ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಜನಕಾಲೇ ಭಾವೈಕ್ಯ ಸ್ಮರಣೆ

By Staff
|
Google Oneindia Kannada News

ವಾಷಿಂಗ್ಟನ್‌ : ಭಾರತ ಮತ್ತು ಅಮೆರಿಕಗಳು ಒಟ್ಟಾಗಿ ದುಡಿದು ವಿಶ್ವವನ್ನೇ ಬದಲಿಸುತ್ತವೆ !

ವೈಟ್‌ ಹೌಸ್‌ನ ದಕ್ಷಿಣ ಭಾಗದ ಲಾನ್‌ನಲ್ಲಿ ವಿಶೇಷವಾಗಿ ಸಿದ್ಧ ಪಡಿಸಿದ್ದ ದೊಡ್ಡ ಟೆಂಟ್‌. ಅಮೆರಿಕಾದ ಅಧ್ಯಕ್ಷ ಕ್ಲಿಂಟನ್‌ ಭಾವುಕರಾದಂತಿದ್ದರು, ಭಾರತದ ಪ್ರಧಾನಿ ವಾಜಪೇಯಿ ಅವರೊಂದಿಗೆ ಮೇಜವಾನಿ ನಡೆಸುವ ಸಂತೋಷ ಅವರದು. ಈ ಸಂತೋಷದಲ್ಲೆ, ಅಂತರರಾಷ್ಟ್ರೀಯ ಸಂಬಂಧಗಳ ಬಗೆಗೆ ಸದಾ ನಿರ್ಲಿಪ್ತವಾಗುಳಿವ ಅಧ್ಯಕ್ಷರು, ಭಾರತದೊಂದಿಗೆ ಸಹೋದರ ಬಾಂಧ್ಯವದ ಮಾತುಗಳಾಡಿದರು. ಕ್ಲಿಂಟನ್‌ ಮಾತುಗಳಿಗೆ ಸಾಕ್ಷಿಯಾಗಿ ನಿಂತವರು ಅಮೆರಿಕದ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್‌.

ಇಂಥದ್ದೊಂದು ಔತಣಕೂಟವನ್ನು ವೈಟ್‌ಹೌಸ್‌ ಕಂಡಿದ್ದೇ ತೀರಾ ಅಪರೂಪ, ಇತ್ತೀಚಿನ ದಿನಗಳಲ್ಲಿ ಇಲ್ಲವೇ ಇಲ್ಲ . ಕ್ಲಿಂಟನ್‌ ಅವರ 8 ವರ್ಷಗಳ ಅಧಿಕಾರಾವಧಿಯಲ್ಲಂತೂ ಇದೇ ಪ್ರಥಮ. ಐಟಿ, ಸಿನಿಮಾ, ಪತ್ರಿಕೋದ್ಯಮ, ಕ್ರೀಡೆ, ರಾಜಕಾರಣ ಮುಂತಾದ ಕ್ಷೇತ್ರಗಳ 698 ಅತಿಥಿಗಳು ಔತಣಕ್ಕೆ ಆಗಮಿಸಿದ್ದರು. ಸಂಖ್ಯೆಯಲ್ಲಿ ಭಾರತೀಯ ಮೂಲದವರದೇ ಪಾರುಪತ್ಯ.

ಇತ್ತೀಚಿನ ತಮ್ಮ ಭಾರತ ಪ್ರವಾಸವನ್ನು ಕ್ಲಿಂಟನ್‌ ನೆನಪಿಸಿಕೊಂಡರು. ವಾಜಪೇಯಿಜಿ, ಭಾರತೀಯರು ತಮಗೆ, ತಮ್ಮ ಕುಟುಂಬದವರಿಗೆ ತೋರಿದ ಆದರ, ಆತಿಥ್ಯ ಹಸುರಾಗಿದೆ. ನಮ್ಮ ಆತಿಥ್ಯ ಅದಕ್ಕೆ ಸಮೀಪವಾಗುವ ಪ್ರಯತ್ನ ಎಂದರು.

1 ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X