Get Updates
Get notified of breaking news, exclusive insights, and must-see stories!

ಕೌನ್‌ ಬನೇಗ ವಿರುದ್ಧ ನ್ಯಾಯಾಲಯದಲ್ಲಿ ದಾವೆಗಳ ಮಳೆ

ಮುಂಬಯಿ : ಸ್ಟಾರ್‌ ಟಿವಿಯ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ ವಿರುದ್ಧ ಮುಂಬಯಿ, ಕಲ್ಕತ್ತಾ ಕೋರ್ಟ್‌ಗಳೂ ಸೇರಿದಂತೆ ದೇಶಾದ್ಯಂತ ವಿವಿಧ ಕೋರ್ಟ್‌ಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆಗಳು ದಾಖಲಾಗುತ್ತಿವೆ. ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಮಂದಿ ಪ್ರೇಕ್ಷಕರಿರಬಹುದು. ಆದರೆ ನೈತಿಕತೆಯ ರಕ್ಷಕರು ಎಂದು ಕರೆಸಿಕೊಳ್ಳುವ ಮಂದಿ, ವಿಜಯಿಗಳಿಗೆ ಒಂದುಕೋಟಿ ರೂಪಾಯಿ ಬಹುಮಾನ ನೀಡುತ್ತೇವೆ ಎನ್ನುವುದು ಜೂಜಲ್ಲದೆ ಮತ್ತೇನು ಎಂದು ಅನೇಕ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಕರೋಡ್‌ಪತಿ ಕಾರ್ಯಕ್ರಮ ಬ್ರಿಟನ್‌ನ ಹೂ ವಾಂಟ್ಸ್‌ ಟು ಬಿ ಎ ಮಿಲಿಯನರ್‌ ಎಂಬ ಕಾರ್ಯಕ್ರಮದ ಅವತರಣಿಕೆಯಾಗಿದೆ ಎಂದು ಆಪಾದಿಸಿರುವುದಲ್ಲದೆ, ಈ ಕಾರ್ಯಕ್ರಮವನ್ನು ನಿಷೇಧಿಸಬೇಕೆಂದು ಕೋರಿ ಮುಂಬಯಿ, ಕಲ್ಕತ್ತಾ , ದೆಹಲಿ ಹೈಕೋರ್ಟ್‌ಗಳಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳನ್ನು ಹೂಡಲಾಗಿದೆ. ಈ ಅರ್ಜಿಗಳಲ್ಲಿ ಸ್ಟಾರ್‌ ಟಿವಿ ನಿರ್ವಾಹಕ ರೂಪರ್ಟ್‌ ಮರ್ಡೊಕ್‌ ಅವರನ್ನೂ ಈ ಕಾರ್ಯಕ್ರಮ ಪ್ರಸಾರಕ್ಕೆ ಜವಾಬ್ದಾರರನ್ನಾಗಿ ಮಾಡಲಾಗಿದೆ.

