ಚಲನಚಿತ್ರ ಕರ್ಮಿಗಳ ಮೌನ ಮೆರವಣಿಗೆ ತೂಗುಯ್ಯಾಲೆಯಲ್ಲಿ
ಬೆಂಗಳೂರು : ‘ಸರ್ವೋಚ್ಚ ನ್ಯಾಯಲಯದ ತೀರ್ಪು ಮಂಗಳವಾರ ಹೊರಬೀಳುತ್ತದೆ, ಅಲ್ಲಿಯವರೆವಿಗೂ ಸ್ವಲ್ಪ ತಡೆಯಿರಿ’. ರಾಜ್ ಬಿಡುಗಡೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಮೌನ ಮೆರವಣಿಗೆ ನಡೆಸಲು ಅನುಮತಿ ಕೋರಿದ ಚಲನಚಿತ್ರ ಕಲಾವಿದರು, ಕಾರ್ಮಿಕ ಮುಖಂಡರಿಗೆ ಮುಖ್ಯಮಂತ್ರಿಗಳು ಸೋಮವಾರ ನೀಡಿದ ಉತ್ತರ ಇದು. ನಗರದಲ್ಲಿ ನಿಷೇಧಾಜ್ಞೆ ಇರುವುದರಿಂದ ಮೆರವಣಿಗೆಗೆ ಅನುಮತಿ ಕೊಡುವುದು ಸಾಧ್ಯವಿಲ್ಲ. ಬೇಕಿದ್ದರೆ ನೀವುಗಳು ಮುಖ್ಯಮಂತ್ರಿ ಬಳಿ ಹೋಗಿ ಮಾತನಾಡಿ ಎಂದು ಪೊಲೀಸ್ ಆಯುಕ್ತ ಮಡಿಯಾಳ್ ಹೇಳಿದ ನಂತರದ ಬೆಳವಣಿಗೆಯಿದು. ವಾಣಿಜ್ಯ ಮಂಡಳಿ ಅಧ್ಯಕ್ಷ ಕೆಸಿಎನ್ ಚಂದ್ರು ಮತ್ತು ಕಾರ್ಮಿಕ ನಾಯಕ ಅಶೋಕ್ ಅವರು ಕೃಷ್ಣ ಅವರೊಂದಿಗೆ ಚರ್ಚೆ ನಡೆಸಿದರು.
30ರಂದು ಬಂದ್ : ರಾಜ್‌ಕುಮಾರ್ ಅಪರಹಣ ಆದದ್ದು, ಜುಲೈ 30ರಂದು. ಸೆಪ್ಟೆಂಬರ್ 30ಕ್ಕೆ ರಾಜ್ ಅಪಹರಣವಾಗಿ 2 ತಿಂಗಳು ಕಳೆಯುತ್ತದೆ. ಅಷ್ಟರೊಳಗೆ ರಾಜ್ ಹಾಗೂ ಮತ್ತಿತರ ಮೂವರ ಬಿಡುಗಡೆ ಆಗದಿದ್ದರೆ, 30ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಕನ್ನಡ ಚಳವಳಿಗಾರರು ನೀಡಿರುವ ಈ ಬಂದ್ ಕರೆ ಯಾರ ವಿರುದ್ಧವೂ ಅಲ್ಲ. ರಾಜ್ ಸುರಕ್ಷಿತ ಬಿಡುಗಡೆಗೆ ಒತ್ತಾಯಿಸುವುದು ಬಂದ್‌ನ ಉದ್ದೇಶ ಎಂದು ವಾಟಾಳ್ ನಾಗರಾಜ್ ಹಾಗೂ ಮಾಜಿ ಶಾಸಕ ಜಿ. ನಾರಾಯಣ ಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್‌ಕುಮಾರ್ ಅಪಹಣವಾಗಿ 50 ದಿನಗಳು ಕಳೆದರೂ ಅವರನ್ನು ಬಿಡಿಸಿಕೊಂಡು ಬರುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಬಂದ್ ಸಂಬಂಧ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಕೈಗೊಳ್ಳಲಾಗುವುದು. ಸೆ.20ರಂದು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮೊದಲಿಗೆ ಸತ್ಯಾಗ್ರಹ ನಡೆಸಲಾಗುವುದೂ ಎಂದು ಅವರು ಹೇಳಿದರು.
ದೆಹಲಿಗೆ ಚಂದ್ರೇಗೌಡ : ಟಾಡಾ ಬಂದಿಗಳ ಬಿಡುಗಡೆ ಸಂಬಂಧದ ಅರ್ಜಿ ಮಂಗಳವಾರ ಸರ್ವೋನ್ನತ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ. ಚಂದ್ರೇಗೌಡ ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ರಾಜ್ಯದ ಅಡ್ವೊಕೇಟ್ ಜನರಲ್, ರಾಜ್ಯದ ಪರ ವಹಿಸುವ ವಕೀಲರು ಹಾಗೂ ಕೇಂದ್ರದ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಕೆ.ಆರ್.ಎಸ್.ನಲ್ಲಿ ಬಿಗಿ ಭದ್ರತೆ : ವಿಶ್ವವಿಖ್ಯಾತ ಕೃಷ್ಣರಾಜ ಸಾಗರ ಅಣೆಕಟ್ಟೆ ಸ್ಫೋಟಿಸುವ ಬೆದರಿಕೆ ಇದೆ ಎಂಬ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್.ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೆಟಲ್ ಡಿಟೆಕ್ಟರ್‌ಗಳ ಮೂಲಕ ಪ್ರತಿಯಾಬ್ಬ ಪ್ರವಾಸಿಗರನ್ನು ಶೋಧಿಸಿ ಒಳಗೆ ಬಿಡಲಾಗುತ್ತಿದೆ.
ಚೆನ್ನೈ ವರದಿ : ಈ ಮಧ್ಯೆ ಚೆನ್ನೈಗೆ ದಿಢೀರ್ ಭೇಟಿ ನೀಡಿದ ರಾಜ್ಯ ಗೃಹ ಸಚಿವರು ಮುಂದಿನ ವಿದ್ಯಮಾನಗಳ ಬಗ್ಗೆ ಕರುಣಾನಿಧಿ ಅವರೊಂದಿಗೆ ಚರ್ಚಿಸಿದ್ದಾರೆ. ಮಂಗಳವಾರ ಸರ್ವೋನ್ನತ ನ್ಯಾಯಾಲಯದಲ್ಲಿ ಎರಡು ರಾಜ್ಯಗಳ ಪರ ವಕೀಲರು ಯಾವ ಯಾವ ನಿಲುವುಗಳನ್ನು ಮಂಡಿಸಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ. ಮಾತುಕತೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕರುಣಾನಿಧಿ ಅವರು, ಒಂದೆರಡು ದಿನದಲ್ಲೇ ಗೋಪಾಲ್ ಅವರು ಮತ್ತೆ ಸಂಧಾನಾರ್ಥವಾಗಿ ಕಾಡಿಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಗೋಪಾಲ್ ಕಾಡಿಗೆ ಹೋಗುವ ದಿನಾಂಕ ಇನ್ನೂ ನಿಗದಿ ಆಗಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications