ಅಟಲ್ ಭೇಟಿಗೆ ರೋಮಾಂಚನಭರಿತ ಕಾತರದಿಂದಿರುವ ಕ್ಲಿಂಟನ್
ಹೊಸದಿಲ್ಲಿ : ಪ್ರಸ್ತುತ ಅಮೆರಿಕೆಯಲ್ಲಿರುವ ಭಾರತದ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡುವ ಘಳಿಗೆಗಾಗಿ ರೋಮಾಂಚಿತರಾಗಿ ಕಾಯುತ್ತಿರುವುದಾಗಿ ಹೇಳಿರುವ ಅಧ್ಯಕ್ಷ ಕ್ಲಿಂಟನ್, ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯಗಳನ್ನು ಮುಂದುವರಿಸಲು ಬದ್ಧರಿರುವುದಾಗಿ ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ತಮಗೆ ಸಿಕ್ಕಿದ್ದ ಅಭೂತಪೂರ್ವ ಸ್ವಾಗತವನ್ನು ಮೆಲುಕು ಹಾಕಿರುವ ಕ್ಲಿಂಟನ್, ಭಾರತದ ತಮ್ಮ ಯಶಸ್ವೀ ಭೇಟಿಯಿಂದ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಸಿವೆ ಎಂದು ಸ್ಟಾರ್ ಟೀವಿಯಲ್ಲಿ ಹೇಳಿದ್ದಾರೆ.
ಭಾರತದ ತಮ್ಮ ಭೇಟಿಯ ಬಗ್ಗೆ ಹತ್ತಾರು ಕಾರ್ಯಕ್ರಮಗಳಲ್ಲಿ ಈಗಾಗಲೇ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿರುವ ಕ್ಲಿಂಟನ್, ಮಗಳು ಮತ್ತು ಅತ್ತೆಯಾಂದಿಗೆ ಭಾರತದಲ್ಲಿ ಕಳೆದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ. ವಾಜಪೇಯಿ ಅವರು ಅಮೆರಿಕಾಕ್ಕೆ ಭೇಟಿ ನೀಡಿರುವುದು ವೈಯಕ್ತಿಕವಾಗಿ ಮತ್ತು ಎರಡೂ ದೇಶಗಳ ಸಂಬಂಧಗಳ ವಿಷಯವಾಗಿ ತಮಗೆ ರೋಮಾಂಚನದ ವಿಷಯ ಎಂದಿದ್ದಾರೆ.
ಈಗ ನ್ಯೂಯಾರ್ಕ್‌ನಲ್ಲಿರುವ ವಾಜಪೇಯಿ ಬುಧವಾರ ವಾಷಿಂಗ್ಟನ್‌ಗೆ ತೆರಳಲಿದ್ದು, ಕ್ಲಿಂಟನ್ ಅವರ ಜೊತೆ ಮಾತುಕತೆ ನಡೆಸುವರಲ್ಲದೆ, ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಲ್ಕು ದಿನಗಳ ತಮ್ಮ ಭೇಟಿಯ ಕಾಲಕ್ಕೆ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಅಪರೂಪದ ಮತ್ತು ಅನನ್ಯ ಗೌರವಕ್ಕೆ ವಾಜಪೇಯಿ ಪಾತ್ರರಾಗಿದ್ದಾರೆ. ಇದು ಕೆಲವೇ ವಿದೇಶಿ ಗಣ್ಯರಿಗೆ ಪ್ರಾಪ್ತವಾಗುವ ಅಮೆರಿಕದ ಗೌರವವಾಗಿದೆ. ನಂತರ ವಾಜಪೇಯಿ ಮಹಾತ್ಮಗಾಂಧಿ ಅವರ ಪ್ರತಿಮೆ ಅನಾವರಣ ಮಾಡಲಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications