Get Updates
Get notified of breaking news, exclusive insights, and must-see stories!

ಹೈ. ಕರ್ನಾಟಕ ವಿಮೋಚನಾ ದಿನ ಆಚರಿಸಲು ಸರ್ಕಾರದ ಒಪ್ಪಿಗೆ

ಬೆಂಗಳೂರು : ಸರ್ಕಾರಿ ಖರ್ಚಿನಲ್ಲೇ ಪ್ರತಿವರ್ಷ ಹೈದರಾಬಾದ್‌ ಕರ್ನಾಟಕ- ಪ್ರದೇಶದ ವಿಮೋಚನಾ ದಿನವನ್ನು ಆ-ಚ-ರಿ-ಸ-ಲು ರಾಜ್ಯ ಸರಕಾರ ಒಪ್ಪಿದೆ ಎಂದು ಹೈ.ಕ. ಪ್ರದೇಶ ವಿಮೋಚನಾ ದಿನಾಚರಣೆ ಸಮಿತಿ ಮಂಗಳವಾರ ತಿಳಿಸಿದೆ.

ಈ ಸಂಬಂಧ ನಿಯೋಗ ಮುಖ್ಯಮಂತ್ರಿ ಕೃಷ್ಣ ಅವರನ್ನು ಸೋಮವಾರ ಭೇಟಿಯಾಗಿ, ಬೀದರ್‌, ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದಿನಾಚರಣೆ ಆಚರಿಸಲು ಆದೇಶ ಹೊರಡಿಸಲು ಮನವಿ ಮಾಡಿತ್ತು. ಮನವಿ ಪುರಸ್ಕರಿಸಿರುವ ಕೃಷ್ಣ ಅವರು ದಿನಾಚರಣೆಗೆ 2 ಲಕ್ಷ ರುಪಾಯಿಗಳನ್ನೂ ಮಂಜೂರು ಮಾಡುವುದಾಗಿ ತಿಳಿಸಿದರೆಂದು ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಶಶೀಲ್‌ ನಮೋಷಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆ ಪಠ್ಯಪುಸ್ತಕಗಳಲ್ಲಿ ಹೈದರಾಬಾದ್‌ ಕರ್ನಾಟಕ-ದ ಪ್ರದೇಶದ ವಿಮೋಚನಾ ಇತಿಹಾಸವನ್ನು ಸೇರಿಸಬೇಕೆಂಬ ಬೇಡಿಕೆಯನ್ನು ಸರಕಾರ ಪರಿಶೀಲಿಸುವುದಾಗಿ ಭರವಸೆ ಸಿಕ್ಕಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ ಹೋರಾಟಗಾರ ಮಾಣಿಕಪ್ಪ ಪಾಟೀಲ್‌, ಸಮಿತಿಯ ಖಜಾಂಚಿ ಅಮರನಾಥ ಪಾಟೀಲ್‌ ಮೊದಲಾದ ಗಣ್ಯರು ಹಾಜರಿದ್ದರು.

  • ಮುಖಪುಟ / ಇವತ್ತು... ಈ ಹೊತ್ತು...
  • More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+