ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟಂ-ಬ-ರ್‌ 28 ರಿಂದ -ನ-ಗ-ರ-ದ-ಲ್ಲಿ ಗಾನ ನಾಟ್ಯ ರಸ-ಧಾ-ರೆ

By Staff
|
Google Oneindia Kannada News

ಬೆಂಗಳೂರು : ಸೆಪ್ಟೆಂಬರ್‌ 29ರಿಂದ ನಾಲ್ಕು ದಿನಗಳ ಕಾಲ ನಗರದ ಚಿತ್ರ ಕಲಾಪರಿಷತ್‌ನಲ್ಲಿ ನಡೆಯಲಿರುವ ಕಲಾ ಮೇಳದ ಸಿದ್ಧತೆಗಾಗಿ 18 ರಾಜ್ಯಗಳ ಸುಮಾರು 140ಕ್ಕೂ ಹೆಚ್ಚು ಮಂದಿ ವಿವಿಧ ಕ್ಷೇತ್ರದಲ್ಲಿ ಪರಿಣತರಾಗಿರುವ ಕಲಾವಿದರು ಮಂಗ-ಳ-ವಾ-ರ ಸಭೆ ಸೇರಲಿದ್ದಾರೆ.

ಮಾಧ್ಯಮ, ಸಭಾ ಮತ್ತು ಚಿತ್ರ ಕಲಾ ಪರಿಷತ್‌ನ ಸಹಯೋಗದಲ್ಲಿ ಕಲಾ ಮೇಳವನ್ನು ಆಯೋಜಿಸಲಾಗಿದೆ. ಮೇಳದ ಸಂದರ್ಭದಲ್ಲಿ ಬೇರೆ ಬೇರೆ ಕಡೆಯಿಂದ ಆಗಮಿಸುವ ವೀಕ್ಷಕರಿಗೆ ಭಾರತದ ನೃತ್ಯ, ನಾಟಕ, ಜನಪದದಂತಹ ಕಲೆ ಮತ್ತು ಸಾಂಸ್ಕೃತಿಕ ವೈವಿಧ್ಯದ ಪರಿಚಯವಾಗುತ್ತದೆ. ದೇಶದ ವಿವಿಧ ರಾಜ್ಯಗಳ ವಿಶೇಷ ನೃತ್ಯ ಪ್ರಕಾರಗಳ ಮತ್ತು ಚಿತ್ರ ಕಲೆಯ ಸೊಗಸನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಕಲಾ ಮೇಳದಲ್ಲಿ ಆಯೋಜಿಸಲಾಗಿದೆ. ಆಯಾ ರಾಜ್ಯಗಳ ಜನಪದ ಕಲಾವಿದರು ಕಾರ್ಯಕ್ರಮದಲ್ಲಿ ತಮ್ಮ ರಾಜ್ಯದ ಜಾನಪದ ಸೊಗಡನ್ನು ಪ್ರತಿ ಸಂಜೆ ಪ್ರದರ್ಶಿಸಲಿದ್ದಾರೆ. ದೇಶದ ಜಾನಪದ ವಿಶೇಷಗಳ ಕುರಿತು ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾಹಿತಿ ಕೇಂದ್ರವನ್ನು ಮೇಳದಲ್ಲಿ ತೆರೆಯಲಾಗುವುದು.

ಮುಂಡಾ ಜನಾಂಗ, ಕುರ್ಮಿಸ್‌, ಸಹಾಜಿಯಾಸ್‌, ತೆರುಕೂತು, ಅಸ್ಸಾಂನ ಬುಡಕಟ್ಟು ಜನಾಂಗ, ರಾಜಾಸ್‌ , ರಾಜಸ್ಥಾನ್‌, ಬಂಗಾಳ, ಚತ್ತೀಸ್‌ಘಡ್‌ ಮತ್ತು ಪಂಜಾಬ್‌ ಪ್ರದೇಶಗಳ ಜಾನಪದ ನೃತ್ಯ ಮತ್ತು ಗೀತೆಗಳು, ಆಂಧ್ರಪ್ರದೇಶದ ವಿಶೇಷ ದಪ್ಪು ಕಾರ್ಯಕ್ರಮ ಕೂಡ ಮೇಳದಲ್ಲಿ ನೋಡುಗರನ್ನು ಸೆಳೆಯಲಿದೆ.

ದೇಶದ ಮೂಲೆ ಮೂಲೆಗಳಲ್ಲಿದ್ದು ಕೊಂಡು ಬೆಳಕಿಗೆ ಬಾರದೇ ನಶಿಸುತ್ತಿರುವ ಜನಪದ ಸೊಗಡನ್ನು ಉಳಿಸಿ, ಮುಂದಿನ ತಲೆಮಾರಿಗೆ ಅದರ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ರಾಷ್ಟ್ರೀಯ ಕಲಾ ಮೇಳವನ್ನು ಆಯೋಜಿಸಲಾಗಿದೆ. ಈ ದೃಷ್ಠಿಯಲ್ಲಿ ಶಾಲಾ ಮಕ್ಕಳನ್ನು ಕೂಡ ಕಾರ್ಯ ಕ್ರಮಕ್ಕೆ ಆಹ್ವಾನಿಸಲಾಗಿದೆ.

ನಾಲ್ಕು ದಿನಗಳ ಸಮ್ಮೇಳನದಲ್ಲಿ ಭಾಗವಹಿಸುವವರು ಜನಪದ ಕಲೆಗಳನ್ನು ಕಲಿಯುವ, ಅವುಗಳಿಗೆ ಈಗಿರುವ ಜನಪ್ರಿಯತೆಯ ಕುರಿತು ತಿಳಿದು ಕೊಳ್ಳುವ ಅವಕಾಶವೂ ಇದೆ. ಕಲಾ ಮೇಳದ ಕುರಿತು ಇನ್ನಷ್ಟು ವಿವರಗಳನ್ನು 080-2281983, 2259766 ನಂಬರ್‌ಗಳಿಗೆ ಫೋನ್‌ ಮಾಡಿ ತಿಳಿದುಕೊಳ್ಳಬುಹುದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X