Get Updates
Get notified of breaking news, exclusive insights, and must-see stories!

ವಿದ್ಯುತ್‌ ವಿತರಣೆ ಖಾಸಗೀಕರಣಕ್ಕೆ ಟೆಂಡರ್‌: ವೀರಕುಮಾರ್‌

ಬೆಂಗಳೂರು : ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಿಯೂ ತಮ್ಮ ಲೆಕ್ಕಪತ್ರದ ವಿವರ ಪೂರೈಸದ ಸ್ವತಂತ್ರ ವಿದ್ಯುತ್‌ ಉತ್ಪಾದಕರ ಹೆಸರುಗಳನ್ನು ಕೈಬಿಟ್ಟು, ಈ ಯೋಜನೆಗಳಿಗೆ ಹೊಸದಾಗಿ ಟೆಂಡರ್‌ ಕರೆಯಲಾಗುವುದು ಎಂದು ರಾಜ್ಯ ವಿದ್ಯುತ್‌ ಖಾತೆ ಸಚಿವ ವೀರಕುಮಾರ ಪಾಟೀಲ್‌ ಸೋಮವಾರ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮಿನಿ ಜಲವಿದ್ಯುತ್‌ ಯೋಜನೆಗಳಿಗೆ ನೀಡುತ್ತಿರುವ ಉತ್ತೇಜನ ಮುಂದುವರಿಸಲಾಗುವುದು ಎಂದು ತಿಳಿಸಿದರು. ವಿದ್ಯುತ್‌ ವಿತರಣೆಯಲ್ಲಿ ಖಾಸಗೀಕರಣಕ್ಕೆ ಡಿಸೆಂಬರ್‌ನಲ್ಲಿ ಟೆಂಡರ್‌ ಕರೆಯುವುದೇ ಅಲ್ಲದೆ, ಎಲ್ಲ ರೀತಿಯ ವಿದ್ಯುತ್‌ ಸಂಪರ್ಕಗಳಿಗೂ ಮೀಟರ್‌ ಅಳವಡಿಸಲಾಗುವುದು, ಕೆಪಿಟಿಸಿಎಲ್‌ ಅನ್ನು 5 ವಿಭಾಗಗಳಾಗಿ ವಿಂಗಡಿಸಿ ನಿಗಮದ ಕಾರ್ಯ ಯೋಜನೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ಸಂಬಂಧಿಸಿದಂತೆ ಇರುವ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ನಿಗದಿಪಡಿಸಲಾಗಿದ್ದ ದಿನಾಂಕವನ್ನು ಮತ್ತೊಂದು ತಿಂಗಳು ವಿಸ್ತರಿಸಲಾಗಿದೆ. ಅಕ್ಟೋಬರ್‌ 15ನೇ ತಾರೀಖಿನವರೆಗೆ ರೈತರು ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು. ಈವರೆಗೆ 46ಸಾವಿರ ಅರ್ಜಿಗಳು ಬಂದಿವೆ ಎಂದೂ ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+