Get Updates
Get notified of breaking news, exclusive insights, and must-see stories!

ಮೈಸೂರು ಐಟಿ ಡಾಟ್‌ಕಾಂ : ಈಗ ಟೂರಿಸಂ ಜೊತೆ ಟೆಕ್ನಾಲಜಿ

ಮೈಸೂ-ರು : ಐಟಿ ಕ್ಷೇತ್ರದಲ್ಲಿ ಓಡುತ್ತಿರುವ ಬೆಂಗಳೂರಿನ ಜೊತೆಗೆ ಮೈಸೂರು ಕೂಡ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಮಾಹಿತಿ ತಂತ್ರ ಜ್ಞಾನ ಕುರಿತು ಮೈಸೂರಿನಲ್ಲಿ ಸೆಪ್ಟೆಂಬರ್‌ 8ರಿಂದ 10ರವರೆಗೆ ನಡೆದ ಮೇಳ, ಮೈಸೂರನ್ನು ಆದರ್ಶ ಐಟಿ ನಗರವನ್ನಾಗಿ ಮಾರ್ಪಡಿಸುವ ದಾರಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಮೊನ್ನೆ ನಡೆದ ಸಮ್ಮೇಳನದಲ್ಲಿ ಮೈಸೂರಿನವರಿಗೆ ಎಷ್ಟು ಲಾಭವಾಯಿತು ಎಂದು ನಮ್ಮ ಮೈಸೂ-ರು ಪ್ರತಿನಿಧಿ ಅಂಕಿ ಅಂಶಗಳೊಂದಿಗೆ ಬರೆದು ಕಳಿಸಿದ್ದಾರೆ.

ಪ್ರಮುಖ ಸಂಸ್ಥೆಯಾದ ವಿಪ್ರೋ ತನ್ನ ಘಟಕವನ್ನು ಮೈಸೂರಿಗೆ ಬದಲಾಗಿ ಪಾಂಡಿಚೇರಿಯಲ್ಲಿ ಸ್ಥಾಪಿಸುವುದಾಗಿ ಪ್ರಕಟಿಸಿದ್ದು ಮೇಳಕ್ಕೆ ಹಿನ್ನಡೆಯೇನೂ ಉಂಟು ಮಾಡಲಿಲ್ಲ ಎಂದು ಸಮ್ಮೇಳನದ ಸಂಘಟಕರು ಹೇಳುತ್ತಾರೆ. ಯಾಕೆಂದರೆ ಬೇರೆ ಯೋಜನೆಗಳು ಮೈಸೂರಿನ ರಾಜ ರಸ್ತೆಯಲ್ಲಿ ನಡೆದು ಬರುವುದಕ್ಕೆ ಒಪ್ಪಿಕೊಂಡಿವೆ. ಮೇಳವು ಅನಿವಾಸಿ ಭಾರತೀಯರು, ಹೊರ ರಾಜ್ಯ ಹಾಗೂ, ರಾಜ್ಯದ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ, ಮೈಸೂರಿನಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಸಮ್ಮೇಳನ ಮಾಡಿದೆ. ಟೂರಿಸಂಗೆ ಹೆಸರಾಗಿದ್ದ ಜಿಲ್ಲೆಯಲ್ಲಿ ಟೆಕ್ನಾಲಜಿ ಸುದ್ದಿ ಮಾಡಿದೆ.

ಅನಿವಾಸಿ ಭಾರತೀಯರನೇಕರು ಮೈಸೂರಿನಲ್ಲಿ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ಆರಂಭಿಸಲು ಮುಂದೆ ಬಂದಿದ್ದಾರೆ. ಆ ಪ್ರಕಾರ ಹೇಳುವುದಾದರೆ, ಇನ್ನು ಮುಂದೆ ಇನ್‌ ಕ್ಯೂಬೇಟರ್‌ ಕೇಂದ್ರದಲ್ಲಿ ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಉಪಕರಣಗಳು, ಎಲ್ಲ ವಿಧದ ಅಪ್‌ಲಿಂಕಿಂಗ್‌ ಸೌಲಭ್ಯಗಳು ಇರುತ್ತವೆ. ಸಾಫ್ಟ್‌ ವೇರ್‌ ಮತ್ತು ಹಾರ್ಡ್‌ವೇರ್‌ ಆಮದು, ರಫ್ತಿನಲ್ಲಿ ತೊಡಗಿರುವ ಕ್ವಿಕ್ಸ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆಯು ಮೈಸೂರಿನಲ್ಲಿ ತನ್ನ ಘಟಕ ಆರಂಭಿಸಲಿದೆ. ಸಾಫ್ಟ್‌ ವೇರ್‌ ಎಕ್ಸ್‌ಪೋರ್ಟ್‌ ಕೌನ್ಸಿಲ್‌ ಸಹ ತನ್ನ ಕಚೇರಿ ಆರಂಭಿಸಲಿದೆ. ಮೂರು ದಿನಗಳಲ್ಲಿ ಸುಮಾರು 15 ಕೋಟಿ ರೂಪಾಯಿ ವಹಿವಾಟು ನಡೆದಿದೆ.

ದಸರಾದಲ್ಲಿ ಐಟಿ : ಒಮ್ಮಿಂದೊಮ್ಮೆಗೆ ಊರಿಗೆ ಬಂದಿರುವ ಐಟಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಮೈಸೂರೂ ಐಟಿ ಕ್ಷೇತ್ರದಲ್ಲಿ ಹಿಂದುಳಿದಿಲ್ಲ ಎಂದು ನಾಡವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಬಾರಿಯ ದಸರಾ ವಸ್ತು ಪ್ರದರ್ಶನಾಲಯದಲ್ಲಿ ಐಟಿ ಮಳಿಗೆ ತೆರೆಯಲಾಗಿದೆ. ನಗರದಲ್ಲಿ ಮಾಹಿತಿ ತಂತ್ರಜ್ಞಾನ ದ 20 ಘಟಕಗಳನ್ನು ಈಗಾಗಲೇ ತೆರೆಯಲಾಗಿದೆ. ಇನ್ನೂ ಹತ್ತು ಘಟಕಗಳು ಬರಲಿವೆ. ತನ್ನ ಘಟಕವನ್ನು ಮುಚ್ಚುವ ಬಗ್ಗೆ ಮಾತನಾಡುತ್ತಿದ್ದ ಎಲ್‌ ಆ್ಯಂಡ್‌ ಟಿ ಸಂಸ್ಥೆ , ಸದ್ಯಕ್ಕೇನೂ ಮುಚ್ಚುವುದಿಲ್ಲ ಎಂದು ತನ್ನ ವರ-ಸೆ ಬದ-ಲಿ-ಸಿದೆ. ಹೀಗೆ ಬೆಳೆಯುತ್ತಿರುವ ಮೈಸೂರಿನಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ವಿಶ್ವನಾಥ್‌ ಅವರು ಉನ್ನತ ಮಟ್ಟದ ಸಮಿತಿಯಾಂದನ್ನು ರಚಿಸಿದ್ದಾರೆ. ಸಮಿತಿ ಕೆಲಸ ಮಾಡುವುದಾದಲ್ಲಿ ಬಿಡುವಿಲ್ಲದಷ್ಟು ಕೆಲಸವಿದೆ.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+