Get Updates
Get notified of breaking news, exclusive insights, and must-see stories!

‘ಸದ್ಭಾವನೆ - ಪ್ರಾಮಾಣಿಕತೆಯಿಂದ ಬಿಜೆಪಿ ಅಲ್ಪಸಂಖ್ಯಾಕರ ಮನಗೆದ್ದಿದೆ’

ಬೆಂಗಳೂರು : ಎಲ್ಲ ಪಕ್ಷಗಳೂ ಓಟಿಗಾಗಿಯೇ ಅಲ್ಪಸಂಖ್ಯಾಕರ ಮನವೊಲಿಸುತ್ತಿದ್ದರೆ, ಬಿಜೆಪಿ ಸದ್ಭಾವನೆ ಹಾಗೂ ಪ್ರಾಮಾಣಿಕತೆಯಿಂದ ಅಲ್ಪಸಂಖ್ಯಾಕರ ಮನಗೆದ್ದಿದೆ ಎಂದು ಬಿ.ಜೆ.ಪಿ.ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗೋವಿಂದಾಚಾರ್ಯ ಸೋಮವಾರ ಇಲ್ಲಿ ಹೇಳಿದ್ದಾರೆ. ಓಟಿಗಾಗಿ ಮಾತ್ರ ಮುಸ್ಲಿಂರನ್ನು ಓಲೈಸುವ ನೀತಿಯನ್ನು ಎಂದೂ ಭಾರತೀಯ ಜನತಾಪಕ್ಷ ಅನುಸರಿಸಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ವಿಶೇಷ ಸಭೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಜಾತ್ಯತೀತ ಪಕ್ಷಗಳೆಂದು ಹೇಳಿಕೊಳ್ಳುತ್ತಿರುವ ಇತರ ಪಕ್ಷಗಳಂತೆ ತಮ್ಮನ್ನು ಓಟ್‌ ಬ್ಯಾಂಕ್‌ ಎಂದು ಬಿಜೆಪಿ ಪರಿಗಣಿಸುತ್ತಿಲ್ಲ ಎಂಬ ಅಂಶ ಮುಸ್ಲಿಂರಿಗೆ ಮನವರಿಕೆ ಆಗುತ್ತಿದೆ. ಅವರು ಇತರ ಪಕ್ಷಗಳಿಂದ ಭ್ರಮನಿರಸನಗೊಂಡಿದ್ದಾರೆ. ಆದ್ದರಿಂದ ಅವರ ಒಲವು ಬಿಜೆಪಿ ಕಡೆ ಹರಿಯುತ್ತಿದೆ ಎಂದು ಹೇಳಿದ್ದಾರೆ.

ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮುಸ್ಲಿಂರು ಬಿಜೆಪಿಯಾಂದಿಗೆ ಕೈಜೋಡಿಸುತ್ತಿದ್ದಾರೆ. ಹೀಗಿದ್ದರೂ ಪಕ್ಷ ತನ್ನ ಮೂಲಭೂತ ವಿಚಾರಧಾರೆಯಿಂದ ಹಿಂದೆ ಸರಿದಿಲ್ಲ ಎಂದು ಹೇಳಿರುವ ಅವರು ಬಂಗಾರು ಲಕ್ಷ್ಮಣ್‌ ಅವರು ಪಕ್ಷದ ಅಧ್ಯಕ್ಷರಾಗಿ ತಮ್ಮ ಸ್ವಂತ ವರ್ಚಸ್ಸಿನಿಂದ ಆಯ್ಕೆಯಾಗಿದ್ದಾರೆ. ಆವರ ಆಯ್ಕೆ ಜಾತಿಯನ್ನು ಅವಲಂಬಿಸಿಲ್ಲ ಎಂದು ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

ಮೈತ್ರಿಯಿಂದ ಬಿಜೆಪಿಗೆ ಹಿನ್ನಡೆ : ಜನತಾದಳ (ಸಂ)ದೊಂದಿಗೆ ಕೈಜೋಡಿಸಿದ್ದರಿಂದ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತೆಂದು ಪಕ್ಷದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಹೇಳಿದ್ದಾರೆ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯತೆಗಳಿದ್ದವು ಆದರೆ ರಾಷ್ಟ್ರಮಟ್ಟದಲ್ಲಿ ದಳದೊಂದಿಗೆ ಕೈಜೋಡಿಸಿದ್ದು ಹಿನ್ನಡೆಗೆ ಕಾರಣವಾಯಿತು ಎಂದಿರುವ ಅವರು ಎಲ್ಲ ರಂಗಗಳಲ್ಲಿ ವಿಫಲವಾಗಿರುವ ಕೃಷ್ಣ ಸರಕಾರದ ವಿರುದ್ಧ ಜನ ಜಾಗೃತಿ ಮೂಡಿಸುವುದಾಗಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+