ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಪತ್ರಿಕೆಗಳ ಹಣೆಬರಹ ಬರೆದ ಎಂ.ಬಿ. ಸಿಂಗ್‌ ವರದಿ ಕಸದ ಬುಟ್ಟಿಗೆ

By Staff
|
Google Oneindia Kannada News

ಬೆಂಗಳೂರು : ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರ ಸೂತ್ರಗಳೊಂದಿಗೆ ವರದಿ ಸಲ್ಲಿಸುವಂತೆ 80ರ ದಶಕದಲ್ಲಿ ಕರ್ನಾಟಕ ರಾಜ್ಯ ಸರಕಾರ ನೇಮಿಸಿದ್ದ ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್‌ ನೇತೃತ್ವದ ಸಮಿತಿ ವರದಿ ಕಸದ ಬುಟ್ಟಿ ಸೇರಿದೆ.

ಪತ್ರಕರ್ತರು ಈ ವರದಿಯನ್ನು ಮತ್ತೊಂದು ಮಹಾಜನ್‌ ವರದಿ ಎಂದೇ ಹೇಳುತ್ತಾರೆ. ಈ ವರದಿಯ ಅನುಷ್ಠಾನಕ್ಕಾಗಿ ರಾಜ್ಯದ ನಾನಾ ಪತ್ರಕರ್ತ ಸಂಘಟನೆಗಳು ಈ ವರೆಗೆ ನಡೆಸಿದ ಹೋರಾಟಕ್ಕೆ ಸರಕಾರ ಮೂರು ಕಾಸಿನ ಬೆಲೆ ನೀಡಿಲ್ಲ. ದಶಕಗಳು ಉರುಳಿದ ತರುವಾಯ, ಈಗ ಈ ವರದಿ ಪ್ರಸ್ತುತವಲ್ಲ, ಅಧುನಿಕ ಯುಗದಲ್ಲಿ ಎಂ.ಬಿ.ಸಿಂಗ್‌ ವರದಿ ಜಾರಿ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಆದರೆ, ಹಣಕಾಸಿನ ತೊಂದರೆ ಹಾಗೂ ವಾರ್ತಾ ಇಲಾಖೆಯ ಆಯವ್ಯಯದ ಕೊರತೆಯೇ ವರದಿಯ ಅನುಷ್ಠಾನಕ್ಕೆ ಅಡ್ಡಿಯಾಯಿತು ಎನ್ನುವುದು ಪತ್ರಕರ್ತರ ಆರೋಪ. ಎಂ.ಬಿ. ಸಿಂಗ್‌ ನೇತೃತ್ವದ ಸಮಿತಿ ಸಣ್ಣ ಹಾಗೂ ಮಧ್ಯಮ ಪತ್ರಿಕೆಗಳಿಗೆ ನೀಡುವ ಸರಕಾರದ ಜಾಹೀರಾತು ದರವನ್ನು ಹೆಚ್ಚಿಸಬೇಕು, ನ್ಯೂಸ್‌ ಪ್ರಿಂಟ್‌ (ಮುದ್ರಣ ಕಾಗದ) ಸಮಸ್ಯೆ ಬಗೆಹರಿಸಲು ಒಂದು ಸಹಕಾರಿ ಸಂಘ ಸ್ಥಾಪಿಸಬೇಕು, ವಾರ್ತಾ ಇಲಾಖೆಯ ಮೂಲಕ ಎಲ್ಲ ಪತ್ರಿಕೆಗಳಿಗೆ ಸುದ್ದಿಯನ್ನು ಶೀಘ್ರವಾಗಿ ರವಾನಿಸಬೇಕು. ಸಣ್ಣ ಹಾಗೂ ಮಧ್ಯಮ ಪತ್ರಿಕೆಗಳಿಗೆ ಸಹಯ ಧನ ನೀಡಬೇಕು ಮುಂತಾದ 20 ಸಲಹೆಗಳನ್ನು ಸರಕಾರದ ಮುಂದಿಟ್ಟಿತ್ತು.

