-ದಾ-ವ-ಣ-ಗೆ-ರೆ ಬಳಿ ರೈಲಿ-ಗೆ ಸಿಕ್ಕಿ ನಾಲ್ವರು ಯುವ-ಕ-ರ ಸಾವು
ದಾವಣಗೆರೆ : ಇಲ್ಲಿನ ದೊಡ್ಡ ಬಾತಿ-ದೊಗ್ಗಳ್ಳಿ ರೈಲ್ವೇ ಲೆವಲಿಂಗ್ ಕ್ರಾಸ್‌ನ ಯಾಂತ್ರಿಕ ಗೇಟ್ ಬಳಿ ಚಲಿಸುವ ರೈಲಿನಡಿ ಸಿಕ್ಕಿ ನಾಲ್ವರು ಯುವಕರು ಮೃತರಾಗಿದ್ದಾರೆ.
20 ವರ್ಷ ವಯಸ್ಸಿನ ಇಬ್ಬರು, 25 ಮತ್ತು 30 ವರ್ಷ ವಯಸ್ಸಿನ ಇಬ್ಬರು ಯುವಕರ ರಕ್ತ ಸಿಕ್ತ ಶವಗಳು ರೈಲ್ವೇ ಟ್ರಾಕ್‌ನಿಂದ ಹದಿನೈದು ಅಡಿ ದೂರದಲ್ಲಿ ಕಂಡು ಬಂದಿದ್ದು , ರೈಲು ಓಡುವ ರಭಸಕ್ಕೆ ಶವಗಳು ದೂರಕ್ಕೆ ಚಿಮ್ಮಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ಪಟ್ಟವರನ್ನು ಗುರುತಿಸುವುದು ಸಾಧ್ಯವಾಗಿಲ್ಲ. ತಲೆಯ ಮೇಲೆ ರೈಲು ಹರಿದಿರುವುದರಿಂದ ಅವರ ಗುರುತು ಹಿಡಿಯುವುದು ಕಷ್ಟವಾಗಿದೆ.
ಈ ಸಾವಿಗೆ ಕಾರಣವಾದ ರೈಲು ಯಾವುದು ಎನ್ನುವುದೂ -ತಿ-ಳಿ-ದು ಬಂದಿಲ್ಲ. ನಾಲ್ಕು ಮಂದಿ ಯುವಕರು ಒಂದೇ ಬಾರಿಗೆ ಸಾವಿಗೀಡಾಗಿರುವುದರಿಂದ ಇದು ಆತ್ಮ ಹತ್ಯೆಯೋ, ಕೊಲೆಯೋ ಅಥವಾ ಅಕಸ್ಮಿಕ ಅಪಘಾತವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಒಬ್ಬನ ಅಂಗಿಯ ಮೇಲೆ ದಾವಣಗೆರೆ ಟೈಲರ್ ಅಂಗಡಿಯ ಹೆಸರಿದ್ದು, ಇದರ ಆಧಾರದಲ್ಲಿ ಮೃತರ ಗುರುತು ಹಚ್ಚುವ ಪ್ರಯತ್ನ ನಡೆಯುತ್ತಿದೆ. ಶವಗಳನ್ನು ದಾವಣಗೆರೆಯ ಸಿ.ಜಿ. ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
(ಇನ್ಫೋ- ವಾ-ರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications