ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ದಿಕ್ಕು ಗುರ್ತಿ-ಸ-ದ ರಾಜ-ಕಾ-ರ-ಣಿ-ಗ-ಳ ಬಗ್ಗೆ ಮುಖ್ಯ-ಮಂ-ತ್ರಿ ವಿ-ಷಾ-ದ

By Staff
|
Google Oneindia Kannada News

ಬೆಂಗಳೂರು : ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವ ರಾಜ್ಯ ಸರಕಾರದ ಪ್ರಯತ್ನವನ್ನು ವಿರೋಧಿಸುತ್ತಿರುವ ರಾಜಕಾರಣಿಗಳನ್ನು ಮುಖ್ಯ ಮಂತ್ರಿ ಎಸ್‌.ಎಂ. ಕೃಷ್ಣ ಮಂಗ-ಳ-ವಾ-ರ ಟೀಕಿಸಿದ್ದಾರೆ.

ಅ-ವ-ರು, ಆಹಾರ ಸಂಸ್ಕರಣೆಯ ರಾಷ್ಟ್ರೀಯ ನೀತಿ ಸಂಹಿತೆ ಕುರಿತಂತೆ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾಜಿ ಪ್ರದಾನಿ ದೇವೇ ಗೌಡರು ಸರಕಾರದ ಹೈಟೆಕ್‌ ಕ್ರಮಗಳನ್ನು ಟೀಕಿಸಿರುವುದನ್ನು ಪ್ರಸ್ತಾಪಿಸಿದ ಕೃಷ್ಣ , ಆಧುನಿಕ ತಂತ್ರಜ್ಞಾನವಿಲ್ಲದೆ ಆಧುನಿಕ ಜಗತ್ತಿನ ರಾಷ್ಟ್ರಗಳೊಡನೆ ದೇಶ ಸ್ಪರ್ಧಿಸುವುದು ಸಾಧ್ಯವಿಲ್ಲ ಎನ್ನುವುದನ್ನು ನಮ್ಮವರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು. ದೇಶ ಮುಂದೆ ಬರಬೇಕಿದ್ದರೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿರ-ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವು-ದು ತಡವಾದಷ್ಟು ನಾವು ಬೆಳವಣಿಗೆಯ ಮೆಟ್ಟಿಲೇರುವುದರಲ್ಲಿ ಹಿಂದಾಗು-ತ್ತೇವೆ ಎಂದರು.

ಮುಂದುವರೆದ ದೇಶಗಳು ಮತ್ತು ಭಾರತಕ್ಕೆ ಸಾಕಷ್ಟು ಅಂತರವಿದೆ. ಅದನ್ನು ಮುಚ್ಚುವುದಕ್ಕೆ ಹೈಟೆಕ್‌ ಅಗತ್ಯ. ಇದ-ನ್ನು ಅರ್ಥ ಮಾಡಿ-ಕೊ-ಳ್ಳ-ದೆ ದಿಕ್ಕು ತಪ್ಪಿದ ನಮ್ಮ ರಾಜಕೀಯ ನಾಯಕರು ಆಧುನಿಕ ತಂತ್ರಜ್ಞಾನವೆಂದರೆ ಮೂ-ಗು ಮುರಿ-ಯು-ತ್ತಾ-ರೆ. ವಿಶ್ವ ಆರ್ಥಿಕ ಸವಾಲುಗಳನ್ನೆದುರಿಸುವ ಸಂದರ್ಭದಲ್ಲಿ ನಮ್ಮ ರೈತರನ್ನು ಮರೆಯುವುದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಮೆರಿಕಾದಲ್ಲಿ ಶೇ 80ರಷ್ಟು ಆಹಾರ ಸಂಸ್ಕರಣೆಯನ್ನು ಕಾರ್ಖಾನೆಗಳು ನಡೆಸುತ್ತಿವೆ. ಆದರೆ, ಭಾರತದಲ್ಲಿ ಕೇವಲ ಶೇಕಡಾ ಎರಡು ಕಾರ್ಖಾನೆಗಳು ಮಾತ್ರ ಆಹಾರ ಸಂಸ್ಕರಣೆ ಕಾರ್ಯ ನಡೆಸುತ್ತವೆ ಎಂದರು.

ವಿಶ್ವ ವ್ಯಾಪಾರ ಒಪ್ಪಂದದ ಒತ್ತಡದ ಬಗ್ಗೆ ಮಾತನಾಡಿದ ಮುಖಮಂತ್ರಿಗಳು, ರೈತರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದಲೂ ಆಧುನಿಕ ತಂತ್ರಜ್ಞಾನದತ್ತ ಗಮನ ಹರಿಸುವ ಅಗತ್ಯವಿದೆ, ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ನೋಡಲ್‌ ಏಜೆನ್ಸಿಯನ್ನು ಸ್ಥಾಪಿಸುವ ಅಗತ್ಯವಿದೆ ಎಂದರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X