ಹೊಸ ಸಮಿತಿ : ಪ್ರಸಕ್ತ ಸನ್ನಿವೇಶದಲ್ಲಿ ಎಂ.ಬಿ. ಸಿಂಗ್‌ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿ ಅನುಷ್ಠಾನ ಸೂಕ್ತವಲ್ಲ ಎಂದು ಭಾವಿಸಿದ ಸರಕಾರ ಹಿರಿಯ ಪತ್ರಕರ್ತ ಹಾಗೂ ವಿಧಾನಪರಿಷತ್‌ ಸದಸ್ಯ ಪಿ. ರಾಮಯ್ಯ ಅವರ ನೇತೃತ್ವದಲ್ಲಿ ಹೊಸ ಸಮಿತಿ ನೇಮಕ ಮಾಡಿದೆ.

ರಾಮಯ್ಯ ನೇತೃತ್ವದ ಏಳು ಹಿರಿಯ ಪತ್ರಕರ್ತರ ಸಮಿತಿ ಈಗ ಕರ್ನಾಟಕ ಪ್ರದಕ್ಷಿಣೆ ಮಾಡಿ ಬಂದಿದೆ. ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳ ಪ್ರವಾಸಕ್ಕೆ ಅಡಚಣೆಯಾಗಿದೆ. ಕರ್ನಾಟಕದ 23 ಜಿಲ್ಲೆಗಳಲ್ಲಿ ಸಂಚರಿಸಿ, ಸಣ್ಣ ಹಾಗೂ ಮಧ್ಯಮ ಪತ್ರಿಕೆಗಳ ಸಮಸ್ಯೆಯ ಅಧ್ಯಯನ ಮಾಡಿರುವ ಹೊಸ ಸಮಿತಿ ಅಕ್ಟೋಬರ್‌ ಅಂತ್ಯದಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ರಾಜ್‌ ಅಪಹರಣದಿಂದಾಗಿ ಒಂದು ತಿಂಗಳು ತಡವಾಗಿ ಸಮಿತಿ ತನ್ನ ವರದಿ ಸಲ್ಲಿಸುತ್ತದೆ.

ಷರತ್ತು : ಹೊಸ ಸಮಿತಿಯ ನೇತೃತ್ವ ವಹಿಸಿರುವ ಪಿ. ರಾಮಯ್ಯ ನೇತೃತ್ವದ ಸಮಿತಿಯ ಸದಸ್ಯರು ಎಂ.ಬಿ. ಸಿಂಗ್‌ ವರದಿಯಂತೆ ತಮ್ಮ ವರದಿಯನ್ನೂ ಮೂಲೆಗುಂಪು ಮಾಡುವುದಿಲ್ಲ ಎಂದು ಭರವಸೆ ನೀಡಿದರೆ ಮಾತ್ರ ತಾವು ಕರ್ನಾಟಕದ ಸಣ್ಣ ಹಾಗೂ ಮಧ್ಯಮ ಪತ್ರಿಕೆಗಳ ಸಮಸ್ಯೆಯ ಅಧ್ಯಯನಕ್ಕೆ ಒಪ್ಪುವುದಾಗಿ ತಿಳಿಸಿದ್ದರಂತೆ. ಸರಕಾರ ಸಹ ಈ ಷರತ್ತಿಗೆ ಒಪ್ಪಿದೆ ಎಂದು ತಿಳಿದು ಬಂದಿದೆ.

ವಾರ್ತಾ ಸಂಚಯ
ರಾಜ್‌ ಕಾಡಿಗೆ ಹೋದಮೇಲೆ ಕಂಗಾಲಾದ ಕರ್ನಾಟಕದ ಕಾರ್ಯಕ್ರಮಗಳು
1998 -1999ರ ಸಾಲಿನ ಪತ್ರಿಕೋದ್ಯಮ ಪ್ರಶಸ್ತಿಗಳ ಪಟ್ಟಿ :
22ರಿಂದ ಬೆಳಗಾವಿಯಲ್ಲಿ ರಾಜ್ಯ ಪತ್ರಕರ್ತರ 23ನೇ ಸಮ್ಮೇಳನ

Post your views
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X