ಇದೇ ರೀತಿ ಸ್ಟಾರ್‌ ಟೀವಿಗೆ ಸ್ಪರ್ಧೆಯಾಡ್ಡುತ್ತಿರುವ ಜಾಕ್‌ ಪಾಟ್‌ ಜೀತೋ ಮತ್ತು ಮಾಲಾ ಮಾಲ್‌ ಉತ್ಸವಗಳ ವಿರುದ್ಧವೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮುಂಬಯಿ ಹೈಕೋರ್ಟ್‌ ಮತ್ತು ಅಂಧೇರಿಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಕರೋಡ್‌ ಪತಿ ಕಾರ್ಯಕ್ರಮದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಕಾರ್ಯಕ್ರಮವು ಅದೃಷ್ಟವನ್ನು ಮಾತ್ರ ಅವಲಂಭಿಸಿದೆಯೇ ಹೊರತು ಬುದ್ಧಿ ಮತ್ತೆಗೆ ಇಲ್ಲಿ ಅವಕಾಶವೇ ಇಲ್ಲ ಎಂದು ಅಲ್ಲಿನ ರಾಜಕಾರಣಿ ನಿಕೋಲಸ್‌ ಅಲ್‌ಮೇಡಿಯಾ ಅರ್ಜಿಯಲ್ಲಿ ಹೇಳಿದ್ದಾರೆ. 1995ರ ಸ್ಪರ್ಧಾ ಕಾಯ್ದೆ, ಏಕಸ್ವಾಮ್ಯ ಮತ್ತು ನಿಷೇಧಿತ ವಾಣಿಜ್ಯ ಪ್ರದರ್ಶನಗಳು ಹಾಗೂ 1969ರ ಕೇಬಲ್‌ ಟಿವಿ ಜಾಲ ನಿಯಂತ್ರಣ ಕಾಯ್ದೆ ಯನ್ನೂ ಕಾರ್ಯಕ್ರಮ ಉಲ್ಲಂಘಿಸುತ್ತದೆ ಎಂದು ಅಪಾದಿಸಲಾಗಿದೆ. ಅಶೋಕ್‌ ವಾಗ್ಮೇರ್‌ ಸಲ್ಲಿಸಿರುವ ಇನ್ನೊಂದು ಅರ್ಜಿಯಲ್ಲಿಯೂ ಈ ಕಾರ್ಯಕ್ರಮ ಉಲ್ಲಂಘಿಸಿರುವ ಕಾನೂನುಗಳ ಬಗೆಗೆ ಹೇಳಲಾಗಿದೆ. ಈ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿ ಅಕ್ಟೋಬರ್‌ 21 ರಂದು ಸಮನ್ಸ್‌ ಜಾರಿ ಮಾಡಲಾಗುವುದು.

ಒಟ್ಟಾಗಿ ವಿಚಾರಣೆ ನಡೆಸಲು ಮನವಿ : ಈ ನಡುವೆ, ಮುಂಬಯಿ ಮತ್ತು ಕಲ್ಕತ್ತಾ ದ 2 ಹಾಗೂ ದೆಹಲಿಯ ಒಂದು ಅರ್ಜಿಯನ್ನು ಹೊರತು ಪಡಿಸಿ, ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರಿ ಬಂದ ಉಳಿದ ಎಲ್ಲ ಅರ್ಜಿಗಳನ್ನು ಒಟ್ಟಾಗಿ ಪರಿಗಣಿಸಿ ವಿಚಾರಣೆ ಆರಂಭಿಸುವಂತೆ ಸ್ಟಾರ್‌ ಟಿವಿ ಕೋರ್ಟ್‌ನ್ನು ಕೇಳಿಕೊಂಡಿದೆ. ಸ್ಟಾರ್‌ ಟಿವಿ ಪರ ವಾದಿಸಲಿರುವ ವಕೀಲರು, ಇದು ಸ್ಟಾರ್‌ ಟಿವಿಯ ಪ್ರತಿಸ್ಪರ್ಧಿಗಳದೇ ಕೆಲಸ ಎಂದು ಹೇಳುತ್ತಾರೆ. ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಿಂದಾಗಿ ಸ್ಟಾರ್‌ ಟಿವಿಯ ವೀಕ್ಷಕರ ಸಂಖ್ಯೆ ಏಕ್‌ದಂ ಮೇಲೇರಿದೆ. ಬಾಲಿವುಡ್‌ನ ಅಮಿತಾಬ್‌ಬಚ್ಚನ್‌ ಕಾರ್ಯಕ್ರಮದ ಮುಖ್ಯ ಆಕರ್ಷಣೆಗಳಲ್ಲಿ ಒಬ್ಬರಾಗಿರುವುದು ಗಮನಾರ್ಹ. ಜಾಹೀರಾತುಗಳು ಕೂಡ ಈ ಕಾರ್ಯಕ್ರಮದಿಂದಾಗಿ ಸ್ಟಾರ್‌ ಟಿವಿಯತ್ತ ಹೊರಳಿದ್ದು, ಇತರ ಚಾನೆಲ್‌ಗಳು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+