ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃಷಿಕೇಶ್‌ ಮುಖರ್ಜಿಗೆ ದಾದಾ ಫಾಲ್ಕೆ ಪ್ರಶಸ್ತಿ

By Staff
|
Google Oneindia Kannada News

ಹೊಸದಿಲ್ಲಿ ಭಾರತೀಯ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್‌ ಫಾಲ್ಕೆ ಗೌರವಕ್ಕೆ ಹೆಸರಾಂತ ಚಲನಚಿತ್ರ ನಿರ್ದೇಶಕ ಹಾಗೂ ಸಂಕಲನಕಾರ ಹೃಷಿಕೇಶ್‌ ಮುಖರ್ಜಿ ಪಾತ್ರರಾಗಿದ್ದಾರೆ.

ಭಾರತೀಯ ಚಲನಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮುಖರ್ಜಿ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸ್ವರ್ಣಕಮಲ, 2 ಲಕ್ಷ ರುಪಾಯಿ ನಗದು ಹಾಗೂ ಶಾಲನ್ನು ಒಳಗೊಂಡ ಪ್ರಶಸ್ತಿಯನ್ನು ಸೆಪ್ಟಂಬರ್‌ 18ರಂದು ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಕೆ. ಆರ್‌. ನಾರಾಯಣನ್‌ ಪ್ರದಾನ ಮಾಡಲಿದ್ದಾರೆ.

1922ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ಮುಖರ್ಜಿಅವರು, ಕಲ್ಕತ್ತಾ ವಿಶ್ವವಿದ್ಯಾಲಯದ ವಿಜ್ಞಾನ ಪದವೀಧರರು. ಪ್ರಾರಂಭದಲ್ಲಿ ಶಿಕ್ಷಕ ಮತ್ತು ಆಲ್‌ ಇಂಡಿಯಾ ರೇಡಿಯೋಗೆ ಹವ್ಯಾಸಿ ಪತ್ರಕರ್ತರಾಗಿ ಕೆಲಸ ಮಾಡಿದರು. 1945ರಲ್ಲಿ ಸಿನಿಮಾ ರಂಗಕ್ಕೆ ಕಾಲಿರಿಸಿದ ಅವರು ಸಂಕಲನಕಾರರಾಗಿ ನಂತರ ಬಿಮಲ್‌ ರಾಯ್‌ ಅವರ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 1957ರಲ್ಲಿ ಮುಖರ್ಜಿ ನಿರ್ದೇಶಿಸಿದ ಮುಸಾಫಿರ್‌ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.

ಬೇರೆ ಬೇರೆ ಚಿತ್ರಗಳಲ್ಲಿನ ತಮ್ಮ ಕೈಚಳಕಕ್ಕಾಗಿ ಆನೇಕ ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಮುಖರ್ಜಿ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಕೇಂದ್ರ ಸೆನ್ಸಾರ್‌ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ಬಾರಿಯ ದಾದಾ ಫಾಲ್ಕೆ ಪ್ರಶಸ್ತಿಗೆ ನಿರ್ದೇಶಕ ಬಿ. ಆರ್‌. ಛೋಪ್ರಾ ಪಾತ್ರರಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಮುಖರ್ಜಿ ಆರಂಭದ ದಿನಗಳಲ್ಲಿ ಕನ್ನಡದ ಕೆಲವು ಚಿತ್ರಗಳಲ್ಲೂ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದರು.

ಅನಾರಿ, ಅನೂರಾಧ, ಆಶಿಕ್‌, ಅಸಲಿ ನಕಲಿ, ದೋ ದಿಲ್‌, ಅನುಪಮಾ, ಬೀವಿ ಔರ್‌ ಮಖಾನ್‌, ಆಶೀರ್ವಾದ್‌, ಗುಡ್ಡಿ, ಆನಂದ್‌, ಅಭಿಮಾನ್‌, ಚುಪ್ಕೇ ಚುಪ್ಕೇ, ಗೋಲ್‌ ಮಾಲ್‌, ಹಮ್‌ ಹಿಂದೂಸ್ತಾನಿ, ತಲಾಷ್‌, ಅರ್ಜುನ್‌ ಪಂಡಿತ್‌, ಮಿಲಿ, ನರಮ್‌ ಗರಮ್‌, ರಂಗ್‌ಬಿರಂಗೇ, ನಮ್‌ಕಿನ್‌ ಇತ್ತೀಚಿನ ಜೂಟ್‌ ಬೋಲೇ ಕವ್ವಾ ಕಾಟೆ ಮುಂತಾದವು ಮುಖರ್ಜಿಯವರ ಕೆಲವು ಪ್ರಮುಖ ಚಿತ್ರಗಳು.

(ಯು.ಎನ್‌.ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X