೊದಲು ಸೆಪ್ಟಂಬರ್‌ 8ಕ್ಕೆ ನಿಗದಿಪಡಿಸಿ, ಆಗಸ್ಟ್‌ 24ಕ್ಕೆ ನಡೆಸಿರುವುದರಿಂದ ಹೊರರಾಜ್ಯದ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಲು ಸಾಧ್ಯವಾಗದೆ ಅನ್ಯಾಯವಾಗಿದೆ ಎಂದು ವಾದಿಸಿದ್ದರು. ಈ ಸಂಬಂಧ ಸೆಪ್ಟಂಬರ್‌ 14ರಂದು ಕೋರ್ಟ್‌, ಇನ್ನೊಂದು ಮಧ್ಯಂತರ ತೀರ್ಪುನ್ನು ನೀಡಿತ್ತು. ಅದನ್ನು ಮಂಗಳವಾರ ಬದಲಾವಣೆಯಾಂದಿಗೆ ಇನ್ನೊಮ್ಮೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+