ಮುಗ್ಧ ಜನರನ್ನು ವಂಚಿಸುತ್ತಿದ್ದ ಇಬ್ಬರು ಮಂತ್ರವಾದಿಗಳ ಬಂಧನ
ಬೆಂಗಳೂರು : ದೇವರಿದ್ದಾನೆ ಎನ್ನುವುದಾದರೆ ದೆವ್ವವೂ ಇರಲೇ ಬೇಕು ಎನ್ನುವ ಕೆಲವು ಮಂದಿ, ಮಾಟ ಮಂತ್ರವನ್ನು ನಂಬುವುದೂ ಉಂಟು, ಮಾಟಗಾರರನ್ನು ನಂಬಿ ಕೆಟ್ಟವರೂ ಉಂಟು. ಇಂತಹ ಮೂಢ ನಂಬಿಕೆಯ ಮಂದಿಯನ್ನು ವಂಚಿಸಿ ಲಕ್ಷಾಂತರ ರುಪಾಯಿ ದೋಚಿದ ಇಬ್ಬರು ಮಾಂತ್ರಿಕರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಮಾಟ - ಮಂತ್ರದ ಹೆಸರಲ್ಲಿ ಮುಗ್ಧ ಜನರನ್ನು ವಂಚಿಸಿ ಲಕ್ಷಾಂತರ ರುಪಾಯಿಗಳನ್ನು ದೋಚಿದ್ದ ಈ ಇಬ್ಬರು ಮಂತ್ರವಾದಿಗಳನ್ನು ಬೆಂಗಳೂರು ಚಿಕ್ಕಪೇಟೆಯ ಪೊಲೀಸರು ಬಂಧಿಸಿ, ಅವರಿಂದ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ತಮ್ಮ ಕುಟಿಲ ಕಾರಾಸ್ಥಾನಕ್ಕೆ ಬೆಂಗಳೂರನ್ನೇ ಕೇಂದ್ರವಾಗಿ ಆರಿಸಿಕೊಂಡಿದ್ದ ವಂಚಕ ಮಾಂತ್ರಿಕರು, ದೇಶ - ವಿದೇಶಗಳನ್ನೂ ಸುತ್ತಿ ಬಂದಿದ್ದಾರೆ. ರಾಮಮೂರ್ತಿ ನಗರದಲ್ಲಿ ವಾಸಿಸುತ್ತಿದ್ದ ಈ ಇಬ್ಬರನ್ನು ರೆಡ್ಡಪ್ಪ ಹಾಗೂ ಶಾಮಯ್ಯ ಎಂದು ಗುರುತಿಸಲಾಗಿದೆ. ಈ ಇಬ್ಬರು ನಗರದ ಮುಗ್ಧ ಜನರಿಗೆ, ನಿಮ್ಮ ಮನೆಯಲ್ಲಿ ಮಾಟದ ಕುಡಿಕೆ, ಬೊಂಬೆ ಹೂಳಲಾಗಿದೆ, ನಿಮ್ಮ ಮನೆಯಲ್ಲಿ ದೆವ್ವ ನೆಲೆಸಿದೆ ಎಂದೆಲ್ಲಾ ಹೇಳಿ ನಂಬಿಸಿ, ಅದರ ಪರಿಹಾರಕ್ಕಾಗಿ ಬಲಿ ಕೊಡಬೇಕು, ಹೋಮ ಮಾಡಬೇಕು, ಮಂಡಲ ಹಾಕಬೇಕು ಎಂದೆಲ್ಲಾ ಹೇಳಿ ಅಮಾಯಕರಿಂದ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ ಬೆಳ್ಳಿಯ ಆಭರಣ ಹಾಗೂ ನಗದು ದೋಚುತ್ತಿದ್ದರು ಎನ್ನಲಾಗಿದೆ.
ಆರೋಪಿಗಳಿಂದ ನಾಲ್ಕು ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ತಾವೇ ಮಂತ್ರದ ಮಡಕೆ, ಕುಡಿಕೆ ಹಾಗೂ ಬೊಂಬೆಗಳನ್ನು ಮುಗ್ಧ ಜನರ ಮನೆಯಲ್ಲಿ ಹೂತು, ರಸಾಯನಿಕಗಳನ್ನು ಬಳಸಿ, ಬೆಂಕಿ ಹೊತ್ತಿ ಉರಿಯುವಂತೆ ಮಾಡಿ ಜನರನ್ನು ತಮ್ಮ ಮೋಸದ ಬಲೆಗೆ ಬೀಳುವಂತೆ ಮಾಡುತ್ತಿದ್ದರು.
ಇವರ ವಂಚನೆಗೆ ಬಲಿಯಾದ ಮುಗ್ಧೆಯಾಬ್ಬರ ತಂದೆ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಈ ವಂಚಕ ಮಂತ್ರವಾದಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.ಸಿ.ಪಿ. ನಿಸ್ಸಾರ್ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಪೊಲೀಸರು ಈ ಮಂತ್ರವಾದಿಗಳನ್ನು ಬಂಧಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications