ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಮಲ್ಲೇ-ಶ್ವ-ರಂ ಸರ-ದಿ : ಹಾಡು ಹ-ಗ-ಲೇ 22 ಲಕ್ಷ ದರೋ-ಡೆ

By Staff
|
Google Oneindia Kannada News

ಬೆಂಗಳೂರು :ಬ್ಯಾಂಕಿನಲ್ಲಿ ಠೇವಣಿ ಇಡಲು ಹಣ ಕೊಂಡೊಯ್ಯುತ್ತಿದ್ದ ಚಿನ್ನದ ವ್ಯಾಪಾರಿ ಬಳಿಯಿದ್ದ 22.15 ಲಕ್ಷ ರೂಪಾಯಿಗಳನ್ನು ಸೋಮವಾರ ಬೆಳಿ-ಗ್ಗೆ ಐವರು ಡಕಾಯಿತರ ತಂಡ ಮಲ್ಲೇಶ್ವರಂ ರೈಲ್ವೇ ನಿಲ್ದಾಣದ ಸಮೀಪ ದೋಚಿ ಪರಾರಿಯಾಗಿದೆ.

ವ್ಯಾಪಾರಿ ರಾಜೇಂದ್ರ ಕುಮಾರ್‌ ಅವರು 22.15 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ತಮ್ಮ ಸಹಾಯಕ ಮಹಾದೇವ ಅವರ ಜೊತೆ ಬೆಳಿಗ್ಗೆ 9.45ಕ್ಕೆ, ಸ್ಕೂಟರ್‌ನಲ್ಲಿ ಬ್ಯಾಂಕಿಗೆ ಹೊರಟಿದ್ದರು. ಮಲ್ಲೇಶ್ವರಂ ಸಮಾ-ನಾಂ-ತ-ರ ರಸ್ತೆ-ಯ-ಲ್ಲಿ ಮೂರು ಮೋಟಾರ್‌ ಸೈಕಲಿನಲ್ಲಿ ಹಿಂದಿನಿಂದ ಬಂದ ಐದು ಮಂದಿ ಡಕಾಯಿತರ ತಂಡ ಸ್ಕೂಟರನ್ನು ತಡೆದು ನಿಲ್ಲಿಸಿತು. ಮಚ್ಚು ಹಿಡಿದ ವ್ಯಕ್ತಿ ರಾಜೇಂದ್ರ ಕುಮಾರ್‌ ಅವರ ಹೊಟ್ಟೆಗೆ ಮಚ್ಚಿನ ಹಿಂಭಾಗದಿಂದ ಹೊಡೆದು ಬೆದರಿಸಿದಾಗ ಉಳಿದವರು ಹಣದ ಚೀಲ ಕಸಿದುಕೊಂಡು ಓಡಿಹೋಗಿದ್ದಾರೆ.

ಅವೆನ್ಯೂ ರಸ್ತೆ ಬಳಿಯ ಎಂ.ಎಸ್‌. ಆರ್‌. ಇಂಟರ್‌ನ್ಯಾಷನಲ್‌ ಜ್ಯುವೆಲ್ಲರ್ಸ್‌ ಅಂಗಡಿಯ ಪಾಲುದಾರರಾದ ರಾಜೇಂದ್ರ ಕುಮಾರ್‌, ಚಿನ್ನದ ಬಿಸ್ಕೆಟ್‌ ಮತ್ತು ಬೆಳ್ಳಿ ವ್ಯಾಪಾರಕ್ಕೆ ಸಂಬಂಧಿಸಿ ಪ್ರತಿದಿನ ಸುಮಾರು 55ರಿಂದ 60 ಲಕ್ಷ ರೂಪಾಯಿಯ ವಹಿವಾಟು ನಡೆಸುತ್ತಿದ್ದರು. ವಹಿವಾಟಿನ ಹಣವನ್ನು ಪ್ರತಿ ದಿನ ಬೆಳಿಗ್ಗೆ ಬ್ಯಾಂಕಿಗೆ ತುಂಬುತ್ತಿದ್ದರು.

ಡಕಾಯಿತರು ಸುಮಾರು 30 ವರ್ಷ ವಯಸ್ಸಿನವರಾಗಿದ್ದು, ಒಂದು ಮೋಟಾರ್‌ ಸೈಕಲ್‌ನ ನಂಬರ್‌ ಪ್ಲೇಟ್‌ ಕನ್ನಡ ಸಂಖ್ಯೆಯಲ್ಲಿ ಇತ್ತು ಎಂದು ವರದಿಯಾಗಿದೆ. ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯಲ್ಲಿ ಪೆಟ್ರೋಲ್‌ ಬಂಕ್‌ ದರೋಡೆ : ಇಲ್ಲಿನ ಪುಣೆ- ಬೆಂಗಳೂರು ಹೆದ್ದಾರಿ ಸಮೀಪದ ಪೆಟ್ರೋಲ್‌ ಬಂಕ್‌ ಮತ್ತು ಧಾಬಾ ಮೇಲೆ ಸುಮಾರು 20 ಮಂದಿ ದರೋಡೆಕೋರರ ತಂಡವೊಂದು ಸೋಮವಾರ ದಾಳಿ ಮಾಡಿದ್ದು, ಕಾವಲಿಗಿದ್ದ ಪೇದೆ ಸೇರಿದಂತೆ 8 ಮಂದಿಯ ಮೇಲೆ ಹಲ್ಲೆ ನಡೆಸಿ ಸುಮಾರು 2.71 ಲಕ್ಷ ರೂಪಾಯಿ ದೋಚಿದೆ.

ಬೆಳಗಾವಿಯ ರೇಣುಕಾ ನ್ಯಾಷನಲ್‌ ಧಾಬಾ ಮತ್ತು ರೇಣುಕಾ ಪೆಟ್ರೆಲ್‌ ಬಂಕ್‌ನ ಗಾಜು ಒಡೆದು ಟ್ರಝರಿಯಲ್ಲಿದ್ದ ಹಣವನ್ನು ದೋಚಲಾಗಿದೆ. ದರೋಡೆಕೋರರು ತಲ್ವಾರ್‌, ಕಬ್ಬಿಣದ ಸಲಾಕೆ, ಮತ್ತು ಪಿಸ್ತೂಲ್‌ ಹಿಡಿದುಕೊಂಡಿದ್ದರೆಂದು ವರದಿಯಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X