ದಸರೆಗಾಗಿ ದುರಸ್ತಿಗೊಳ್ಳುತ್ತಿವೆ ರಸ್ತೆಗಳು
ಮೈಸೂರು : ಮೈಸೂರಿನ ರಸ್ತೆಗಳ ಯೋಗವೇ ಯೋಗ ಬಿಡಿ. ವರ್ಷಕ್ಕೊಮ್ಮೆಯಾದರೂ ಇಲ್ಲಿನ ರಸ್ತೆಯ ಹಳ್ಳಕೊಳ್ಳಗಳು ತಾತ್ಕಾಲಿಕವಾಗಿ ಮುಚ್ಚಲ್ಪಡುತ್ತವೆ. ದಸರೆಯ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ನಮ್ಮ ಹುಳುಕು ಕಾಣಬಾರದೆಂದು ವರ್ಷದಿಂದ ರಸ್ತೆಗಳಲ್ಲಿ ಬಿದ್ದ ಹಳ್ಳಗಳಿಗೆಲ್ಲಾ ತೇಪೆ ಹಾಕಲಾಗುತ್ತದೆ. ಪುಟ್ಪಾತ್ಗಳ ದುರಸ್ತಿ ಕಾರ್ಯ ನಡೆಯುತ್ತದೆ. ಮೈಸೂರು ಮದುಮಗಳಂತೆ ಅಲಂಕಾರಗೊಳ್ಳುತ್ತದೆ.
ಈ ವರ್ಷ ಆಗುತ್ತಿರುವುದೂ ಅದೇ. ಜಂಬೂ ಸವಾರಿ ಸಾಗುವ ಎಲ್ಲ ಪ್ರಮುಖ ರಸ್ತೆಗಳಲ್ಲೂ ಬಿದ್ದಿರುವ ಹಳ್ಳಗಳನ್ನು ಮುಚ್ಚಲಾಗುತ್ತಿದೆ. ಶಾಶ್ವತ ದುರಸ್ತಿ ಆಗದಿದ್ದರೂ, ನೋಡುವವರ ಮುಂದೆ ಎಡವಿ ಬೀಳದಂತೆ ತೇಪೆ ಕೆಲಸ ಸಮರೋಪಾದಿಯಲ್ಲಿ ಸಾಗಿದೆ.
ಮೈಸೂರಿನ ಚಾರಿತ್ರಿಕ ವೃತ್ತಗಳನ್ನು ಸಿಂಗರಿಸುವ ಕಾರ್ಯವೂ ನಡೆದಿದೆ. ಪುತ್ಥಳಿ - ಪ್ರತಿಮೆಗಳ ಮೇಲಿನ ಧೂಳು ಕೊಡವಲಾಗಿದೆ. ದಸರೆಯ ಹಿನ್ನೆಲೆಯಲ್ಲಿ ಅರಮನೆಯ ಎಲ್ಲ ವಿದ್ಯುತ್ ದೀಪಗಳ ದುರಸ್ತಿಯೂ ನಡೆಯುತ್ತಿದೆ. ಸುಣ್ಣಬಣ್ಣಗಳ ಕಾರ್ಯವೂ ಮುಗಿದಿದೆ. ಬಂಬೂಬಜಾರ್ನಿಂದ ಬನ್ನಿಮಂಟಪದವರೆಗಿನ ರಸ್ತೆ ಈಗ ಸಂಚಾರ ಯೋಗ್ಯವಾಗಿದೆ. ರಾಜ್ ಅಪಹರಣ ಹಿನ್ನೆಲೆಯಲ್ಲಿ ಪ್ರತಿವರ್ಷದ ಲವಲವಿಕೆ ಇಲ್ಲವಾದರೂ, ಸದ್ದಿಲ್ಲದೆ ಸಿದ್ಧತೆಗಳಂತೂ ನಡೆದಿವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications